ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಯವರಿಗೆ ಗಿನ್ನಿಸ್ ಹುಚ್ಚು!

By Staff
|
Google Oneindia Kannada News

File photo: Pratibha Visit to Mysuru
ನವದೆಹಲಿ, ಡಿ. 11 : ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ದಾಖಲೆ ನಿರ್ಮಿಸಿದ್ದ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ನೌಕಾಪಡೆ ಐಎನ್ಎಸ್ ವಿರಾಟ್ ನಲ್ಲಿ ಪ್ರಯಾಣಿಸಿ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸಲು ಹೊರಟಿದ್ದಾರೆ. ಆದರೆ, ರಾಷ್ಟ್ರಪತಿಯವರು ಯಾವ ಪುರುಷಾರ್ಥಕ್ಕೆ ಇಂತಹ ಗಿನ್ನಿಸ್ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಡಿಸೆಂಬರ್ 28 ಕ್ಕೆ ಪ್ರತಿಭಾ ಪಾಟೀಲ್ ಅವರನ್ನು ಕೂರಿಸಿಕೊಂಡು ನೌಕಾಪಡೆಯ ಯುದ್ಧನೌಕೆಯೊಂದು ಸಮುದ್ರ ಪರ್ಯಟನ ನಡೆಸುವಂತೂ ನಿಚ್ಚಳವಾಗಿದೆ.

ಕಳೆದ ತಿಂಗಳ 25 ರಂದು ಯುದ್ದ ವಿಮಾನ ಸುಖೋಯ್ ನಲ್ಲಿ ಹಾರಾಟ ನಡೆಸಿದ ಪ್ರತಿಭಾ ಪಾಟೀಲ್ ಗಿನ್ನಿಸ್ ದಾಖಲೆ ಬರೆದರು. ಯುದ್ದ ವಿಮಾನದಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಅಗ್ಗಳಿಕೆಗೂ ಮೇಡಮ್ ರಾಷ್ಟ್ರಪತಿ ಪಾತ್ರರಾದರು. ಆದರೆ, ರಾಷ್ಟ್ರಪತಿ ಅವರ ಯುದ್ಧ ವಿಮಾನದಲ್ಲಿ ಓಡಾಡುವ ತೆವಲಿಗೆ ಅನೇಕ ಮಗ್ಗಲುಗಳಿಂದ ಟೀಕೆಗಳು ಸಹ ಕೇಳಿಬಂದಿದ್ದವು.

ಅದಕ್ಕೆ ಕಾರಣವೂ ಸ್ಪಷ್ಟವಾಗಿತ್ತು. ಮರುದಿನ ನವೆಂಬರ್ 26, ಭಾರತದ ಇತಿಹಾಸದ ಕರಾಳ ದಿನ. ಪಾಕಿ ಉಗ್ರರ ದಾಳಿಗೆ ಭಾರತದ ನಲುಗಿದ ದಿನವಾಗಿತ್ತು. ಇಂತಹ ಭೀಕರ ದಿನದ ವಾರ್ಷಿಕೋತ್ಸವದ ಮುನ್ನ ದಿನ ರಾಷ್ಟ್ರಪತಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಬಹುದಿತ್ತು. ಈ ಮೂಲಕ ಉಗ್ರರ ಗುಂಡಿಗೆ ಬಲಿಯಾದ ಅನೇಕ ವೀರ ಯೋಧರಿಗೆ ಸಾಂತ್ವನ ಮತ್ತು ಧೈರ್ಯ ಹೇಳುವ ಕೆಲಸ ಮಾಡಬೇಕಿತ್ತು. ಆದರೆ, ಪ್ರತಿಭಾ ಪಾಟೀಲ್ ಅವರಿಗೇಕೆ ವಿಮಾನದಲ್ಲಿ ಓಡಾಡುವ ಶೋಕಿ ? ಅದರಿಂದ ದೇಶಕ್ಕಾಗಲಿ, ವಾಯುಪಡೆ, ನೌಕಾಪಡೆಗಾಗಲಿ ಪ್ರಯೋಜನವಾದರೂ ಏನು ? ಇಂತಹ ಅನೇಕ ಪ್ರಶ್ನೆಗಳು ಪ್ರಜ್ಞಾವಂತರ ಮನದಲ್ಲಿ ಮೂಡಿರುವುದು ಸಹಜವಾಗಿತ್ತು.

ಇದ ಬೆನ್ನಲ್ಲೇ ಮತ್ತೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ನೌಕಾಪಡೆ ಪ್ರಮುಖ ಯುದ್ಧನೌಕೆ ಐಎನ್ಎಸ್ ವಿರಾಟ್ ನಲ್ಲಿ ಪ್ರಯಾಣಿಸಿ ಇನ್ನೊಂದು ಗಿನ್ನಿಸ್ ದಾಖಲೆಗೆ ಮುಂದಾಗಿದ್ದಾರೆ. ನೌಕಾಪಡೆಯ ಯುದ್ಧನೌಕೆಯಲ್ಲಿ ಪ್ರಯಾಣಿಸಿದ ಮೊದಲ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ...?

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X