• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋನಿಯಾ ಹೇಳಿದರೆ ಪೊರಕೆ ಸೇವೆಗೂ ಸಿದ್ಧ: ಚರಣದಾಸ

By Srinath
|

ರಾಯಪುರ, ಜೂನ್ 19: ಇದು ಕಾಂಗ್ರೆಸ್ಸಿಗರ ಜಾಯಮಾನ- ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದರೆ ತಾನು ಜಾಡಮಾಲಿಯಾಗಲು ಸಿದ್ಧಹಸ್ತ ಎಂದು ಕೇಂದ್ರದ ನೂತನ ಸಚಿವರೊಬ್ಬರು ತಮ್ಮ ಹಳೆಯ ವರಸೆಯಲ್ಲಿ ಹೇಳಿದ್ದಾರೆ.

ಅವರ ಹೆಸರೇ ಚರಣದಾಸ... ನೂತನ ಹೊಗಳುಭಟ ಕೇಂದ್ರ ಕೃಷಿ ಮತ್ತು ಆಹಾರ ಸಂಸ್ಕರಣೆ ಖಾತೆಯ ಸಹಾಯಕ ಸಚಿವ ಚರಣದಾಸ ಮಹಾಂತ. ಹಾಗಂತ ಇವರೇ ಮೊದಲೂ ಅಲ್ಲ. ಕೊನೆಯವರೂ ಅಲ್ಲ. ಪುರಾತನ ಕಾಂಗ್ರೆಸ್ ಪಕ್ಷದಲ್ಲಿ ಹೊಗಳುಭಟತನ ಪುರಾತನ, ನಿತ್ಯನೂತನ ಎನ್ನಬಹುದು.

ಇಲ್ಲಿ ಒಂದು ವಿಷಯ ಹೇಳಲೇಬೇಕು ನಾಡಿನ ದೊರೆ, ಸಮಾಜವಾದಿ ಸಿದ್ದರಾಮಯ್ಯ ಅವರ ತಮ್ಮ ಚೊಚ್ಚಲ ಸಂಪುಟ ವಿಸ್ತರಣೆ ವೇಳೆ... ಕೆಲ ಆಂಜನೇಯರು ಸಿದ್ದು ಕಾಲಿಗೆ ಬೀಳುವುದಕ್ಕೆ ಮುಂದಾದಾಗ ಅದಕ್ಕೆ ಬಿಲ್ಕುಲ್ ಒಪ್ಪದ ಸಿದ್ದು, ಅವರ ಮೈದಡವಿ, ವ್ಯಕ್ತಿಪೂಜೆ ಸಲ್ಲದು ಎಂದು ಅಂಟುಜಾಡ್ಯವನ್ನು ಝಾಡಿಸಿದ್ದರು.

ಗ್ಯಾನಿ ಜೈಲ್‌ ಸಿಂಗ್‌ ಇಂದಿರಾ ಮುಖಸ್ತುತಿ

ಗ್ಯಾನಿ ಜೈಲ್‌ ಸಿಂಗ್‌ ಇಂದಿರಾ ಮುಖಸ್ತುತಿ

ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‌ ಸಿಂಗ್‌ ಅವರೂ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡಾಗ 1982ರಲ್ಲಿ ಹೀಗೇ ಇಂದಿರಾ ಗಾಂಧಿಯ ಮುಖಸ್ತುತಿ ಮಾಡಿದ್ದರು.

 ಸೋನಿಯಾ ದಾಸರಾಗಿ ಪೊರಕೆ ಸೇವೆ

ಸೋನಿಯಾ ದಾಸರಾಗಿ ಪೊರಕೆ ಸೇವೆ

ಈಗ ಸಚಿವ ಎನ್. ಚರಣದಾಸರು ಸೋನಿಯಾ ದಾಸರಾಗಿ ಪೊರಕೆ ಸೇವೆ ಸಲ್ಲಿಸಲು ಸಾರ್ವಜನಿಕವಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಮೇಡಂ ಸೋನಿಯಾ ಅವರು ಗ್ರೀನ್ ಸಿಗ್ನಲ್ ನೀಡಿದಂತಿಲ್ಲ. 2 ವರ್ಷಗಳ ಹಿಂದೆ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಪ್ರಾಪ್ತಿಯಾಗಿದೆ.

ಚರಣದಾಸರು CGPCC ಅಧ್ಯಕ್ಷರಾಗಿಯೂ ನೇಮಕ

ಚರಣದಾಸರು CGPCC ಅಧ್ಯಕ್ಷರಾಗಿಯೂ ನೇಮಕ

ಚರಣದಾಸರು ಇತ್ತೀಚೆಗೆ ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿಯೂ (CGPCC) ನೇಮಕಗೊಂಡಿದ್ದಾರೆ. ಹಾಗಾಗಿ ಸೋನಿಯಾ ಗಾಂಧಿ 'ಪೊರಕೆ ಎತ್ತಿಕೊಂಡು ಛತ್ತೀಸ್‌ ಗಢದ ಕಾಂಗ್ರೆಸ್‌ ಕಚೇರಿಯನ್ನು ಗುಡಿಸು' ಎಂದು ಕಣ್ಸನ್ನೆಯಲಿ ಹೇಳಿದರೆ ಸಾಕು ನಾನು ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸುತ್ತೇನೆ ಎಂದು ಕೇಂದ್ರ ಸಚಿವ ಮಹಾಂತ ಹೇಳಿದ್ದಾರೆ.

CGPCC ಹಿಂದಿನ ಸಾರಥಿ ನಂದಕುಮಾರ್ ಪಟೇಲ್

CGPCC ಹಿಂದಿನ ಸಾರಥಿ ನಂದಕುಮಾರ್ ಪಟೇಲ್

CGPCC ಹಿಂದಿನ ಸಾರಥಿ ನಂದಕುಮಾರ್ ಪಟೇಲ್ ಅವರನ್ನು ಕೆಂಪು ಉಗ್ರರು ಕಳೆದ ತಿಂಗಳು (ಮೇ 25) ದಾರುಣವಾಗಿ ಹತ್ಯೆ ಮಾಡಿದ್ದರು. ಹಾಗಾಗಿ ಅವರ ಸ್ಥಾನಕ್ಕೆಚರಣದದಾಸ ಮಹಾಂತರನ್ನು ನೇಮಕ ಮಾಡಲಾಗಿದೆ.

 ಚರಣದದಾಸ್ Korba ಲೋಕಸಭಾ ಸಂಸದರು

ಚರಣದದಾಸ್ Korba ಲೋಕಸಭಾ ಸಂಸದರು

ಅಂದಹಾಗೆ 59 ವರ್ಷದ ಎನ್. ಚರಣದದಾಸ ಮಹಾಂತರ ಅವರು (ಜನನ 1954 ಡಿಸೆಂಬರ್ 13) ಛತ್ತೀಸ್‌ಗಢ ರಾಜ್ಯದ Korba ಲೋಕಸಭಾ ಕ್ಷೇತ್ರದ ಸಂಸದರು.

English summary
Congress Minister Charan Das Mahant gets ready to sweep floor on CP Sonia Gandhi's command. The Union Minister of State for Agriculture and Food Processing has been appointed as the working president of the Chhattisgarh State Congress Committee (CGPCC). 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X