ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1991ರ ಆರ್ಥಿಕ ಬಿಕ್ಕಟ್ಟು ಮರುಕಳಿಸದು : ಸಿಂಗ್

|
Google Oneindia Kannada News

ನವದೆಹಲಿ, ಆ.17 : ದೇಶದಲ್ಲಿ 1991ರ ಆರ್ಥಿಕ ಬಿಕ್ಕಟ್ಟು ಪುನರಾವರ್ತನೆಯಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ. ಆರ್ಥಿಕ ಜಾಗತೀಕರಣದಿಂದ ವಿಮುಖರಾಗುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಆರ್ ಬಿಐನ ಹಿನ್ನೋಟ ಮತ್ತು ಮುನ್ನೋಟ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, 1991ರಲ್ಲಿ ದೇಶದ ವಿದೇಶಿ ವಿನಿಮಯ ದರ ನಿಗದಿತವಾಗಿತ್ತು. ಇಂದಿನ ಪರಿಸ್ಥಿತಿ ಬದಲಾವಣೆ ಆಗಿದೆ ಎಂದರು.

Manmohan Singh

ಭಾರತದಲ್ಲಿ ವಿದೇಶಿ ವಿನುಮಯ ದರ ಇಂದು ಮಾರುಕಟ್ಟೆಯನ್ನು ಅವಲಂಭಿಸಿದೆ. ರೂಪಾಯಿ ಮೌಲ್ಯ ಅಪಮೌಲ್ಯವಾಗುವುದನ್ನು ತಡೆದರೆ, ಆರ್ಥಿಕ ಬಿಕ್ಕಟ್ಟು ಉಂಟಾಗುವುದಿಲ್ಲ. ಸರ್ಕಾರ ರೂಪಾಯಿ ಅಪಮೌಲ್ಯ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಚಿನ್ನದ ಆಮದು ಮತ್ತು ಅನುತ್ಪಾದಕ ವಸ್ತುಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವುದರಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಆದರೆ, 1991ರ ಬಿಕ್ಕಟ್ಟು ಪುನರಾವರ್ತನೆ ಆಗುವುದಿಲ್ಲ ಎಂದು ಪ್ರಧಾನಿ ವಿಶ್ಲೇಷಿಸಿದರು.

ಜಾಗತೀಕರಣದ ಕಾಲಘಟ್ಟದಲ್ಲಿ ಆರ್ ಬಿಐನ ಹಣಕಾಸು ನೀತಿಗಳ ಕುರಿತಂತೆ ಕೆಲವು ಹೊಸ ಚಿಂತನೆಗಳನ್ನು ನಡೆಸಬೇಕಾಗಿದೆ. ಬೃಹತ್ ಆರ್ಥಿಕ ನೀತಿಗಳ ಕುರಿತಂತೆ ಆರ್ ಬಿಐ ಹೊಂದಿರುವ ನಿಯಂತ್ರಣದಿಂದ ಆರ್ಥಿಕ ಮುಗ್ಗಟ್ಟು ಎದುರಾಗಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

English summary
Prime Minister Manmohan Singh ruled out the possibility of India witnessing a repeat of the 1991 balance of payments crisis and also reversing the path to globalization of the economy. On Saturday, August 17, he address media in New Delhi and said, There is no no question of going back to1991 balance of payment crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X