ಸಿಬಿಎಸ್ಇ ಪರೀಕ್ಷೆ ಆರಂಭ, ವಿದ್ಯಾರ್ಥಿಗಳು ಡಲ್

ಮಾ.1 ರಿಂದ ಮಾ.15 ರ ತನಕ ಕ್ಲಾಸ್ 10 ರ ಪರೀಕ್ಷೆಗಳು ನಡೆಯಲಿದೆ. ಕ್ಲಾಸ್ 12 ರ ಪರೀಕ್ಷೆಗಳು ಮಾ.1 ರಿಂದ ಏಪ್ರಿಲ್ 17 ರ ತನಕ ಪರೀಕ್ಷೆಗಳು ನಡೆಯಲಿದೆ. ಸಿಬಿಎಸ್ ಇ 2013-14 ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿ ವಿರೋಧಿ ನಿಯಮವೊಂದನ್ನು ಜಾರಿಗೊಳಿಸಿದೆ. ಬೋರ್ಡ್ ಪರೀಕ್ಷೆಗಳನ್ನು ಪಾಸ್ ಮಾಡಲು ತೆಗೆದುಕೊಳ್ಳುವ ಪ್ರಯತ್ನಗಳ ಮಿತಿಯನ್ನು ಕಡಿಮೆಗೊಳಿಸಲಾಗಿದೆ.
ಹೊಸ ನಿಯಮದ ಪ್ರಕಾರ ಕ್ಲಾಸ್ 12 ರ ವಿದ್ಯಾರ್ಥಿ/ನಿಯರು ಪರೀಕ್ಷೆ ಪಾಸಾಗಲು 3 ಬಾರಿ ಪ್ರಯತ್ನ ಮಾಡಬಹುದಾಗಿದೆ. ಈ ವರೆಗೂ ಇದ್ದ 5 ಪ್ರಯತ್ನಗಳನ್ನು ಕಡಿಮೆಗೊಳಿಸಲಾಗಿದೆ. ಇದೇ ರೀತಿ ಕ್ಲಾಸ್ 10 ರ ವಿದ್ಯಾರ್ಥಿಗಳಿಗೆ 5 ರ ಬದಲಿಗೆ 4 ಪ್ರಯತ್ನಗಳು ಮಾತ್ರ ಲಭಿಸಲಿದೆ ಎಂದು ಸಿಬಿಎಸ್ ಇ ಚೇರ್ಮನ್ ವಿನೀತ್ ಜೋಶಿ ಹೇಳಿದ್ದಾರೆ.
* ವೇಳಾಪಟ್ಟಿ : 2ನೇ ಪಿಯು ಪರೀಕ್ಷೆ | ಎಸ್ಎಸ್ಎಲ್ಸಿ | ಸಿಇಟಿ
ಈ ಬಾರಿ ಅಂಧ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದ್ದು, ತಮ್ಮ ವಿಶೇಷ ಕಂಪ್ಯೂಟರ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅನುಮತಿ ನೀಡಲಗಿದೆ. ಸುಮಾರು 22 ಲಕ್ಷ ವಿದ್ಯಾರ್ಥಿಗಳು ಕ್ಲಾಸ್ 10 ಹಾಗೂ ಕ್ಲಾಸ್ 12 ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 2 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಿಗೆ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ 9.42,035 ವಿದ್ಯಾರ್ಥಿಗಳು ಕ್ಲಾಸ್ 12 ಬೋರ್ಡ್ ಪರೀಕ್ಷೆ ಹಾಗೂ 12,59,202 ಕ್ಲಾಸ್ 10 ವಿದ್ಯಾರ್ಥಿಗಳು ಮಾರ್ಚ್ 2013 ಪರೀಕ್ಷೆ ತೆಗೆದುಕೊಂಡಿದ್ದಾರೆ.












Click it and Unblock the Notifications