ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕೇಂದ್ರ ರೈಲ್ವೆ ಬಜೆಟ್ ಮಂಡನೆ

By Staff
|
Google Oneindia Kannada News

Mamata Banerjee set to present Rly Budget on Jul 3
ನವದೆಹಲಿ, ಜು. 3 : ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯಪಿಎ ಸರಕಾರ ತನ್ನ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಲಿದೆ. ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಇಂದು ಬೆಳಗ್ಗೆ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ನ್ನು ಮಂಡಿಸಲಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಕೆ ಮುನಿಯಪ್ಪ ಅವರ ಕೃಪೆಯಿಂದಾಗಿ ರಾಜ್ಯಕ್ಕೆ ಅಂಟಿರುವ ಶಾಪ ವಿಮೋಚನೆ ಆಗಲಿದೆಯೇ ಎನ್ನುವುದು ಕೆಲ ಗಂಟೆಗಳಲ್ಲಿ ಗೊತ್ತಾಗಲಿದೆ.

ರೈಲ್ವೆ ವಿಚಾರದಲ್ಲಿ ರಾಜ್ಯದ ನಿರೀಕ್ಷೆಗಳು ನೂರಾರಿವೆ. ಇದರಲ್ಲಿ ಘೋಷಣೆಗಳಾಗುವುವು ಎಷ್ಟು ? ನಿರೀಕ್ಷೆಗಳಾಗಿಯೇ ಉಳಿಯುವವು ಎಷ್ಟು ? ಇಂತಹ ಕುತೂಹಲ ತೀವ್ರಗೊಂಡಿದೆ. ರಾಜ್ಯದಿಂದ ಆ ಬಾರಿ ಐದು ಜನ ಕೇಂದ್ರ ಸಚಿವರಾಗಿರುವುದು. ಅದರಲ್ಲೂ ಮುನಿಯಪ್ಪ ರೈಲ್ವೆ ಖಾತೆಯ ರಾಜ್ಯ ಮಂತ್ರಿಯಾಗಿರುವುದು ನಿರೀಕ್ಷೆಗಳ ಚಿಗುರು ಹೆಚ್ಚಾಗಿದೆ.

ರಾಜ್ಯದ ಬೇಡಿಕೆಗಳು ಇಂದೂ ನಿನ್ನೆಯದಲ್ಲ. ಹತ್ತಾರು ವರ್ಷಗಳಿಂದ ರಾಜ್ಯದ ಜನತೆ ಹೊಸ ರೈಲುಗಳು, ಹೊಸ ಮಾರ್ಗಗಳು, ರೈಲುಗಳ ಜೋಡಣೆ, ಜೋಡಿ ಮಾರ್ಗ, ಗೇಟ್ ಪರಿವರ್ತನೆಯಂತಹ ವಿಚಾರಗಳಲ್ಲಿ ಕೂಗುತ್ತಿರುವ ಕೂಗು, ಅದು ಅರಣ್ಯರೋಧನವಾಗುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಗುಲ್ಬರ್ಗಾ, ಹೀಗೆ ಪ್ರತಿಯೋಂದು ವಲಯದಲ್ಲಿಯೂ ಬೇಡಿಕೆಗಳ ಪಟ್ಟಿಯೇ ಇದೆ. ಈ ಬೇಡಿಕೆಗಳಲ್ಲಿ ಮಮತಾ ಬ್ಯಾನರ್ಜಿ ಸ್ಪಂದಿಸುತ್ತಾರೆಯೇ ಎನ್ನುವುದು ಇಷ್ಟರಲ್ಲಿ ತಿಳಿಯಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X