ಕಾಂಗ್ರೆಸ್ ಅವಧಿಯ ₹48,20,69,00,00,000 ಭಾರೀ ಹಗರಣಗಳ ಕಾಂಗ್ರೆಸ್ ಫೈಲ್ ವಿಡಿಯೋ ಹಂಚಿಕೊಂಡ ಬಿಜೆಪಿ
ನವದೆಹಲಿ, ಏಪ್ರಿಲ್ 02: ದಶಕಗಳ ಕಾಲ ಭಾರತದ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಆಗಿರುವ ಅನೇಕ ಹಗರಣಗಳನ್ನು ಬಿಜೆಪಿ ಬಹಿರಂಗಪಡಿಸುವ ಮೂಲಕ ಕಟುವಾಗಿ ವಾಗ್ದಾಳಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿಯು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವರ ನೃತೃತ್ವದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಹಗರಣಗಳ 'ಕಾಂಗ್ರೆಸ್ ಫೈಲ್ಸ್' ಎಂಬ ವಿಡಿಯೋ ಸರಣಿಯನ್ನು ಬಿಡುಗಡೆ ಭಾನುವಾರ ಮಾಡಿದೆ.

ಬಿಜೆಪಿ ತನ್ನ ಅಧಿಕೃತ ಟ್ವೀಟರ್ ಹ್ಯಾಂಡಲ್ ನಲ್ಲಿ ಕಾಂಗ್ರೆಸ್ ಹಗರಣ-ಲೂಟಿಟಗಳ ವಿಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಯುಪಿಎ ಸರ್ಕಾರದ ಅವಧಿಯಲ್ಲಿ ಅತಿರೇಕದ ಭ್ರಷ್ಟಾಚಾರವನ್ನು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಹೊರಗೆಡವಿದೆ.
ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಆದ 2g ಹಗರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ವಿವಿಧ ಹಗರಣಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿರುವ 3 ನಿಮಿಷಗಳ ವಿಡಿಯೋ ಕ್ಲಿಪ್ ಇದಾಗಿದೆ. ಅದರಲ್ಲಿ ಕಾಂಗ್ರೆಸ್ (UPA Govt) ಅವಧಿಯಲ್ಲಿ ನಡೆದಿತ್ತು ಎನ್ನಲಾಗಿರುವ ₹48,20,69,00,00,000 ಮೌಲ್ಯದ ಹಗರಣಗಳನ್ನು ಪಟ್ಟಿ ಮಾಡಿ ಜನರ ಮುಂದೆ ಇಡಲಾಗಿದೆ.
Congress Files के पहले एपिसोड में देखिए, कैसे कांग्रेस राज में एक के बाद एक भ्रष्टाचार और घोटाले हुए… pic.twitter.com/vAZ7BDZtFi
— BJP (@BJP4India) April 2, 2023
ಬಿಜೆಪಿಯು 'ಕಾಂಗ್ರೆಸ್ ಪಕ್ಷವೆಂದರೇ ಭ್ರಷ್ಟಾಚಾರ' ಎಂಬ ಶೀರ್ಷಿಕೆ ಅಡಿಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ಸಾರ್ವಜನಿಕರಿಂದ ₹48,20,69,00,00,000 ಹಣವನ್ನು ಲೂಟಿ ಮಾಡಿದೆ. ಅಷ್ಟು ಪ್ರಮಾಣದ ಹಣವನ್ನು ಕಾಂಗ್ರೆಸ್ ದೇಶದ ಅಭಿವೃದ್ಧಿಗೆ, ಜನಪರ ಯೋಜನೆಗಳಿಗೆ ಉಪಯೋಗ ಮಾಡಿಕೊಳ್ಳಬಹುದಿತ್ತು. ಆದರೆ ಮಾಡಿಲ್ಲ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಜನರ ಹಣ ಕಾಂಗ್ರೆಸ್‌ನವರ ಖಜಾನೆಗೆ
ದೇಶದ ನಾಗರಿಕರು ಬೆವರು ಸುರಿಸಿ ದುಡಿದ ಹಣವನ್ನು ಕಾಂಗ್ರೆಸ್ ಹೇರಳವಾಗಿ ಲೂಟೆ ಹೊಡೆದಿದ್ದನ್ನು ಇಲ್ಲಿ ನೋಡಬಹುದು. ಈ ಪೈಕಿ 1.86 ಲಕ್ಷ ಕೋಟಿ ರೂ ಮೌಲ್ಯದ ಕಲ್ಲಿದ್ದಲು ಹಗರಣ ಕುರಿತು ವಿಡಿಯೋದಲ್ಲಿ ಹೇಳಲಾಗಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಎಂದು ಕಿಡಿ ಕಾರಿದೆ.

ಲೂಟಿ ಹಣದಲ್ಲಿ 300 ರಫೇಲ್ ಜೆಟ್ ಖರೀದಿಸಬಹುದಿತ್ತು
ಕಾಂಗ್ರೆಸ್ ತನ್ನ ಅವಧಿಯಲ್ಲಿ ಲೂಟಿ ಮಾಡಿದ ಹಣದಲ್ಲಿ ಭದ್ರತೆಯಿಂದ ಹಿಡಿದು ದೇಶದ ಅಭಿವೃದ್ಧಿಯವರೆಗೆ ಅನೇಕ ಕೆಲಸಗಳನ್ನು ಮಾಡಬಹುದಿತ್ತು. ಇಷ್ಟೊಂದು ಪ್ರಮಾಣದಲ್ಲಿ ಹಣ ಬಳಸಿ 300 ರಫೇಲ್ ಜೆಟ್‌ಗಳನ್ನೇ ಖರೀದಿಸಬಹುದತ್ತಿ ಎಂದು ಬಿಜೆಪಿ ವಿಡಿಯೋದಲ್ಲಿ ತಿಳಿಸಿದೆ. ಅಷ್ಟೇ ಅಲ್ಲದೇ 24 ಐಎನ್‌ಎಸ್ ವಿಕ್ರಾಂತ್, 1,000 ಮಂಗಲ್ ಮಿಷನ್ ಕೊಳ್ಳಲು ಸಾಧ್ಯವಿತ್ತು. ಆದರೆ ದೇಶಕ್ಕೆ ಆ ಭಾಗ್ಯ ಸಿಗದೇ ಕಾಂಗ್ರೆಸ್‌ನ ಭ್ರಷ್ಟಾಚಾರದ ವೆಚ್ಚ ಭರಿಸಿದೆ. ಹೀಗಾಗಿಯೇ ದೇಶವು ಶಸ್ತ್ರಾಸ್ತ್ರ, ಯುದ್ಧೋಪಕರಣ ವಿಚಾರದಲ್ಲಿ ಹಿಂದಿದಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಈ ಹಿಂದಿನ ಹತ್ತು ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಉಲ್ಲೇಖಿಸಿದ ಬಿಜೆಪಿ, ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಿಇಒ 350 ಕೋಟಿ ರೂ. ಲಂಚ ನೀಡಿರುವ ಬಗ್ಗೆ ಆಪಾದಿಸಲಾಗಿದೆ.
2ಜಿ ಸ್ಪೆಕ್ಟ್ರಂ ಹಗರಣ ₹1.76 ಲಕ್ಷ ಕೋಟಿ, ಕಲ್ಲಿದ್ದಲು ಹಗರಣ ₹1.86 ಲಕ್ಷ ಕೋಟಿ, ಕಾಮನ್‌ವೆಲ್ತ್ ₹70 ಸಾವಿರ ಕೋಟಿ, ಎಂಎನ್‌ಆರ್‌ಇಜಿಎ ₹10 ಲಕ್ಷ ಕೋಟಿ, ಇಟಲಿ ಜತೆಗಿನ ಹೆಲಿಕಾಪ್ಟರ್ ಡೀಲ್‌ನಲ್ಲಿ ₹362 ಕೋಟಿ ಲಂಚ, ₹12 ಕೋಟಿ ಲಂಚ ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ಲಂಚ ಎಂದು ಬಿಜೆಪಿ ವಿಡಿಯೋದಲ್ಲಿ ಉಲ್ಲೇಖಿಸಿದೆ. ಇದು ಸರಣಿಯ ಮೊದಲ ವಿಡಿಯೋ ಎನ್ನಲಾಗುತ್ತಿದೆ. ಬಿಜೆಪಿಯಿಂದ ಇನ್ನೂ ಕೆಲವು ಆರೋಪಗಳ ಹೊತ್ತ ವಿಡಿಯೋ ಬಂದರೂ ಅಚ್ಚರಿ ಇಲ್ಲ.












Click it and Unblock the Notifications