ಎಸ್ಎಸ್ಎಲ್ಸಿ ಪರೀಕ್ಷೆ 2013, ಟೈಂ ಟೇಬಲ್

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಏಪ್ರಿಲ್ 1ರಿಂದ 10ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈ ಬಾರಿ 8.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ 3,003 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ, ಮೌಖಿಕ ಪರೀಕ್ಷಾ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಏ.12ರಂದು ನಡೆಯಲಿದೆ. ಬೆಳಗ್ಗಿನ ಅವಧಿಯ ಪರೀಕ್ಷೆ ಸಮಯ 10.30ರಿಂದ 1.45 ರ ಬದಲಾಗಿ 9.30 ರಿಂದ 12.45ಕ್ಕೆ ಹಾಗೂ ಮಧ್ಯಾನ್ಹದ ಅವಧಿ ಪರೀಕ್ಷೆ ಸಮಯ: 2.30ರಿಂದ ಸಂಜೆ 5.45 ರ ಬದಲಾಗಿ 2.00 ರಿಂದ 5.15ಗೆ ಎಂದು ನಿಗದಿ ಪಡಿಸಲಾಗಿದೆ.
ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನು ಪರೀಕ್ಷೆಯ ಪ್ರಾರಂಭದಲ್ಲಿ ನೀಡಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ವೇಳಾಪಟ್ಟಿ ಈ ರೀತಿ ಕೆಳಗಿನಂತಿದೆ.
ವೇಳಾಪಟ್ಟಿ ವಿವರ ಹೀಗಿದೆ:
| ದಿನಾಂಕ: | ದಿನ: | ಪಠ್ಯ ವಿಷಯ: |
| ಪ್ರಥಮ ಭಾಷೆ | ||
| ಏಪ್ರಿಲ್ 01, 2013 | ಸೋಮವಾರ | ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ |
| Core Subjects | ||
| ಏಪ್ರಿಲ್ 03, 2013 | ಬುಧವಾರ | ಭಾರತೀಯ ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್ ಡ್ರಾಯಿಂಗ್(ಮಧ್ಯಾಹ್ನದ ಅವಧಿ) |
| ದ್ವಿತೀಯ ಭಾಷೆ | ||
| ಏಪ್ರಿಲ್ 05, 2013 | ಶುಕ್ರವಾರ | ಇಂಗ್ಲಿಷ್, ಕನ್ನಡ |
| Core Subjects | ||
| ಏಪ್ರಿಲ್ 06, 2013 | ಶನಿವಾರ | ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ ಮಧ್ಯಾಹ್ನ: ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ |
| ಏಪ್ರಿಲ್ 08, 2013 | ಸೋಮವಾರ | ಗಣಿತ, ಭಾರತೀಯ ಸಮಾಜಶಾಸ್ತ್ರ |
| ತೃತೀಯ ಭಾಷೆ | ||
| ಏಪ್ರಿಲ್ 09, 2013 | ಮಂಗಳವಾರ | ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ |
| ಏಪ್ರಿಲ್ 10, 2013 | ಬುಧವಾರ | ಸಮಾಜ ವಿಜ್ಞಾನ |












Click it and Unblock the Notifications