ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಆರ್ಥಿಕ ಭೀತಿ: ಟೆಕ್ಕಿ ಉದ್ಯೋಗ ವಲಸೆಗೆ ಬಿತ್ತು ಬ್ರೇಕ್

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  its-the-economy-stupid-techies-job-hopping-reduced, Mohandas Pai
  ಬೆಂಗಳೂರು, ಆ.10: ಈ ಹಿಂದೆ ಆರ್ಥಿಕತೆ ಸುಭಿಕ್ಷವಾಗಿದ್ದ ದಿನಗಳಲ್ಲಿ IT, ITeS ಮತ್ತು BPO ಕ್ಷೇತ್ರಗಳ ಉದ್ಯೋಗಿಗಳು ಹೆಚ್ಚು ಸಂಬಳಗಳನ್ನು ಆಪೇಕ್ಷಿಸುತ್ತಾ ಹಸಿರು ಹುಲ್ಲುಗಾವಲಿನತ್ತ ಹಾರುತ್ತಿದ್ದುದ್ದು ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಕರಾಳ ಆರ್ಥಿಕ ಭೀತಿಯಿಂದಾಗಿ ಕೆಲಸ ಬಿಡಲೊಲ್ಲದ ಟೆಕ್ಕಿಗಳು ಪಾಲಿಗೆ ಬಂದಿದ್ದು ಪಂಚಾಮೃತ ಅಂತಂದ್ಕೊಂಡು ತಾವಿರುವ ಕಂಪನಿಗಳಲ್ಲೇ ದಿನ ದೂಡುತ್ತಿದ್ದಾರೆ.

  ಉದ್ಯೋಗ ಚಂಚಲತೆ ಬಿಟ್ಟ ಟೆಕ್ಕಿಗಳು: ಅಂದರೆ ಕಳೆದ ಆರು ತಿಂಗಳಿಂದ ಟೆಕ್ಕಿಗಳು ತಮ್ಮ ಹಾಲಿ ಉದ್ಯೋಗದಾತ ಕಂಪನಿಗಳನ್ನು ಬಿಟ್ಟು ಬೇರೆಕಡೆ ಹೋಗುವ ಆಲೋಚನೆಯನ್ನೂ ಮಾಡುತ್ತಿಲ್ಲ. ಬಿಗಡಾಯಿಸಿದ ವಿಶ್ವ ಆರ್ಥಿಕ ಸಂಕಷ್ಟವೇ ಉದ್ಯೋಗಿಗಳ ಬದಲಾದ ಈ ಮನೋಭಾವಕ್ಕೆ ಕಾರಣವಾಗಿದೆ.

  ಕಳೆದ ವರ್ಷ ಇದೇ ಅವಧಿಯಲ್ಲಿ (ಜನವರಿ-ಜೂನ್) ಶೇ. 60ರಷ್ಟು ಉದ್ಯೋಗಿಗಳು ಬೇರೆ ಕಂಪನಿಗಳನ್ನರಸಿ ಕೆಲಸ ಬಿಡುತ್ತಿದ್ದರು. ಆದರೆ ಈ ಬಾರಿ ಅಂತಹವರ ಪ್ರಮಾಣ ಶೇ. 20ಕ್ಕೆ ಕುಸಿದಿದೆ. (ಉದ್ಯೋಗ ಚಂಚಲತೆ ಅಂದರೆ ಭಾರಿ ಸಂಬಳದ ಬೆನ್ನುಹತ್ತಿ ಕಂಪನಿಯಿಂದ ಕಂಪನಿಗೆ ಹಾರುವುದು. ಹೆಚ್ಚಿನ ಮಾಹಿತಿಗಾಗಿ- Churn Rate ಕ್ಲಿಕ್ ಮಾಡಿ).

  ಚಂಚಲ ಆರ್ಥಿಕತೆ ಮತ್ತು ಕರೆನ್ಸಿ ಮೌಲ್ಯದ ಏರಿಳಿತಳಿಂದಾಗಿ ಟೆಕ್ಕಿಗಳು ಉದ್ಯೋಗದ ವಿಷಯದಲ್ಲಿ ಚಂಚಲತೆ ಬಿಟ್ಟಿದ್ದಾರೆ. ಕಾದು ನೋಡುವ ನೀತಿಗೆ ಜೋತುಬಿದ್ದಿದ್ದಾರೆ. ಇದರಿಂದ, ಮಧ್ಯಮ ಮತ್ತು ಹಿರಿಯ ಮ್ಯಾನೇಜ್ ಮೆಂಟ್ ವಲಯದಲ್ಲಿ ಸಮರ್ಥ ಮಾನವ ಸಂಪನ್ಮೂಲ ಕಾಯಂ ಆಗಿ ತಳವೂರದೆ ಪರದಾಡುತ್ತಿದ್ದ IT-BPO ವಲಯ ನಿಜಕ್ಕೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

  ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಕಂಪನಿಗಳು ನೇಮಕಾತಿ ಪ್ರಮಾಣವನ್ನು ತಗ್ಗಿಸಿವೆ. ಬೌದ್ಧಿಕ ಮಾನವ ಸಂನ್ಮೂಲವನ್ನೇ ಅವಲಂಬಿಸುವ ಕಂಪನಿಗಳಿಗೆ ಇದು ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. IT ವಲಯದಲ್ಲಿ ಉದ್ಯೋಗ ಚಂಚಲತೆ ಶೇ. 15ಕ್ಕೆ ಕುಸಿದಿದ್ದರೆ BPO ವಲಯದಲ್ಲಿ ಶೇ. 25ರಷ್ಟು ಬಾಧಿಸುತ್ತಿದೆ. ಆದರೆ ಉನ್ನತ ವರ್ಗದ ಮಾನವ ಸಂಪನ್ಮೂಲದಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಾಗಿದೆ.

  ಇದು ಕಂಪನಿಗಳಿಗೆ ಶುಭದಾಯಕವಾಗಿದ್ದರೆ ಉದ್ಯೋಗಿಗಳಿಗೆ ಶ್ರೇಯಸ್ಕರವಾಗಿದೆ ಎನ್ನಬಹುದು ಎನ್ನುತ್ತಾರೆ ಇನ್ಫೋಸಿಸ್ ಕಂಪನಿಯ ಮಾಜಿ ಎಚ್ಆರ್ ಟಿವಿ ಮೋಹನದಾಸ್ ಪೈ. 'ಕಂಪನಿಗಳ ಕ್ಯಾಂಪಸ್ಸುಗಳಲ್ಲಿ ಟೆಕ್ಕಿಗಳು ತಮ್ಮ ಉದ್ಯೋಗಗಳ ಬಗ್ಗೆ ತುಂಬಾ ಗಂಭೀರ ವದನರಾಗಿದ್ದಾರೆ. ಆಶಾದಾಯಕ ಸಂಗತಿಯೆಂದರೆ ಇದರಿಂದ ಟೆಕ್ಕಿಗಳ ಮುಖದ ಮೇಲೆ ಚಿಂತೆಯ ಗೆರೆಗಳು ಕಾಣಿಸುತ್ತಿಲ್ಲ. ಬದಲಿಗೆ ಅವರು ಕಂಪನಿಯಿಂದ ಕಂಪನಿಗೆ ಹಾರುವುದನ್ನು ಬಿಟ್ಟು ತಮ್ಮ ವೃತ್ತಿಜೀವನದಲ್ಲಿ ದೃಢತೆ ಕಾಯ್ದುಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ' ಎನ್ನುತ್ತಾರೆ ಪೈ.

  ಬೆಂಗಳೂರು, ಪೂನಾ, ಚೆನ್ನೈ, ಹೈದರಾಬಾದ್, ಗುರಗಾಂವ್ ಮತ್ತು ನೋಯ್ಡಾದಲ್ಲಿ IT, ITeS ಮತ್ತು BPO ಕ್ಷೇತ್ರಗಳ ಉದ್ಯೋಗಿಗಳು, ಉದ್ಯೋಗ ಸಲಹೆಗಾರರು, ನೇಮಕಾತಿ ವೃತ್ತಿಪರರು, ಎಚ್ಆರ್ ತಜ್ಞರು, ಔದ್ಯಮಿಕ ಮನಃಶಾಸ್ತ್ರಜ್ಞರು, ಆಡಳಿತಾಧಿಕಾರಿಗಳ ಸಮೀಕ್ಷೆ ಆಧಾರದ ಮೇಲೆ ಆಸೋಚಾಮ್ ಮೊನ್ನೆ ಈ ವರದಿಯನ್ನು ಬಿಡುಗಡೆ ಮಾಡಿದೆ.

  ಆರ್ಥಿಕ ಕುಸಿತದ ಸಮ್ಮುಖದಲ್ಲಿ ಉದ್ಯೋಗ ಚಂಚಲತೆಯ ಕಿರುನೋಟ:

  10 ವರ್ಷ ಅನುಭವದ ಉದ್ಯೋಗಿಗಳು ಬೇರೆ ಕಂಪನಿಗಳಿಗೆ ವಲಸೆ ಹೋಗುವ ಪ್ರಮಾಣ ಶೇ. 5
  5-10 ವರ್ಷ ಅನುಭವದ ಉದ್ಯೋಗಿಗಳು ಬೇರೆ ಕಂಪನಿಗಳಿಗೆ ವಲಸೆ ಹೋಗುವ ಪ್ರಮಾಣ ಶೇ. 10
  5 ವರ್ಷಕ್ಕಿಂತ ಕಡಿಮೆ ಅನುಭವದ ಉದ್ಯೋಗಿಗಳು ಬೇರೆ ಕಂಪನಿಗಳಿಗೆ ವಲಸೆ ಹೋಗುವ ಪ್ರಮಾಣ ಶೇ. 20

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Its the economy stupid techies job hopping reduced in India. The attrition rate in the IT, ITeS and the BPO sectors has come down to around 20% in the last six months, as against about 60% during the corresponding period last year.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more