ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಸುರೇಶ್‌ಗೌಡ ಚೇತರಿಕೆ; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

By Srinath
|
Google Oneindia Kannada News

mla-suresh-gowda-recovers-congress-lambasts
ನಾಗಮಂಗಲ (ಮಂಡ್ಯ), ಸೆ.22: ಗಣೇಶ ವಿಸರ್ಜನೆ ಸಂಬಂಧ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ತೂರಿದ ಕಲ್ಲು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಶಾಸಕ ಕೆ. ಸುರೇಶ್‌ಗೌಡ ಗುಣಮುಖರಾಗುತ್ತಿದ್ದಾರೆ. ಸುರೇಶ್‌ಗೌಡರ ತಲೆಗೆ 6 ಹೊಲಿಗೆ ಹಾಕಲಾಗಿದ್ದು, ತಾಲೂಕಿನ ಆದಿಚುಂಚನಗಿರಿಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ಸಂಬಂಧ ಬಿದರಕೆರೆ ಗ್ರಾಮದ ಸಂತೋಷ್, ನಟರಾಜ ಹಾಗೂ ಹರೀಶ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದು, ಗ್ರಾಮ ಮತ್ತು ನಾಗಮಂಗಲ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ವಾಡಲಾಗಿದೆ.

ಗ್ರಾಮದ ಪರಿಶಿಷ್ಟರ ಕಾಲನಿಯಲ್ಲಿ ಮಂಗಳವಾರ ರಾತ್ರಿ ಗಣೇಶ ವಿಸರ್ಜನೆ ಹಾಗೂ ಪಿತೃಪಕ್ಷದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕೆ ಶಾಸಕ ಕೆ.ಸುರೇಶ್‌ಗೌಡ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಸುವಾರು ರಾತ್ರಿ 11 ಗಂಟೆ ವೇಳೆಗೆ ಶಾಸಕರು ತೆರಳಲು ಕಾರನ್ನು ಹತ್ತುತ್ತಿದ್ದಾಗ ಗುಂಪಿನಿಂದ ಕಿಡಿಗೇಡಿಗಳು ತೂರಿದ ಕಲ್ಲು ತಲೆಗೆ ತಾಗಿ ಕುಸಿದು ಬಿದ್ದರು.

ಕಾಂಗ್ರೆಸಿಗರ ಆಕ್ರೋಶ: ಶಾಸಕ ಸುರೇಶ್‌ಗೌಡರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನಾದ್ಯಂತ ಬುಧವಾರ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟಿ. ಮರಿಯಪ್ಪ ವತ್ತದಲ್ಲಿ ಟೈರಿಗೆ ಬೆಂಕಿಹಾಕಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.

ತಾಲೂಕಿನ ಬಿಂಡಿಗನವಿಲೆ, ಕದಬಹಳ್ಳಿ ಸೇರಿದಂತೆ ವಿವಿಧ ಕಡೆ ಹಾಗೂ ಮದ್ದೂರು, ಕೊಪ್ಪದಲ್ಲೂ ಕತ್ಯ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿದರಕೆರೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ವಾಡಲಾಗಿದೆ ಎಂದು ಸಿಪಿಐ ಟಿ.ಡಿ.ರಾಜು, ಪಿಎಸ್‌ಐ ವೆಂಕಟೇಗೌಡ ತಿಳಿಸಿದ್ದಾರೆ. ಎಎಸ್ಪಿ ರಾಜಣ್ಣ, ಡಿವೈಎಸ್ಪಿ ಚನ್ನಬಸವಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.

English summary
Nagamangala MLA (Congress) K Suresh Gowda who was hit with stones on Sept 20 midnight during Lord Ganesha procession is now recovering in Manipal Hospital, Bangalore. Congress lambasts, Nagamangala tense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X