ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಆಗಸ್ಟ್ 15ರವರೆಗೂ ತಾಜ್‌ಮಹಲ್ ತೆರೆಯುವುದಿಲ್ಲ

|
Google Oneindia Kannada News

ಆಗ್ರಾ, ಜುಲೈ 29: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ತಾಜ್‌ಮಹಲ್ ತೆರೆಯುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

DK Shivakumar ಇಂದು ಮಂಗಳಮುಖಿಯರ ಕಷ್ಟಕ್ಕೆ ಕಿವಿ ಕೊಟ್ಟರು | Oneindia Kannada

ಕೊರೊನಾ ಸೋಂಕನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆಗಸ್ಟ್ 15ಕ್ಕೂ ತೆರೆಯುವುದು ಸತ್ಯ ಅಲ್ಲ, ಅದಕ್ಕಿಂತಲೂ ಒಂದೆರೆಡು ವಾರ ವಿಸ್ತರಣೆಯಾಗಬಹುದು.

ಜುಲೈ 6ರಿಂದ ಬಾಗಿಲು ತೆರೆಯಲಿದೆ ತಾಜ್‌ ಮಹಲ್ಜುಲೈ 6ರಿಂದ ಬಾಗಿಲು ತೆರೆಯಲಿದೆ ತಾಜ್‌ ಮಹಲ್

ಜುಲೈ 6 ರಿಂದ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿವೆ ಎಂದು ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದರು. ಹಾಗೆಯೇ ರಾಜ್ಯ ಹಾಗೂ ಜಿಲ್ಲಾಡಳಿತ ಒಪ್ಪಿಗೆ ಮೇರೆಗೆ ತೆರೆಯಲಾಗುತ್ತದೆ ಎಂದು ಹೇಳಿದ್ದರು.

Taj Mahal Unlikely To Reopen Before August 15

ಜುಲೈ 6 ರಂದು 2 ಸಾವಿರಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ತೆರೆಯಲಾಗಿತ್ತು. ಆಗ್ರಾದಲ್ಲಿ ತಾಜ್‌ ಮಹಲ್ ಸೇರಿ ಕೆಲವೇ ಸ್ಮಾರಕಗಳು ಇನ್ನೂ ತೆರೆದಿಲ್ಲ.

ಈ ಪ್ರದೇಶಗಳು ಕಂಟೈನ್ಮೆಂಟ್ ಜೋನ್‌ಗೆ ಒಳಪಡದೆ ಬಫರ್‌ ಜೋನ್‌ನಲ್ಲಿದ್ದರೆ ಈಗಲೇ ತೆರೆಯಲು ಸಮ್ಮತಿ ಸೂಚಿಸುತ್ತೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ನರೇನ್ ಸಿಂಗ್ ತಿಳಿಸಿದ್ದಾರೆ.

ನಗರದಲ್ಲಿ 55 ಹೊಸ ಪ್ರಕರಣಗಳು ಪತ್ತೆಯಾಗಿವೆ. 70 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿವೆ. ಶೀಘ್ರವೇ ಹೊಸ ನಿಯಮಗಳು ಬರಲಿವೆ.ಮುಂದಿನ 2-4 ವಾರಗಳ ಕಾಲ ಸ್ಮಾರಕಗಳನ್ನು ತೆರೆಯದೇ ಇರಲು ನಿರ್ಧರಿಸಲಾಗಿದೆ.

English summary
The restrictions on travel and movement are set to be eased on August 1, but the Taj Mahal and other monuments in Agra are unlikely to be opened for visitors any time soon due to the number of cases in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X