ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಧಿಕ ಸಂಬಳ ಪಡೆಯುವ ಸಾಫ್ಟ್ ವೇರ್ ಸಿಇಒ-4

By Mahesh
|
Google Oneindia Kannada News

Kris Gopalakrishnan, Infosys CEO
ಕ್ರಿಸ್ ಎಂದೇ ಜನಪ್ರಿಯವಾಗಿರುವ ಸೇನಾಪತಿ ಗೋಪಾಲಕೃಷ್ಣನ್ ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜೀಸ್ ನ ಏಳು ಜನ ಸ್ಥಾಪಕರಲ್ಲಿ ಒಬ್ಬರು. ಪ್ರಸ್ತುತ ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರಾಗಿದ್ದಾರೆ. ಇನ್ಫೋಸಿಸ್ ನ ಹೊಸ ಸಿಇಒ ಆಗಿ ಶಿಬುಲಾಲ್ ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಬೇಕಿದೆ.

ಬೆಂಗಳೂರಿಗೆ ಬರುವ ಮುನ್ನ: ತಿರುವನಂತಪುರದ ಥೈಕಾಡ್ ನ ಸರ್ಕಾರಿ ಮಾದರಿ ಶಾಲೆಯಲ್ಲಿ ಶಿಕ್ಷಣ. 1977ರಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ, 1979ರಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಟೆಕ್ ಎರಡು

ಸ್ನಾತಕೋತ್ತರ ಪದವಿಯನ್ನು ಐಐಟಿ ಮದ್ರಾಸ್ ನಲ್ಲಿ ಪೊರೈಸಿದರು. ನಂತರ ಕೇಂಬ್ರಿಡ್ಜ್ ಗೆ ಹಾರಿದ ಕ್ರಿಸ್ 1986ರಲ್ಲಿ ಪಿಎಚ್ ಡಿ ಪಡೆದರು. ಅಲ್ಲಿಂದ ಹಿಂದಿರುಗಿದ ನಂತರ ಎನ್ ಆರ್
ನಾರಾಯಣಮೂರ್ತಿ ಹಾಗೂ ಇತರರೊಡನೆ ಸೇರಿ ಇನ್ಫೋಸಿಸ್ ಸಂಸ್ಥೆ ಹುಟ್ಟು ಹಾಕಿದರು.

ಅಮೆರಿಕದಲ್ಲಿ ಫಣೀಶ್ ಮೂರ್ತಿ ಜತೆ ಸೇರಿ ಇನ್ಫೋಸಿಸ್ ಸಂಸ್ಥೆ ಆಗು ಹೋಗು ಬೆಳವಣಿಗೆ ಪೋಷಣೆ ಜವಾಬ್ದಾರಿ ತೆಗೆದುಕೊಂಡರು. 1994ರಲ್ಲಿ ಅಂಟ್ಲಾಂಟದ KSA ಜೊತೆ ಜಂಟಿಯಾಗಿ
ಇನ್ಫೋಸಿಸ್ ತನ್ನ ತಾಂತ್ರಿಕ ಕೇಂದ್ರ ಆರಂಭಿಸಿದಾಗ ಕ್ರಿಸ್ ಅದರ ಉಪಾಧ್ಯಕ್ಷರಾಗಿದ್ದರು.

ನಂದನ್ ನಿಲೇಕಣಿ ಅವರ ನಿರ್ಗಮನದಿಂದ ತೆರವಾಗಿದ್ದ ಸಿಇಒ ಸ್ಥಾನವನ್ನು ಜು.22, 2007 ರಂದು ಗೋಪಲಕೃಷ್ಣನ್ ತುಂಬಿದರು. 2002ರಲ್ಲಿ ಸಿಒಒ, ಅಧ್ಯಕ್ಷ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ

ಕೂಡಾ ಕ್ರಿಸ್ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಹಕ ಸೇವೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ ಹಾಗೂ ಇತರೆ ಕಂಪನಿ ಸ್ವಾದೀನ ಮುಂತಾದ ವಿಭಾಗಗಳಲ್ಲಿ ಕ್ರಿಸ್ ಮುಖ್ಯಸ್ಥರಾಗಿ ಸಂಸ್ಥೆಯನ್ನು
ಮುನ್ನಡೆಸಿದ್ದಾರೆ.

55 ವರ್ಷದ ಕ್ರಿಸ್ ಅವರ ಬೇಸಿಕ್ ಸಂಬಳ 31 ಲಕ್ಷ, ಒಟ್ಟಾರೆ ಪಡೆದ ಸಂಬಳ ವಾರ್ಷಿಕವಾಗಿ 1 ಕೋಟಿ ರು ಮುಟ್ಟುತ್ತದೆ. 2010ರಲ್ಲಿ 1.01 ಕೋಟಿ ರು ಗಳಿಸಿದ್ದರು.

ಆದರೆ, ಇನ್ಫಿ ಸ್ಥಾಪಕರಾಗಿರುವುದರಿಂದ ಶೇ 1.16 ರಷ್ಟು ಕಂಪನಿ ಷೇರುಗಳು ಇವರ ಕೈಲಿದೆ. ಒಟ್ಟಾರೆ 66 ಮಿಲಿಯನ್ ಷೇರುಗಳನ್ನು ಹೊಂದಿದ್ದು, ಇಂದಿನ ಮಾರುಕಟ್ಟೆ ಮೌಲ್ಯ2,922/ಷೇರು ನಂತೆ ಸುಮಾರು 19.3 ಕೋಟಿ ರು ಗಳಿಗೆ ಕ್ರಿಸ್ ಒಡೆಯರಾಗಿದ್ದಾರೆ.

ಪ್ರಶಸ್ತಿ, ಗೌರವಾದರಗಳು:
* Indian Institute of Information Technology and Managementಐಐಐಟಿ ಕೇರಳದ ಮುಖ್ಯಸ್ಥ,
* Board for Information Technology Education Standards (BITES) ನ ಉಪಾಧ್ಯಕ್ಷ
* Confederation of Indian Industries(CII) ದಕ್ಷಿಣ ವಲಯದ ಉಪಾಧ್ಯಕ್ಷ
* ACM, IEEE and IEEE ಕಂಪ್ಯೂಟರ್ ಸೊಸೈಟಿಯ ಸದಸ್ಯರಾಗಿದ್ದಾರೆ.
* 2011ನೇ ಸಾಲಿನ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

English summary
Meet the Corporate Czar-4 : List of Indian CEOs getting highest salary. S Gopalakrishnan is one of the founders and CEO of Infosys Technologies Limited, a global IT business. with a basic salary of 31 lakh, his total compensation for 2010 totaled up to 1 crore per annum
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X