Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಫೆರೆಂಟ್‌ ಕೆಲಸ, ತಿಂಗಳ ಸಂಬಳ ಎಷ್ಟು?-ಮಾಹಿತಿ ತಿಳಿಯಿರಿ

ಶಿವಮೊಗ್ಗ, ಫೆಬ್ರವರಿ, 19: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಬಳಿಯ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಲ್ಲಿ ಕೆಲಸ ಖಾಲಿಯಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಆ ಹುದ್ದೆ ಯಾವುದು, ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳ ಸಂಬಳ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿ ಓಡಿಸುವ ಹುದ್ದೆ ಖಾಲಿಯಿದ್ದು, ಪೂರಕ ಸೇವೆಗಳನ್ನು ಒದಗಿಸಲು ಏಜನ್ಸಿಗಳಿಗೆ ಟೆಂಡರ್‌ ಕರೆಯಲಾಗಿದೆ. ಇದರ ನೋಟಿಫಿಕೇಷನ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದಕ್ಕೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್‌ಐಐಡಿಸಿ) ಪ್ರಾಣಿ, ಪಕ್ಷಿಗಳನ್ನು ಹೆದರಿಸುವ ಮತ್ತು ಪೂರಕ ಸೇವೆಗಳನ್ನು ಒದಗಿಸುವ ಕೆಲಸಕ್ಕೆ ಏಜೆನ್ಸಿಗಳಿಗೆ ಟೆಂಡರ್‌ ಆಹ್ವಾನಿಸಿದೆ.

Shivamogga Airport: Different Job at Airport, know details

ಸಾಮಾನ್ಯವಾಗಿ ವಿಮಾನ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಸಂದರ್ಭ ರನ್‌ ವೇ ನಲ್ಲಿ ಯಾವುದೇ ಅಡಚಣೆಗಳು ಇರಬಾರದು. ಇದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮ. ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಸಂದರ್ಭ ಪ್ರಾಣಿ, ಪಕ್ಷಿಗಳು ರನ್‌ ವೇ ಮೇಲೆ ಅಥವಾ ಅದರ ಸಮೀಪ ಕಾಣಿಸಿಕೊಂಡರೆ ಅಪಘಾತ ಸಂಭವಿಸುವ ಸಾದ್ಯತೆ ಇರುತ್ತದೆ. ಹಕ್ಕಿಗಳು ವಿಮಾನಕ್ಕೆ ತಾಗಿ ಅಥವಾ ಇಂಜಿನ್‌ಗೆ ಸಿಲುಕುವ ಸಂಭವ ಇರುತ್ತದೆ. ಆದ್ದರಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಾಣಿ, ಪಕ್ಷಗಳನ್ನು ಓಡಿಸಬೇಕಾಗುತ್ತದೆ.

ಟರ್ಮಿನಲ್‌ ಕಟ್ಟಡದಲ್ಲಿ ಪಕ್ಷಿಗಳು ಗೂಡು ಕಟ್ಟಿ, ಹಿಕ್ಕೆ ಹಾಕಿದರೆ ನಿಲ್ದಾಣದ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ. ಆದ್ದರಿಂದ ಟರ್ಮಿನಲ್‌ನಲ್ಲಿ ಹಕ್ಕಿಗಳು ಗೂಡು ಕಟ್ಟದ ಹಾಗೆ ತಡೆಯಲು ಅನಿವಾರ್ಯವಾಗಿದೆ. ಇನ್ನು, ವಿಮಾನ ನಿಲ್ದಾಣದಲ್ಲಿ ದುಬಾರಿ ವೆಚ್ಚದ ಯಂತ್ರೋಪಕರಣವನ್ನು ಅಳವಡಿಕೆ ಮಾಡಲಾಗಿದೆ. ಪ್ರಾಣಿ, ಪಕ್ಷಿಗಳಿಂದ ಅವುಗಳನ್ನು ರಕ್ಷಿಸಬೇಕಾಗಿದ್ದು, ಈ ಹಿನ್ನೆಲೆ ನುರಿತ ಸಿಬ್ಬಂದಿ ಅಗತ್ಯವಿರಲಿದೆ ಎಂದು ಕೆಎಸ್‌ಐಐಡಿಸಿ ಎಜಿಎಂ ಎಲ್‌.ಎಲ್.ಹರ್ತಿ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಓಡಿಸಲು ಸದ್ಯ 13 ಸಿಬ್ಬಂದಿ ಇದ್ದಾರೆ. ಆದರೆ ಇವರೆಲ್ಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆದವರಾಗಿದ್ದಾರೆ. ಅವರನ್ನು ತಾತ್ಕಾಲಿಕವಾಗಿ ಇಲ್ಲಿ ನೇಮಕ ಮಾಡಲಾಗಿದೆ. ಶಿವಮೊಗ್ಗಕ್ಕೆ ಪೂರ್ಣಾವಧಿ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆ ಏಜೆನ್ಸಿಗೆ ಟೆಂಡರ್‌ ಕರೆಯಲಾಗಿದೆ.

ಇನ್ನು ಇಲ್ಲಿ ನೇಮಕವಾಗುವ ಸಿಬ್ಬಂದಿಗೆ ಪ್ರಾಣಿ, ಪಕ್ಷಿಗಳನ್ನು ಓಡಿಸುವ ತರಬೇತಿಯನ್ನು ನೀಡಲಾಗುತ್ತದೆ. ಈ ಸಿಬ್ಬಂದಿಗೆ ಅತ್ಯಾಧುನಿಕ ಗನ್‌ ನೀಡಲಾಗುತ್ತದೆ. ಇದರಿಂದ ಬುಲೆಟ್‌ ಹಾರಿದಂತೆ ಶಬ್ದ ಮಾತ್ರ ಬರಲಿದೆ. ವಿಮಾನ ಲ್ಯಾಂಡಿಂಗ್‌, ಟೇಕಾಫ್‌ಗೆ ಕೆಲವು ನಿಮಿಷ ಮೊದಲು ಇದನ್ನು ಬಳಕೆ ಮಾಡಲಾಗುತ್ತದೆ. ಅಗತ್ಯ ಸಂದರ್ಭ ಪಟಾಕಿಗಳನ್ನು ಕೂಡ ಉಪಯೋಗಿಸಲಾಗುತ್ತದೆ. ಪಕ್ಷಿಗಳು ಟರ್ಮಿನಲ್‌ನಲ್ಲಿ ಗೂಡು ಕಟ್ಟದಂತೆ ನಿಯಂತ್ರಿಸಲಾಗುತ್ತದೆ. ಹೈಟೆಕ್‌ ಉಪಕರಣಗಳ ರಕ್ಷಣೆ ಮಾಡಲಾಗುತ್ತದೆ. ಇನ್ನು, ಇಡೀ ಪ್ರಕ್ರಿಯೆಯಲ್ಲಿ ಪ್ರಾಣಿ, ಪಕ್ಷಿಗಳ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಲಾಗುತ್ತದೆ.

ಈಗಾಗಲೇ ಏಕ ಹಂತದ ಬಿಡ್ಡಿಂಗ್‌ ಪ್ರಕ್ರಿಕೆಯಲ್ಲಿ ಕನಿಷ್ಟ ಮೊತ್ತವನ್ನು ಉಲ್ಲೇಖಿಸಿದ ಅರ್ಹ ಏಜೆನ್ಸಿಯನ್ನು ಆಯ್ಕೆ ಮಾಡಲಾಗುವುದು. (ಎಲ್‌1) ಆಎಫ್‌ ದಸ್ತವೇಜುಗಳನ್ನು ಹಾಗೂ ಇತರೆ ಯಾವುದೇ ಪರಿಷ್ಕರಣೆಗಳನ್ನು ಕರ್ನಾಟಕ ಸರ್ಕಾರ ಇ-ಪ್ರೊಕ್ಯೂರ್‌ಮೆಂಟ್‌ ಪ್ಲಾಟ್‌ಫಾರಂ (http://kppp.karnataka.gov.in//portal-home) ಮೂಲಕ ದಿನಾಂಕ ಫೆಬ್ರವರಿ 14ರ ನಂತರ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.

ಇನ್ನು ಬಿಡ್‌ ಪೂರ್ವ ಸಭೆ ಫೆಬ್ರವರಿ 16ರಂದು ನಡೆದಿದ್ದು, ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 21 ಆಗಿದೆ.

ಯಾವುದೇ ಆಕ್ಷೇಪಗಳು ಅಥವಾ ಸ್ಪಷ್ಟಿಕರಣಗಳಿಗೆ TA-7022568585 & AGM (IPD-1) 080-2225 8123 ಅಥವಾ 98455 20837 & [email protected] and [email protected] ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+