ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿದೊಡ್ಡ ಸಂಸ್ಥೆಯ ಹೆಚ್ಚು ಸಂಬಳದ ಸಿಇಒ ಚಂದ್ರ

By Mahesh
|
Google Oneindia Kannada News

N Chandrashekaran CEO, TCS
ಭಾರತದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ 46 ವರ್ಷದ ಎನ್ ಚಂದ್ರಶೇಖರನ್ ಅತಿ ಹೆಚ್ಚು ಸಂಬಳ ಪಡೆವ ಸಿಇಒಗಳಲ್ಲಿ ಕಿರಿಯ ವಯಸ್ಸಿನವರು.

ಚಂದ್ರ ಎಂದು ಕರೆಯಲ್ಪಡುವ ಚಂದ್ರಶೇಖರನ್ ಮೂಲತಃ ತಮಿಳುನಾಡಿನ ಮೋಹನೂರಿಗೆ ಸೇರಿದವರು. ಕೊಯಮತ್ತೂರಿನಲ್ಲಿ ಬಿಎಸ್ ಸ್ಸಿ ಪದವಿ ಪಡೆದ ನಂತರ ತಿರುಚ್ಚಿಯಲ್ಲಿ ಕಂಪ್ಯೂಟರ್

ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಲತಿಕಾ ಎಂಬ ಪತ್ನಿ ಹಾಗೂ ಪ್ರಣವ್ ಎಂಬ ಮಗ ಇದ್ದಾನೆ.

1986ರಲ್ಲಿ ಮಾಸ್ಟರ್ಸ್ ಪಡೆದ ಮೇಲೆ 1987ಕ್ಕೆ ಟಿಸಿಎಸ್ ಅಂಗಳಕ್ಕೆ ಕಾಲಿರಿಸಿದ ಚಂದ್ರ, ಪೂರ್ಣ ಚಂದ್ರನಂತೆ ಟಾಟಾ ಸಂಸ್ಥೆ ಬೆಳಗಿದವರು. 2008ರಲ್ಲಿ ಸಿಒಒ ಆದ ಚಂದ್ರ ಸಂಸ್ಥೆ ಚಿತ್ರಣವನ್ನೇ ಬದಲಿಸಿದರು. ಹೊಸ ಹೊಸ ಉತ್ಪನ್ನ, ಸೇವೆಗಳತ್ತ ಗಮನಹರಿಸಿದವರು.

Global Network Delivery Model (GNDM) ಎಂಬ ಕಲ್ಪನೆ ಹುಟ್ಟು ಹಾಕಿದ ಚಂದ್ರ ಐದು ಖಂಡಗಳಿಗೆ ಇದನ್ನು ಹಬ್ಬಿಸಿದರು. ಯುರೋಪ್, ಚೀನಾ ಹಾಗೂ

ಲ್ಯಾಟೀನ್ ಅಮೆರಿಕದಲ್ಲಿ ಟಿಸಿಎಸ್ ಹೆಸರು ಜನಜನಿತವಾಗುವಂತೆ ಮಾಡಿದರು. ಬಿಪಿಒ, ಮೂಲ ಸೌಕರ್ಯ ಸೇವೆಯಲ್ಲದೆ ಮಾಧ್ಯಮ, ಮಾಹಿತಿ ಸಂಪರ್ಕ ಕ್ಷೇತ್ರಕ್ಕೂ ಟಿಸಿಎಸ್ ಕಾಲಿರಿಸಿತು.

ಪ್ರಶಸ್ತಿ, ಗೌರವಾದರಗಳು:
* 2006ರಲ್ಲಿ ವಿಶ್ವದ ಟಾಪ್ 25 ಪ್ರಭಾವಿ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರೆನಿಸಿದರು.
* 2011ರಲ್ಲಿ AIMA ಬಿಸಿನೆಸ್ ಲೀಡರ್ ಪ್ರಶಸ್ತಿ
* ನ್ಯಾಸ್ ಕಾಂನ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ.

2009-2010 ಆರ್ಥಿಕ ವರ್ಷದಲ್ಲಿ ಸುಮಾರು 3 ಕೋಟಿ ರು ಒಟ್ಟಾರೆ ಸಂಬಳ ಪಡೆದಿದ್ದಾರೆ. ಇದರಲ್ಲಿ 46.7 ಲಕ್ಷ ಸಂಬಳದ ಜೊತೆಗೆ 51.12 ಲಕ್ಷ ರು ಭತ್ಯೆ ಹಾಗೂ 2 ಕೋಟಿ ರು ಕಮಿಷನ್ ಸೇರಿದೆ.

English summary
Meet the Corporate Czar-3:List of Indian CEOs getting highest salary. N Chandrasekaran(48) youngest among highest paid CEOs is the chief executive officer and managing director of Tata Consultancy Services (TCS). He received a total compensation of 3 crore for the FY 2009-2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X