ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರದ ರಾಷ್ಟ್ರೀಯತೆಯು ಬ್ರಿಟಿಷರ ಒಡೆದು ಆಳುವ ನೀತಿಯಂತಿದೆ: ಮನ್‌ಮೋಹನ್ ಸಿಂಗ್

|
Google Oneindia Kannada News

ಚಂಡೀಗಢ, ಫೆಬ್ರವರಿ 17: ಪಂಜಾಬ್ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಪ್ರಚಾರದ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಪಂಜಾಬ್‍ನಲ್ಲಿ ರ‍್ಯಾಲಿ ನಡೆಸುತ್ತಿದ್ದರೆ, ಇತ್ತ ದೆಹಲಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರದ ರಾಷ್ಟ್ರೀಯತೆಯು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಆಧರಿಸಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಭದ್ರತೆ ವಿಚಾರದಲ್ಲಿ ಪಂಜಾಬ್ ಸರ್ಕಾರವನ್ನು ಟಾರ್ಗೆಟ್ ಮಾಡುವ ಮೂಲಕ ಪಂಜಾಬ್ ಜನರನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಭಯದ ವಾತಾವರಣ ಮರುಕಳಿಸಿದೆ: ಮನಮೋಹನ್ ಸಿಂಗ್ಅಸ್ಸಾಂನಲ್ಲಿ ಭಯದ ವಾತಾವರಣ ಮರುಕಳಿಸಿದೆ: ಮನಮೋಹನ್ ಸಿಂಗ್

ಚುನಾವಣೆ ಹಿನ್ನೆಲೆ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಆಡಳಿತ ವೈಫಲ್ಯ ಕಂಡಿದೆ. ಈ ಸರ್ಕಾರದಲ್ಲಿ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗುತ್ತಿದ್ದು, ಈ ಸರ್ಕಾರಕ್ಕೆ ಆರ್ಥಿಕ ನೀತಿಯ ಬಗ್ಗೆ ತಿಳುವಳಿಕೆಯೇ ಇಲ್ಲ ಎಂದು ಹರಿಹಾಯ್ದಿದ್ದಾರೆ.

BJP’s Nationalism Based On Britishers Divide And Rule Policy: Manmohan Singh

ವಿದೇಶಾಂಗ ನೀತಿಯಲ್ಲೂ ಈ ಸರ್ಕಾರ ವಿಫಲವಾಗಿದೆ. ಚೀನಾ ನಮ್ಮ ಗಡಿಯಲ್ಲಿ ಕುಳಿತಿದೆ. ಇದನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳಿಗೆ ಅಪ್ಪುಗೆ ನೀಡುವುದರಿಂದ ಅಥವಾ ಆಹ್ವಾನವಿಲ್ಲದೆ ಬಿರಿಯಾನಿ ತಿನ್ನಲು ಹೋಗುವುದರಿಂದ ಸಂಬಂಧಗಳು ಸುಧಾರಿಸುವುದಿಲ್ಲ ಎಂದು ನರೇಂದ್ರ ಮೋದಿ ಅವರನ್ನು ಕುಟುಕಿದ್ದಾರೆ.

ಆಲಿಂಗನದಿಂದ ಸಂಬಂಧ ಮತ್ತು ಬಾಂಧವ್ಯಗಳು ಉತ್ತಮವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರಕ್ಕೆ ತಿವಿದಿದ್ದಾರೆ. 'ಜನರು ನಮ್ಮ (ಕಾಂಗ್ರೆಸ್) ಒಳ್ಳೆಯ ಕೆಲಸವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರು (ಬಿಜೆಪಿ) ಪ್ರಧಾನಿ ಮೋದಿಯವರ ಭದ್ರತೆಯ ವಿಷಯದಲ್ಲಿ ಪಂಜಾಬ್ ಸಿಎಂ ಮತ್ತು ರಾಜ್ಯದ ಜನರನ್ನು ಅವಮಾನಿಸಲು ಪ್ರಯತ್ನಿಸಿದರು ಎಂದು ಹೇಳಿದರು.

ಆಮ್ ಆದ್ಮಿ ಪಕ್ಷವು ಕಾಂಗ್ರೆಸ್‌ನ ತದ್ರೂಪಿ ಎಂದ ಮೋದಿಆಮ್ ಆದ್ಮಿ ಪಕ್ಷವು ಕಾಂಗ್ರೆಸ್‌ನ ತದ್ರೂಪಿ ಎಂದ ಮೋದಿ

ಅಂತೆಯೇ ಮೋದಿ ಸರ್ಕಾರದಲ್ಲಿ ಬಡವರು ಬಡವರಾಗುತ್ತಿರುವಾಗ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಅವರಿಗೆ (ಬಿಜೆಪಿ ನೇತೃತ್ವದ ಸರ್ಕಾರಕ್ಕೆ) ಆರ್ಥಿಕ ನೀತಿಯ ಬಗ್ಗೆ ತಿಳುವಳಿಕೆ ಇಲ್ಲ, ಈ ವಿಷಯ ರಾಷ್ಟ್ರಕ್ಕೆ ಸೀಮಿತವಾಗಿಲ್ಲ, ವಿದೇಶಾಂಗ ನೀತಿಯಲ್ಲೂ ಈ ಸರ್ಕಾರ ವಿಫಲವಾಗಿದೆ, ಚೀನಾ ನಮ್ಮ ಗಡಿಯಲ್ಲಿ ಕುಳಿತಿದೆ. ಅದನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.. ಎಂದು ಕಿಡಿಕಾರಿದ್ದಾರೆ.

"ರಾಜಕಾರಣಿಗಳಿಗೆ ಅಪ್ಪುಗೆ ನೀಡುವುದರಿಂದ ಅಥವಾ ಆಹ್ವಾನವಿಲ್ಲದೆ ಬಿರಿಯಾನಿ ತಿನ್ನುವುದರಿಂದ ಸಂಬಂಧಗಳು ಸುಧಾರಿಸುವುದಿಲ್ಲ. ಅವರ (ಬಿಜೆಪಿ ಸರ್ಕಾರದ) ರಾಷ್ಟ್ರೀಯತೆಯು ಬ್ರಿಟನ್‌ನ ಒಡೆದು ಆಳುವ ನೀತಿಯನ್ನು ಆಧರಿಸಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಸಿಂಗ್ ಕಿಡಿಕಾರಿದ್ದಾರೆ.

ಇಂದಿನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಕೊರೋನಾ ಪ್ರಭಾವದ ನಡುವೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಕೊರತೆಯಿಂದಾಗಿ, ಒಂದು ಕಡೆ ಆರ್ಥಿಕ ಕುಸಿತ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಜನರು ತೊಂದರೆಗೀಡಾಗಿದ್ದಾರೆ. ಇನ್ನೊಂದು ಕಡೆ ನಮ್ಮ ಇಂದಿನ ಆಡಳಿತಗಾರರು ಏಳೂವರೆ ವರ್ಷಗಳ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಜನರ ಸಮಸ್ಯೆಗಳಿಗೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಪ್ರಧಾನ ಮಂತ್ರಿ ಹುದ್ದೆಗೆ ವಿಶೇಷವಾದ ಘನತೆ ಇದೆ. ಇತಿಹಾಸವನ್ನು ದೂಷಿಸುವ ಮೂಲಕ ತಮ್ಮ ಕರ್ತವ್ಯ ಲೋಪಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡಿದ ನನಗೆ ನಾನೇ ಹೆಚ್ಚು ಮಾತನಾಡುವುದಕ್ಕಿಂತ ನನ್ನ ಕೆಲಸದ ಬಗ್ಗೆ ಮಾತನಾಡಲು ಆದ್ಯತೆ ನೀಡಿದ್ದೇನೆ.

ನಾವು ಎಂದಿಗೂ ನಮ್ಮ ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ. ಸತ್ಯವನ್ನು ಮುಚ್ಚಿಡಲು ಎಂದಿಗೂ ಪ್ರಯತ್ನಿಸಲಿಲ್ಲ. ದೇಶದ ಘನತೆ ಮತ್ತು ಹುದ್ದೆಯನ್ನು ಎಂದಿಗೂ ಕಡಿಮೆ ಮಾಡಲು ಬಿಡಲಿಲ್ಲ. ಎಲ್ಲ ಕಷ್ಟಗಳ ನಡುವೆಯೂ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಭಾರತೀಯರ ಮೌಲ್ಯವನ್ನು ಹೆಚ್ಚಿಸಿದ್ದೇವೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ಮತ್ತು ಅದರ ಬಿ-ಸಿ ಟೀಮ್‌ಗಳು ನನ್ನ ಬಗ್ಗೆ 'ಮೌನಿ', ದುರ್ಬಲ ಮತ್ತು ಭ್ರಷ್ಟಾಚಾರಿ ಎಂದು ಮಾಡಿದ್ದ ಅಪಪ್ರಚಾರ ಇಂದು ದೇಶದ ಮುಂದೆ ಬಯಲಾಗಿದೆ. 2004 ರಿಂದ 2014ರ ಅವಧಿಯಲ್ಲಿ ನಾವು ಮಾಡಿದ ಉತ್ತಮ ಕೆಲಸವನ್ನು ದೇಶವು ನೆನಪಿಸಿಕೊಳ್ಳುತ್ತದೆ ಎಂದು ನನಗೆ ತೃಪ್ತಿ ಇದೆ. ಕೆಲವು ದಿನಗಳ ಹಿಂದೆ ಪ್ರಧಾನಿ ಭದ್ರತೆಯ ಹೆಸರಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಸರ್ದಾರ್ ಚರಂಜಿತ್ ಸಿಂಗ್ ಚನ್ನಿ ಅವರ ಮಾನಹಾನಿ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು.

ಇದು ಯಾವುದೇ ವಿಷಯದಲ್ಲಿ ಸರಿಯಾದ ಆಚರಣೆ ಎಂದು ಪರಿಗಣಿಸಲಾಗುವುದಿಲ್ಲ. ಅದೇ ರೀತಿ ರೈತ ಚಳವಳಿಯ ಸಂದರ್ಭದಲ್ಲಿಯೂ ಪಂಜಾಬ್ ಮತ್ತು ಪಂಜಾಬಿಯತ್ ಅನ್ನು ದೂಷಿಸುವ ಪ್ರಯತ್ನಗಳು ನಡೆದಿರುವುದನ್ನು ನಾವು ನೋಡಿದ್ದೇವೆ.

ಅವರ ಧೈರ್ಯ, ಶೌರ್ಯ, ದೇಶಭಕ್ತಿ ಮತ್ತು ತ್ಯಾಗಕ್ಕೆ ಇಡೀ ಜಗತ್ತೇ ಸೆಲ್ಯೂಟ್ ಮಾಡುವ ಪಂಜಾಬಿಗಳ ಬಗ್ಗೆ ಏನು ಹೇಳಿಲ್ಲ. ಪಂಜಾಬ್‌ನ ಕೆಚ್ಚೆದೆಯ ಮಣ್ಣಿನಿಂದ ಹುಟ್ಟಿದ ನಿಜವಾದ ಭಾರತೀಯನಾಗಿ ಇಡೀ ಘಟನೆಯಿಂದ ನನಗೆ ನೋವಾಗಿದೆ ಎಂದಿದ್ದಾರೆ.

Recommended Video

ಮದುವೆ ನೆಪ ಹೇಳಿ RCB ಗೆ ಕೈ ಕೊಟ್ಟ ಗ್ಲೆನ್ ಮ್ಯಾಕ್ಸ್ ವೆಲ್ | Oneindia Kannada

English summary
Former prime minister Manmohan Singh Thursday issued a video message for the people of Punjab ahead of the February 20 Assembly Elections and targeted the Bharatiya Janata Party-led government at the Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X