ಗ್ಯಾಸ್ ಸಿಲಿಂಡರ್ ಇಲ್ಲದೆ ಮದುವೆಗೂ ಎದುರಾಯ್ತು ಸಮಸ್ಯೆ, ಗಂಡಿನ ಮನೆಯವರ ಒದ್ದಾಟ... LPG Shortage

ಗ್ಯಾಸ್ ಇಲ್ಲ.. ಗ್ಯಾಸ್ ಇಲ್ಲ.. ಗ್ಯಾಸ್ ಇಲ್ಲ.. ಎಲ್ಲಿ ಕೇಳಿದರೂ ಈಗ ಗ್ಯಾಸ್ ಸಿಲಿಂಡರ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಗ್ಯಾಸ್ ಸಿಲಿಂಡರ್ ಇಲ್ಲದೆ ಜೀವನ ನಡೆಯೋದೆ ಇಲ್ಲ, ಭಾರತದ ಪ್ರತಿ ಮನೆಗಳಲ್ಲೂ ಎಲ್‌ಪಿಜಿ ಅತ್ಯವಶ್ಯಕ ವಸ್ತುವಾಗಿದೆ. ಆದರೆ ಇರಾನ್ ಹಾಗೂ ಅಮೆರಿಕ ನಡುವೆ ಶುರುವಾದ ಭೀಕರ ಯುದ್ಧದ ಪರಿಣಾಮ ಇದೀಗ ಎಲ್‌ಪಿಜಿ ಪೂರೈಕೆಗೆ ಬ್ರೇಕ್ ಬಿದ್ದು ದೊಡ್ಡ ಮಟ್ಟದ ಸಮಸ್ಯೆ ಎದುರಾಗಿ, ಜನ ಸಾಮಾನ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಲ್ಲದೇ ಮದುವೆ ಆಗುತ್ತಿರುವ ಗಂಡು & ಹೆಣ್ಣು ಗ್ಯಾಸ್ ಸಿಲಿಂಡರ್ ಬಗ್ಗೆ ಚಿಂತಿಸುವ ರೀತಿ ಆಗಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಒಂದು ಪೋಸ್ಟ್ ಫುಲ್ ವೈರಲ್ ಆಗುತ್ತಿದೆ.

ಸಂಗೀತಾ ಕಂಡವೇಲ್ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವಂತೆ ಈಗ, ಮುಂದಿನ ವಾರ ನನ್ನ ಸ್ನೇಹಿತ ಮದುವೆ ಆಗಲಿದ್ದಾನೆ. ಆದರೆ ಅಡುಗೆ ಕಾಂಟ್ರಾಕ್ಟ್ ಪಡೆದವರು ವಿಚಿತ್ರ ಮನವಿ ಮಾಡಿರುವುದು ವರನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪೂರೈಕೆಯ ಅಡಚಣೆಗಳಿಂದ ಎಲ್‌ಪಿಜಿಯ ಸಮಸ್ಯೆ ಉಂಟಾಗಿದ್ದು, ಮದುವೆ ಆಗುತ್ತಿರುವ ಕುಟುಂಬ ಸದಸ್ಯರಿಗೇ ಈಗ ಸಿಲಿಂಡರ್ ಹೊಂದಿಸಿಕೊಳ್ಳಿ ಎಂಬ ಮನವಿ ಮಾಡಿದ್ದಾರೆ ಕ್ಯಾಟರಿಂಗ್ ಅವರು.

LPG Shortage

ಇದನ್ನೆಲ್ಲಾ ನೋಡುತ್ತಿದ್ದರೆ ಮುಂಬರುವ ದಿನಗಳಲ್ಲಿ ಸಾಲು ಸಾಲು ಮುಹೂರ್ತ ನಡೆಯಲಿವೆ, ಅಡುಗೆ ತಂಡಗಳು ಸಂಕಷ್ಟದಲ್ಲಿವೆ ಎಂದು ತಮ್ಮ ಸ್ನೇಹಿತ ಪಡುತ್ತಿರುವ ಕಷ್ಟದ ಬಗ್ಗೆ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ ಸಂಗೀತಾ ಕಂಡವೇಲ್. ಈಗ ಈ ಪೋಸ್ಟ್ ವೈರಲ್ ಆಗುವ ಜೊತೆಗೆ ಸಾಕಷ್ಟು ದೊಡ್ಡ ಪ್ರಮಾಣದ ಚರ್ಚೆ ಕೂಡ ನಡೆಯುತ್ತಿದೆ. ಭಾರತದಲ್ಲಿ ಎಲ್‌ಪಿಜಿ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಹೋಟೆಲ್ ಉದ್ಯಮ ಮಾತ್ರವಲ್ಲ ಸಾಮಾನ್ಯ ಜನರಿಗೂ ಸಮಸ್ಯೆ ಎದುರಾಗುತ್ತಿದೆ ಈಗ.

ಪರಿಸ್ಥಿತಿ ನಿಭಾಯಿಸಲು ಕಠಿಣ ಕ್ರಮ

ಈಗಾಗಲೇ ಕೇಂದ್ರ ಸರ್ಕಾರ ಕೂಡ ಗ್ಯಾಸ್ ಕೊರತೆ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಹಲವು ರೀತಿ ಕ್ರಮ ಕೈಗೊಂಡಿದೆ. ಪ್ರಮುಖವಾಗಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗೆ ಈಗ ಬ್ರೇಕ್ ಹಾಕಿ, ಸರಬರಾಜು ನಿಲ್ಲಿಸಲಾಗಿದೆ. ಗೃಹ ಬಳಕೆ ಗ್ಯಾಸ್ ವಿತರಣೆಗೆ ಮೊದಲ ಆದ್ಯತೆ ನೀಡಲು ಸೂಚಿಸಲಾಗಿದ್ದು, ಇದೇ ಕಾರಣಕ್ಕೆ ಹೋಟೆಲ್ ಹಾಗೂ ಕ್ಯಾಟರಿಂಗ್ ಸೇವೆ ಒದಗಿಸುವ ಸಂಸ್ಥೆಗಳು ಪರದಾಡುತ್ತಿವೆ. ಮತ್ತೊಂದು ಕಡೆ ಹಲವು ಕಡೆ ಮದುವೆ ಹಾಗೂ ಶುಭ ಸಮಾರಂಭ ಕೂಡ ಮುಂದೂಡಲಾಗಿದೆ. ಹಾಗೇ ಪರಿಸ್ಥಿತಿ ಇನ್ನೂ ಕಠಿಣ ಹಂತಕ್ಕೆ ತಲುಪುವ ಸಾಧ್ಯತೆ ಕೂಡ ಇದೆ. ಈಗಾಗಲೇ ಬೆಂಗಳೂರು, ಮುಂಬೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಹೋಟೆಲ್ ಬಾಗಿಲು ಮುಚ್ಚಲಾಗುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಇಲ್ಲದೆ ಆಹಾರ ತಯಾರಿಕೆ ಕೂಡ ಕಷ್ಟವಾಗುತ್ತಿದೆ.

ಭಾರತಕ್ಕೆ ಸಿಕ್ಕಿದೆ ದೊಡ್ಡ ಗೆಲುವು!

ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಕೊರತೆ ಬಗ್ಗೆ ಚರ್ಚೆ ನಡೆಯುವಾಗಲೇ ಭರ್ಜರಿ ಸುದ್ದಿಯೂ ಸಿಕ್ಕಿದೆ. ದೆಹಲಿ ನಡೆಸಿದ ಸಂಧಾನಕ್ಕೆ ಜೈ ಎಂದಿರುವ ತೆಹ್ರಾನ್, ಭಾರತದ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ದಾರಿ ಸುಗಮಗೊಳಿಸಿದೆ. ಮಾತುಕತೆ ನಂತರ ಪುಷ್ಪಕ್ & ಪರಿಮಲ್ ಸುರಕ್ಷಿತ ಮಾರ್ಗವನ್ನು ಪಡೆದುಕೊಂಡಿದ್ದು, ಮುಂಬೈನಲ್ಲಿ ಸುರಕ್ಷಿತವಾಗಿ ಬಂದರು ತಲುಪಿವೆ. ಇದು ಅಮೆರಿಕ ಮತ್ತು ಮಿತ್ರ ದೇಶಗಳ ಕಣ್ಣು ಕೆಂಪಾಗಿಸಿದ್ದರೂ, ಭಾರತಕ್ಕೆ ಮಾತ್ರ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ. ಹೀಗಾಗಿ ಆದಷ್ಟು ಬೇಗ ಗ್ಯಾಸ್ ಕೊರತೆ ಸಮಸ್ಯೆ ಕೂಡ ಬಗೆಹರಿಯುವ ನಿರೀಕ್ಷೆ ಈಗ ಮೂಡಿದೆ. ಆದರೆ ಇನ್ನೊಂದು ಕಡೆ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ದೊಡ್ಡದಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+