• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಡಿಕೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾ ಸುಧೀಂದ್ರರಾವ್

By Srinath
|
denotification-lokayukta-judge-take-kumaraswamy-to-task
ಬೆಂಗಳೂರು, ಸೆ.11: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗದ ಮಾಜಿ ಪ್ರಧಾನಿ ದೇವೇಗೌಡರ ಕಿರಿಯ ಪುತ್ರ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯನ್ನೂ ಸೇರಿದಂತೆ ಅವರ ವೈದ್ಯರು, ವಕೀಲರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ ಎನ್ ಕೆ ಸುಧೀಂದ್ರರಾವ್ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಿನ್ನೆ ನಡೆದಿದೆ.

ಥಣಿಸಂದ್ರದಲ್ಲಿ ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಲೋಕಾಯುಕ್ತ ಕೋರ್ಟಿಗೆ ಎಚ್ ಡಿ ಕುಮಾರಸ್ವಾಮಿ ಹಾಜರಾಗಿ ವಿಚಾರಣೆ ಎದುರಿಸಬೇಕಾಗಿತ್ತು. ಆದರೆ ಅನಾರೋಗ್ಯದ ನೆಪವೊಡ್ಡಿ ಅವರು ಕೋರ್ಟಿಗೆ ಗೈರು ಹಾಜರಾದರು. ಪ್ರಕರಣದ ವಿಚಾರಣೆಯನ್ನು ಸೆ. 20ಕ್ಕೆ ಮುಂದೂಡಲಾಗಿದೆ.

ಆದರೆ ಅವರಿಗೆ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟ ವೈದ್ಯರನ್ನು ನ್ಯಾ ಸುಧೀಂದ್ರರಾವ್ ಅವರು ತರಾಟೆಗೆ ತೆಗೆದುಕೊಂಡರು. ಗಮನಾರ್ಹವೆಂದರೆ ಕಳೆದ ಬಾರಿಯ ವಿಚಾರಣೆಯ ವೇಳೆಯೂ ಎಚ್ ಡಿ ಕುಮಾರಸ್ವಾಮಿ ಅವರು ಅನಾರೋಗ್ಯದಿಂದಾಗಿ ಕೋರ್ಟಿಗೆ ಬಂದಿರಲಿಲ್ಲ.

ಆಗ, ನ್ಯಾಯಾಧೀಶರು ಹೀಗೆ ಸುಳ್ಳು ಕಾರಣ ಕೊಟ್ಟು ಗೈರು ಹಾಜರಾದರೆ ಜಾಮೀನುರಹಿತ ವಾರಂಟ್ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಮಂಗಳವಾರವೂ ಅದು ಪುನರಾವರ್ತನೆಯಾಯಿತು.

ಕುಮಾರಸ್ವಾಮಿ ಪರ ವಕೀಲರು ಎಂದಿನಂತೆ 'ಅನಾರೋಗ್ಯದಿಂದಾಗಿ ತಮ್ಮ ಕಕ್ಷಿದಾರರು ಜಾಹರಾಘಲು ಸಾಧ್ಯವಾಗಿಲ್ಲ' ಎಂದು ರಾಗವೆಳೆದರು. ಜತೆಗೆ, ವೈದ್ಯ ಮಹಾಶಯರು ನೀಡಿದ್ದ ಮೆಡಿಕಲ್ ಸರ್ಟಿಫಿಕೇಟನ್ನೂ ಸಬ್ಮಿಟ್ ಮಾಡಿದರು.

ಮೆಡಿಕಲ್ ಸರ್ಟಿಫಿಕೇಟನ್ನು ನೋಡಿದ ನ್ಯಾ ಎನ್ ಕೆ ಸುಧೀಂದ್ರರಾವ್ ಅವರಿಗೆ ಅದೆಲ್ಲಿತ್ತೋ ಸಿಟ್ಟು ಕಿಡಿಕಿಡಿಯಾದರು. ಅಸಲಿಗೆ ಕುಮಾರಸ್ವಾಮಿ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಚಿಕಿತ್ಸೆ ಪಡೆದಿದ್ದರು ಎಂಬುದನ್ನೇ ವೈದ್ಯ ಮಹಾಶಯರು ನಮೂದಿಸಿರಲಿಲ್ಲ.

ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ನ್ಯಾ ಸುಧೀಂದ್ರರಾವ್ ಅವರು 'ಯಾರ್ರೀ ಡಾಕ್ಟರು, ಆರೋಗ್ಯ ಸರಿಯಿಲ್ಲ ಎಂದು ವರದಿ ಕೊಟ್ಟಿದ್ದಾರೆ. ಆದರೆ ಯಾವ ದಿನ ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದನ್ನೇ ಬರೆದಿಲ್ಲ' ಎಂದು ತರಾಟೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಲೂ ಮುಂದಾದರು.

ಎಲ್ಲೋ ಕಣ್ತಪ್ಪಿನಿಂದ ಪ್ರಮಾದವಾಗಿದೆ ಎಂದು ಕುಮಾರಸ್ವಾಮಿ ಪರ ವಕೀಲರು ಸ್ಪಷ್ಟನೆ ನೀಡಿದರು. ಆಗ ವಕೀಲರ ಮೇಲೂ ಗರಂ ಆದ ನ್ಯಾ ಸುಧೀಂದ್ರರಾವ್ ಅವರು 'ವೈದ್ಯರ ಪರ ವಕಾಲತ್ತು ವಹಿಸಬೇಕಿದ್ದರೆ ಇನ್ನೊಂದು ಅರ್ಜಿ ಹಾಕಿಕೊಳ್ಳಿ' ಎಂದು ತರಾಟೆಗೆ ತೆಗೆದುಕೊಂಡಾಗ ವಕೀಲರು ಸುಸ್ತೋ ಸುಸ್ತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a case related to illegal denotification in Thanisandra Bangalore ex CM HD Kumaraswamy was absent in Lokayukta Court yeserday citing ill healh. But judge Sudhindra Rao took strong objection to his absence.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more