ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಲ್ಲಿ ಏಷಿಯನ್ ಫಾರೆಸ್ಟ್ ಹಡಗು ಮುಳುಗಡೆ

By Staff
|
Google Oneindia Kannada News

Asian Forest ship crew rescued in Mangaluru
ಮಂಗಳೂರು, ಜುಲೈ 18 : ನವ ಮಂಗಳೂರಿನಿಂದ ಚೀನಾಗೆ ತೆರಳುತ್ತಿದ್ದ ಹಾಂಕಾಂಗ್ ನ ಸರಕು ಸಾಗಣೆ ಹಡಗು "ಏಶಿಯನ್ ಫಾರೆಸ್ಟ್" ಶುಕ್ರವಾರ ಮಧ್ಯಾಹ್ನ ಸಂಪೂರ್ಣ ಮುಳುಗಡೆಯಾಯಿತು.

ಶುಕ್ರವಾರ ಬೆಳಗ್ಗೆ ಸಮತೋಲನ ಕಳೆದುಕೊಂಡು ಮುಳುಗುವ ಭೀತಿ ಎದುರಿಸುತ್ತಿತ್ತು. ಮುಂಬೈನಿಂದ ಹಡಗನ್ನು ರಕ್ಷಿಸಲು ವಿಶೇಷ ಪಡೆಯನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಲಕ್ಷಾಂತರ ಮೊತ್ತದ ಅಪಾರ ಪ್ರಮಾಣದ ಕಬ್ಬಿಣದ ಅದಿರು ಕಡಲಿ ಗರ್ಭವನ್ನು ಸೇರಿದೆ.

ಸುಮಾರು 13,600 ಟನ್ ಕಬ್ಬಿಣದ ಅದಿರನ್ನು ತುಂಬಿಕೊಂಡು ಹೊರಟಿದ್ದ ಹಡಗಿನ ಸ್ಥಿತಿ ಡೋಲಾಯಮಾನವಾಗಿದ್ದರೂ ಅದರಲ್ಲಿದ್ದ ಚೀನಾದ ಎಲ್ಲ 18 ಮಂದಿ ನೌಕಾ ಸಿಬ್ಬಂದಿಯನ್ನು ಅಪಾಯದಿಂದ ಪಾರುಮಾಡಲಾಗಿದೆ. ನವ ಮಂಗಳೂರು ಬಂದರು ಮಂಡಳಿಯ ಮೆರೈನ್ ವಿಭಾಗದ ಸಿಬ್ಬಂದಿ ಟಗ್ ಮೂಲಕ ಸಮುದ್ರದಲ್ಲಿ ಸುಮಾರು 36 ಕಿಮೀ ತೆರಳಿ ಸಿಬ್ಬಂದಿಯನ್ನು ಅಪಾಯದಿಂದ ಪಾರು ಮಾಡಿದರು.

ಗುರುವಾರ ಶೇ. 20ರಷ್ಟು ಮುಳುಗಿದ್ದ ಹಡಗು ಶುಕ್ರವಾರ ಶೇ.50 ಭಾಗದಷ್ಟು ನೀರಿನಲ್ಲಿ ವಾಲಿಕೊಂಡು ಮುಳುಗುವ ಭೀತಿಯನ್ನು ಎದುರಿಸುತ್ತಿತ್ತು. ಕರಾವಳಿಯಲ್ಲಿ ಓತಪ್ರೋತವಾಗಿ ಮಳೆ ಬೀಳುತ್ತಿದ್ದರಿಂದ, ಬಂದರಿನಿಂದ 40 ಕಿ.ಮೀ. ದೂರ ಇರುವ ಹಡಗು ಮುಳುಗುವುದು ಹೆಚ್ಚೂ ಕಡಿಮೆ ಖಚಿತವಾಗಿತ್ತು.

ಚಿತ್ರ-ಮಾಹಿತಿ: ಆರ್. ಕೆ. ಭಟ್, ಮಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X