ನ್ಯೂ ಇಯರ್ ಪಾರ್ಟಿ ಮಾಡಿ ಸಂಬಳ ಖಾಲಿ ಆಯ್ತಾ? ಹಣವಿಲ್ಲದೆ ತಿಂಗಳು ಕಳೆಯುವುದು ಹೇಗೆ? ಇಲ್ಲಿದೆ ಸಲಹೆಗಳು....
ಹೊಸ ವರ್ಷ ಅಂದರೆ ಸುಮ್ನೆನಾ? ಅದು ವರ್ಷಕ್ಕೆ ಒಂದು ಬಾರಿ ಮಾತ್ರ ಬರುತ್ತೆ. ಇದನ್ನು ಬರ ಮಾಡಿಕೊಳ್ಳಬೇಕು ಅಂದ್ರೆ ಒಂದು ದೊಡ್ಡ ಆಚರಣೆ ಇರಲೇ ಬೇಕು. ಇದಕ್ಕಾಗಿ ಒಬ್ಬಿಬ್ಬರು ಸಾಕಾಗುವುದಿಲ್ಲ. ಸ್ನೇಹಿತರ ಬಳಗವೋ ಅಥವಾ ಸಂಬಂಧಿಕರ ಬಳಗವೋ ಇದ್ದರೆನೇ ಇದರಲ್ಲಿ ಮಜಾ ಜಾಸ್ತಿ.
ಕೆಲವೊಮ್ಮೆ ಸ್ನೇಹಿತರು ಹಾಗೂ ಸಂಬಂಧಿಕರು ಮಾತ್ರವಲ್ಲ ಇದರಲ್ಲಿ ನೆರೆ ಹೊರೆಯವರು, ಬಾಲ್ಯದ ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಹೇಳ್ತಾ ಹೋದರೆ ಹನುಮಂತನ ಬಾಲದಂತೆ ಪಟ್ಟಿ ಉದ್ದವಾಗಿಬಿಡುತ್ತದೆ. ಇವರನ್ನೆಲ್ಲಾ ಒಂದೆಡೆ ಸೇರಿಸಿ ಅವರಿಗೆ ಇಷ್ಟವಾದ ಆಹಾರ, ಪಾನಿಯಗಳನ್ನು ಕೊಡಿಸುವುದರಲ್ಲಿ ಕೆಲವರು ಆನಂದಿಸುತ್ತಾರೆ. ಅಂಥವರು ದುಡ್ಡಿನ ಮುಖ ನೋಡಿ ಸ್ನೇಹ ಹಾಗೂ ಸಂಬಂಧವನ್ನು ಬೆಳಸುವುದಿಲ್ಲ. ಯಾವುದೇ ಖರ್ಚಿಗೂ ಹಿಂದೂ ಮುಂದೂ ನೋಡುವುದಿಲ್ಲ. ನಾಳೆಯ ಬಗ್ಗೆ ಯೋಚನೆ ಕೂಡ ಅವರಿಗಿರುವುದಿಲ್ಲ.

ಹೀಗೆ ಒಂದೇ ದಿನದಲ್ಲಿ ತನ್ನವರಿಗಾಗಿ ದುಡಿದ ದುಡ್ಡನ್ನೆಲ್ಲ ಖರ್ಚು ಮಾಡುವವರು ನಮ್ಮ ನಡುವೆ ಅಧಿಕ ಜನರಿದ್ದಾರೆ. ಹೀಗಾಗಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕೈಯಲ್ಲಿ ಇದ್ದ ಹಣವನ್ನೆಲ್ಲಾ ಖರ್ಚು ಮಾಡಿಬಿಟ್ಟಿದ್ದರೆ ಹಣವಿಲ್ಲದೆ ಈ ತಿಂಗಳನ್ನು ದೂಡುವುದು ಹೇಗೆ ಎನ್ನುವ ಬಗ್ಗೆ ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತೇವೆ... ಇವುಗಳನ್ನು ಅನುಸರಿಸಿ ಪಾಲಿಸಿ ಈ ತಿಂಗಳು ನೀವು ಹಣವಿಲ್ಲದೇ ಇದ್ದರೂ ಕೊಂಚ ನೆಮ್ಮದಿಯಾಗಿ ಇರಬಹುದು.
ಹೊಸ ವರ್ಷಕ್ಕೆ ಹಣ ಯಾಕೆ ಖರ್ಚಾಗುತ್ತದೆ?
* ಹೊಸ ವರ್ಷಕ್ಕೆ ಪಾರ್ಟಿ ಅಥವಾ ಔತಣಕೂಟಗಳಿಗಾಗಿನೇ ನಿಮ್ಮ ಹಣ ಖರ್ಚಾಗಬೇಕೆಂದಿಲ್ಲ. ಹಣ ಖರ್ಚಾಗಲು ನಾನಾ ಕಾರಣಗಳಿರುತ್ತವೆ.
*ಹೊಸ ವರ್ಷಕ್ಕಾಗಿ ನೀವು ನಿಮ್ಮ ಮನೆಯವರಿಗೆ ಹೊಸ ಬಟ್ಟೆ, ಉಡುಗೊರೆ, ಮನೆಗೆ ಬೇಕಾಗಿರುವ ಇನ್ನಿತರ ದುಬಾರಿ ವಸ್ತುಗಳ ಖರೀದಿಯಿಂದಲೂ ಹಣ ಖರ್ಚಾಗಬಹುದು.
*ನೀವೇನಾದರೂ ಸಾಲಗಾರರಾಗಿದ್ದರೆ ಅದನ್ನು ಇದೇ ವರ್ಷದಲ್ಲಿ ತೀರಿಸುವ ಯೋಜನೆಯಿಂದಲೂ ಹಣ ಖರ್ಚಾಗಬಹುದು.

* ನಿಮ್ಮವರಿಗಾಗಿ ಬ್ಯಾಂಕ್‌ನಲ್ಲಿ ತಿಂಗಳ ಪೂರ್ಣ ಹಣವನ್ನು ಸಂಗ್ರಹಿಸಿ ಇಡುವುದರಿಂದಲೂ ದುಡ್ಡು ಉಳಿಸಬಹುದು.
* ಬರುವ ವರ್ಷ ಸುಖ,ಶಾಂತಿ, ನೆಮ್ಮದಿ, ಸಂತೋಷ, ಆರೋಗ್ಯ ಭಾಗ್ಯ ನೀಡಲೆಂದು ದೇವಸ್ಥಾನದ ಹುಂಡಿಗೆ ತಿಂಗಳ ಸಂಪೂರ್ಣ ಹಣವನ್ನು ದೇವರ ಹುಂಡಿಗೆ ಹಾಕುವವರು ಇದ್ದಾರೆ...
* ಇನ್ನೂ ಹೊಸ ವರ್ಷದ ಮೊದಲ ದಿನ ಮಾಡುವ ಪೂಣ್ಯದ ಕಾರ್ಯಗಳಿಂದ ದೇವರನ್ನು ಮೆಚ್ಚಿಸಲು ಅನ್ನ, ಬಟ್ಟೆ, ದಾನ್ಯಗಳ ದಾನ ಇನ್ನಿತರ ವಸ್ತುಗಳಿಗಾಗಿಯೂ ಹಣ ಖರ್ಚಾಗಬಹುದು.
* ಹೊಸ ವರ್ಷಕ್ಕೆ ಪ್ರವಾಸ ಹೋಗುವ ಮೂಲಕವೂ ನೀವು ನಿಮ್ಮ ಹಣವನ್ನು ಖರ್ಚು ಮಾಡಿರಬಹುದು.
* ಹೊಸ ವರ್ಷದಲ್ಲಿ ಮಾಡುವ ಇನ್ನಿತರ ಶುಭ ಕಾರ್ಯಗಳಿಗೂ ತಿಂಗಳ ಹಣ ಖರ್ಚು ಆಗಬಹುದು. ಹೀಗೆ ಹಣ ಖರ್ಚಾಗಲು ನಾನಾ ಕಾರಣಗಳು ಇವೆ. ಆದರೆ ಅದನ್ನು ನಿಭಾಯಿಸುವುದು ಒಂದು ಜಾಣ್ಮೆ.
ಹಣವಿಲ್ಲದೆ ತಿಂಗಳು ಕಳೆಯುವುದು ಹೇಗೆ?
* ಈ ಆಧುನಿಕ ಯುಗದಲ್ಲಿ ಹಣವಿಲ್ಲದೆ ಜೀವನ ಮಾಡೋದು ತುಂಬಾನೇ ಕಷ್ಟ. ಆದರೆ ಹಣವಿಲ್ಲದ ಈ ಸಮಯವನ್ನು ಮುಂದೂಡಲು ಅವಕಾಶಗಳಿರುತ್ತವೆ. ಹೀಗೆ ನಿಮಗೇನಾದರೂ ಅವಕಾಶಗಳಿದ್ದರೆ ಅವುಗಳನ್ನು ಬಳಸಿಕೊಳ್ಳಿ. ಉದಾ: ನೀವು ಬಾಡಿಗೆದಾರರಾಗಿದ್ದರೆ, ಮುಂಬರುವ ತಿಂಗಳು ಪಾವತಿಸುವುದಾಗಿ ಹೇಳಿ, ಅದಕ್ಕೆ ತಕ್ಕಂತೆ ಹಣವನ್ನು ಮುಂಬರುವ ತಿಂಗಳು ಹೊಂದಿಸಿಕೊಳ್ಳಿ.
* ನೀವೇನಾದರೂ ಸಂಸಾರಸ್ಥರಾಗಿದ್ದರೆ ನಿಮ್ಮ ಮೇಲೆಯೇ ನಿಮ್ಮ ಕುಟುಂಬ ಅವಲಂಬಿತವಾಗಿದ್ದರೆ ತುಂಬಾ ಹತ್ತಿರದಲ್ಲಿರುವವರಿಂದ ಹಣದ ಸಹಾಯ ಪಡೆದುಕೊಳ್ಳಿ. ಆದರೆ ಅದು ಬಡ್ಡಿ ರಹಿತ ಸಾಲವಾಗಿರುವುದು ಉತ್ತಮ. ನೀವು ಸ್ನೇಹಿತರಿಗಾಗಿ ನಿಮ್ಮ ಒಂದು ತಿಂಗಳ ಸಂಬಳ ಖರ್ಚು ಮಾಡುವಂತಿದ್ದರೆ, ನಿಮ್ಮ ಈ ಉದಾರ ಭಾವನೆಯನ್ನು ಮೆಚ್ಚಿ ಖಂಡಿತವಾಗಿಯೂ ನಿಮಗೆ ಬಡ್ಡಿ ರಹಿತ ಸಾಲ ನೀಡುವವರೂ ಇರುತ್ತಾರೆ. ಈ ಹಣದಲ್ಲಿ ಮನೆಯ ವೆಚ್ಚಗಳನ್ನು ಭರಿಸಿ.
* ಮಕ್ಕಳಿರುವ ಮನೆಯಾಗಿದ್ದರೆ ಖರ್ಚುಗಳು ಹೆಚ್ಚು. ಹೀಗಾಗಿ ನೀವು ಹೊರ ಊಟ, ನಿಮ್ಮ ಖರ್ಚು ವೆಚ್ಚಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನಿಮ್ಮ ಖರ್ಚು ಏನೇ ಇರಲಿ ಅದನ್ನು ಮುಂದೂಡುವುದು ಉತ್ತಮ. ನಿಮ್ಮ ಖರ್ಚಿನ ದುಡ್ಡನ್ನು ತುರ್ತು ಪರಿಸ್ಥಿತಿಗಾಗಿ ಇಟ್ಟುಕೊಳ್ಳಿ.
* ಇನ್ನೂ ಮದ್ಯ ಹಾಗೂ ಸಿಗರೇಟ್ ಪ್ರಿಯರಾಗಿದ್ದರೆ ಇದನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಇದರಿಂದ ಉಳಿಯುವ ಹಣದಿಂದ ನೀವು ನಿಮ್ಮ ಮನೆಗೆ ಬೇಕಾದ ಅಗತ್ಯ ಖರ್ಚುಗಳನ್ನು ನೀವು ಮಾಡಬಹುದು. ಜೊತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
*ಉದ್ಯೋಗಸ್ಥರಾಗಿದ್ದರೆ ನಿಮ್ಮ ಬಿಡುವಿನ ಸಮಯದಲ್ಲಿ ಲಾಭದಾಯಕ ಹುದ್ದೆಗಳನ್ನು ಮಾಡಲು ಪ್ರಯತ್ನಿಸಿ. ಇದು ನಿಮ್ಮ ತಿಂಗಳ ಖರ್ಚನ್ನು ಭರಿಸಲು ಸಹಾಯವಾಗುತ್ತದೆ.
* ನಿಮ್ಮ ಸಂಗಾತಿ ಉದ್ಯೋಗಸ್ಥರಾಗಿದ್ದರೆ ನೀವು ಅವರಿಂದ ಹಣವನ್ನು ಪಡೆಯಬಹುದು. ಸದ್ಯದ ಅಗತ್ಯತೆಗಳಿಗೆ ಇದು ಉತ್ತಮ ವಿಧಾನವಾಗಿದೆ. ನೀವು ಯಾರ ಮೇಲೂ ಅವಲಂಭಿತರಾಗಿರದೇ ಇದ್ದರೆ ನಿಮ್ಮ ಸಂಗಾತಿಯ ಬಳಿ ಹಣ ಪಡೆದು ಅದನ್ನು ಮರುನೀಡಬಹುದು.
* ಹೊಸ ವರ್ಷಕ್ಕೆ ನಿಮ್ಮ ಕಚೇರಿಯಲ್ಲಿ ಬೋನಸ್ ಕೊಟ್ಟಿದ್ದರೆ ಅದನ್ನು ಬಳಸಿಕೊಳ್ಳಿ. ಅಥವಾ ಯಾವುದೇ ಓಚರ್, ಗಿಫ್ಟ್ ಈ ಸಮಯದಲ್ಲಿ ನಿಮಗೆ ಸಹಾಯವಾಗಬಹುದು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications