Get Updates
Get notified of breaking news, exclusive insights, and must-see stories!

ಕರ್ನಾಟಕ ಸಿಇಟಿ ಪರೀಕ್ಷೆ 2013 ವೇಳಾಪಟ್ಟಿ

Karnataka CET examination 2013
ಬೆಂಗಳೂರು, ಫೆ. 4 : ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ಪದವಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 2013ರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ವೇಳಾಪಟ್ಟಿಯನ್ನು ಪ್ರಕಟಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮೇ 1, 2 ಮತ್ತು 3ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

2013-14ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಮುಂತಾದ ವಿಷಯಗಳ ಮೊದಲ ವರ್ಷದ ಪದವಿ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಕೆಳಗೆ ತಿಳಿಸಿದ ದಿನಗಳಂದು ನಡೆಯಲಿವೆ.

ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದರೂ ವೈದ್ಯಕೀಯ ವಿದ್ಯಾರ್ಥಿಗಳು ಇನ್ನೂ ಸಿಇಟಿ ಪರೀಕ್ಷೆಗಳನ್ನು ಬರೆಯುವ ಬಗ್ಗೆ ಗೊಂದಲದಲ್ಲಿದ್ದಾರೆ. ಎನ್ ಇಇಟಿ ಬರೆಯಬೇಕೋ ಅಥವಾ ಸಿಇಟಿ ಪರೀಕ್ಷೆ ಬರೆಯಬೇಕೆಂದು ನಿರ್ಧಾರವಾಗಿಲ್ಲ. ಈ ಕುರಿತ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದ್ದು, ಕೋರ್ಟ್ ನಲ್ಲಿ ವಿದ್ಯಾರ್ಥಿಗಳ ಪರವಾಗಿ ಆದೇಶ ಬಂದರೆ ವೈದ್ಯಕೀಯ ಪ್ರವೇಶ ಪಡೆಯಬಹುದಾಗಿದೆ.

ಆದರೆ. ಆದೇಶ ವಿದ್ಯಾರ್ಥಿಗಳ ಪರವಾಗಿ ಇಲ್ಲದಿದ್ದರೆ, ಸಿಇಟಿ ಅಥವ ಎನ್ಇಇಟಿಯಲ್ಲಿ ಯಾವುದಾದರೂ ಒಂದು ಪರೀಕ್ಷೆ ಅಸಿಂಧುವಾಗುವ ಸಾಧ್ಯತೆ ಇದೆ.

ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ವೇಳಾಪಟ್ಟಿ ಪ್ರಕಟಿಸಿರುವ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯ ಅರ್ಜಿಯ ಪರೀಶೀಲನೆಯನ್ನು ಸುಪ್ರೀಂಕೋರ್ಟ್ ನ ಆದೇಶದ ನಂತರ ನಡೆಸಲು ನಿರ್ಧರಿಸಿದೆ. ನಡುವೆಯೇ ಖಾಸಗಿ ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ ಕಾಮೆಡ್-ಕೆ ಮೇ 12ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನೆಡೆಸುವುದಾಗಿ ಘೋಷಿಸಿದೆ.

ಕರ್ನಾಟಕ ಸಿಇಟಿ ಪರೀಕ್ಷೆ 2013 ವೇಳಾಪಟ್ಟಿ
ದಿನಾಂಕ: ವಾರ: ಸಮಯ: ವಿಷಯ: ಅಂಕ:
ಮೇ 01, 2013 ಬುಧವಾರ 10.30ರಿಂದ 11.50 ಜೀವಶಾಸ್ರ್ರ 60
ಮೇ 01, 2013 ಬುಧವಾರ ಮಧ್ಯಾಹ್ನ 2.30 ರಿಂದ 3.50 ಗಣಿತ 60
ಮೇ 02, 2013 ಗುರುವಾರ 10.30ರಿಂದ 11.50 ಭೌತಶಾಸ್ರ್ರ 60
ಮೇ 02, 2013 ಗುರುವಾರ ಮಧ್ಯಾಹ್ನ 2.30 ರಿಂದ 3.50 ರಸಾಯನ ಶಾಸ್ತ್ರ 60
ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ
ಮೇ 03, 2013 ಶುಕ್ರವಾರ 2.00ಗಂಟೆಗೆ ಹೊರನಾಡು ಕನ್ನಡಿಗರಿಗೆ
ಮೇ 03, 2013 ಶುಕ್ರವಾರ 3.00ಗಂಟೆಗೆ ಗಡಿನಾಡು ಕನ್ನಡಿಗರಿಗೆ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+