ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯಸಿದ ಸಮಯದಲ್ಲಿ ಮನೆಬಾಗಿಲಿಗೆ'ಗ್ಯಾಸ್ ಸಿಲಿಂಡರ್'

By Mahesh
|
Google Oneindia Kannada News

Pay and get LPG cylinder when you want it
ನವದೆಹಲಿ, ಜು 14 : ಉದ್ಯೋಗಸ್ಥ ದಂಪತಿಗಳು ವಾರದ ದಿನಗಳಲ್ಲಿ ಇನ್ನು ಮುಂದೆ ಗ್ಯಾಸ್ ಸಿಲಿಂಡರ್ ಪಡೆಯಲು ಚಿಂತಿಸ ಬೇಕಾಗಿಲ್ಲ ಅಥವಾ ರಜೆ ಹಾಕಬೇಕಾಗಿಲ್ಲ.

ವಾರದ ಯಾವುದೇ ದಿನ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ಗ್ರಾಹಕರು ಬಯಸುವ ಸಮಯದಲ್ಲಿ ಸಿಲಿಂಡರ್ ಪೂರೈಸುವ ಹೊಸ ವ್ಯವಸ್ಥೆಗೆ ಪೆಟ್ರೋಲಿಯಂ ಖಾತೆ ಚಾಲನೆ ನೀಡಿದೆ. ಇದಕ್ಕೇ ಗ್ರಾಹಕರು ರೂ. 25 ರಿಂದ ರೂ. 50ರ ವರೆಗೆ ಹೆಚ್ಚುವರಿ ಶುಲ್ಕ ಪಾವತಿಸ ಬೇಕಾಗುತ್ತದೆ.

"ನಿಗದಿತ ಸಮಯದಲ್ಲಿ ಎಲ್ ಪಿ ಜಿ ಹಂಚುವಿಕೆ" ಯೋಜನೆಗೆ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ಡಿಯೋರಾ ಚಾಲನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಈ ಹೊಸ ವ್ಯವಸ್ಥೆ ಜಾರಿಯಲ್ಲಿರುತ್ತದೆ. ನಗರ ಪಟ್ಟಣ ಪ್ರದೇಶದಲ್ಲಿರುವ ಗ್ರಾಹಕರು ಈ ವ್ಯವಸ್ಥೆಗೆ ಹೆಚ್ಚುವರಿ ರೂ. 20 ರಿಂದ ರೂ. 50 ಶುಲ್ಕ ಪಾವತಿಸ ಬೇಕಾಗುತ್ತದೆ.

ಶನಿವಾರ ಮತ್ತು ಭಾನುವಾರದಂದು ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಸಿಲಿಂಡರ್ ಪಡೆಯಲು ಮಹಾನಗರದ ಗ್ರಾಹಕರು ರೂ.25 ಮತ್ತು ಇತರ ಪ್ರದೇಶದವರು ರೂ. 20 ಪಾವತಿಸಬೇಕಾಗುತ್ತದೆ. ಸೂಚಿಸಿದ ಸಮಯಕ್ಕೆ ಸಿಲಿಂಡರ್ ತಲುಪಿಸುವಲ್ಲಿ ಡೀಲರ್ ಗಳು ವಿಫಲರಾದರೆ ದಂಡ ರೂಪದಲ್ಲಿ ರೂ.20 ಗ್ರಾಹಕರಿಗೆ ಮರಳಿಸ ಬೇಕಾಗುತ್ತದೆ.

ಈ ಸೌಲಭ್ಯಯನ್ನು ಪಡೆಯಲು ಗ್ರಾಹಕರು ಅರ್ಜಿಯನ್ನು ಭರ್ತಿ ಮಾಡಿಕೊಡಬೇಕು ಅಥವಾ ತೈಲ ಕಂಪೆನಿಯ ವೆಬ್ ಸೈಟ್ ವಿಳಾಸಕ್ಕೆ ಆನ್ ಲೈನ್ ಮುಖಾಂತರ (ಗ್ರಾಹಕ ಸಂಖ್ಯೆ ಅಗತ್ಯ) ಕೂಡ ಅರ್ಜಿ ಸಲ್ಲಿಸಬಹುದು. ತೈಲ ಕಂಪೆನಿಗಳ ವೆಬ್ ಸೈಟ್ ವಿಳಾಸ ಇಂತಿದೆ:

Indian Oil Corporation : www.indane.co.in
Bharat Petroleum : www.ebharatgas.com
Hindustan Petroleum : www.hindustanpetroleum.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X