ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನ ರೆಡ್ಡಿ ಬಂಧನ ನಿರೀಕ್ಷಿತ: ಸಂತೋಷ್ ಹೆಗ್ಡೆ

By Mahesh
|
Google Oneindia Kannada News

Santosh Hegde on Janardhan Reddy detention
ಬೆಂಗಳೂರು, ಸೆ.5: ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿರುವ ಬಗ್ಗೆ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ತಮ್ಮ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಅಧಿಕಾರ ದುರುಪಯೋಗ ಮಾಡಿಕೊಂಡವರ ಹಣೆಬರಹ ಅಷ್ಟೇ. ಇದು ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಗೆ ಯಾರು ಯಾರು ಬರುತ್ತಾರೆ ನೋಡಬೇಕು. ರೆಡ್ಡಿಗಳ ಬಂಧನ ನಿರೀಕ್ಷಿತವಾಗಿತ್ತು.

ಗಡಿ ನಾಶ ಇವತ್ತು ಪ್ರಮುಖವಾದದ್ದು, ತಪ್ಪು ಮಾಡಿದವರಿಗೆಲ್ಲ ಶಿಕ್ಷೆ ಖಂಡಿತ. ನಮ್ಮ ಪೊಲೀಸರಿಗೆ(ಲೋಕಾಯುಕ್ತ) ಹಲವು ಬಾರಿ ಬೆದರಿಕೆ ಒಡ್ಡಿದ್ದ ರೆಡ್ಡಿಗಳಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ಹೇಳಿದ್ದಾರೆ.

ದತ್ತಾಗೆ ಗೆಲುವಿನ ನಗೆ: ಬಳ್ಳಾರಿ ರೆಡ್ಡಿಗಳ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಮಾರು 2000ಕ್ಕೂ ಅಧಿಕ ಪುಟಗಳ ಮಾಹಿತಿ ಸಂಗ್ರಹಿಸಿ, ಹೋರಾಟ ನಡೆಸಿದ್ದ ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರು ಸಹಜವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರದಲ್ಲಿರುವ ಓಬಳಾಪುರಂ ಮೈನಿಂಗ್ ಭೂ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದ ಗಡಿಭಾಗದಲ್ಲಿ ಅಕ್ರಮ ನಡೆಸಿರುವುದು ಲೋಕಾಯುಕ್ತ ವರದಿಯಿಂದ ಸಾಬೀತಾಗಿದೆ. ಕರ್ನಾಟಕ ಆಂಧ್ರ ಗಡಿಭಾಗದ ಕುರುಹಾಗಿದ್ದ ಸುಗಲಮ್ಮ ದೇಗುಲವನ್ನೇ ಕಬಳಿಸಿದರು. ಸುಮಾರು 15ಕಿ.ಮೀ ಉದ್ದದ ಕರ್ನಾಟಕದ ಗಡಿಭಾಗವನ್ನು ಆಂಧ್ರಕ್ಕೆ ಸೇರಿಸಿ ಗಡಿನಾಶ ಮಾಡಿದ್ದಾರೆ.

ಬಿಎಲ್ ಶಂಕರ್ ಸಂತಸ:
ಇಡೀ ರಾಜ್ಯದಲ್ಲಿರುವ ಅಕ್ರಮದಲ್ಲಿರುವ ಭಾಗಿಯಲ್ಲಿರುವವರಿಗೆಲ್ಲ ಪಾಠವಾಗಲಿದೆ. ಉಪ್ಪು ತಿಂದವರು ನೀರು ಕುಡಿಯಬೇಕು. ಸುಪ್ರೀಂಕೋರ್ಟ್ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ನಿಷೇಧಿಸುವುದು ಸ್ವಾಗತಾರ್ಹ. ಗಡಿ ನಾಶ, ಅರಣ್ಯ ನಾಶದ ಬಗ್ಗೆ ಜನ ಕೂಡಾ ಎಚ್ಚರವಹಿಸಿಕೊಳ್ಳಬೇಕು. ನಿರ್ಭೀತಿಯಿಂದ ಬಾಳುವಂಥ ವಾತಾವರಣ ಸೃಷ್ಟಿಗೆ ಇಂದು ಚಾಲನೆ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್ ಪ್ರತಿಕ್ರಿಯಿಸಿದ್ದಾರೆ.

English summary
Justice Lokayukta Santosh Hegde said he was expecting the detention of former minister Janardhan Reddy. Earlier in the today CBI raided OMC and arrested G Janardhana Reddy and his his brother-in-law OMC MD Srinivas Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X