ಡಿವಿಜಿ 120ನೇ ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆ

ಬೆಂಗಳೂರು: ಸಮಾಜ ಸೇವಕರ ಸಮಿತಿ ಮಾರ್ಚ್‌ 20ರಂದು ದಾರ್ಶ ನಿಕ ಕವಿ ಡಿ.ವಿ. ಗುಂಡಪ್ಪನವರ 120ನೇ ಜನ್ಮದಿನ ಆಚರಿಸಲಿದ್ದು, ಈ ನಿಮಿತ್ತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಈ ಸಾಲುಗಳು ಯಾವ ಕೃತಿಯಲ್ಲಿ ಬರುತ್ತದೆ ಹಾಗೂ ಈ ವಾಕ್ಯದ ಹಿಂದಿರುವ ಕವಿಯ ಉದ್ದೇಶವೇನು? ಎಂಬುದರ ಬಗ್ಗೆ ಪ್ರಬಂಧವನ್ನು ಬರೆಯಬೇಕಾಗಿ ಸಮಿತಿ ಕೋರಿದೆ.

ಸ್ಪರ್ಧೆಯ ನಿಯಮಗಳು :

  • ಪ್ರಬಂಧವನ್ನು ಕನ್ನಡದಲ್ಲೇ ಬರೆಯಬೇಕು. ಪ್ರವೇಶ ಶುಲ್ಕ ಉಚಿತ.

  • ಎ4 ಹಾಳೆಯ ಒಂದೇ ಮಗ್ಗಲಲ್ಲಿ ಎರಡು ಪುಟಕ್ಕೆ ಮೀರದಂತೆ ಬರೆಯಬೇಕು.

  • ಒಂದು ಪುಟದಲ್ಲಿ ನಿಮ್ಮ ಹೆಸರು, ವೃತ್ತಿ , ಸಂಪೂರ್ಣ ಅಂಚೆ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು.

  • ಸ್ವರಚನೆಯಾಗಿರಬೇಕು, ಟೈಪ್‌ ಮಾಡಿದ ಅಥವಾ ಪ್ರಿಂಟ್‌ ಅದ ಪ್ರತಿಯನ್ನು ಸ್ವೀಕರಿಸುವುದಿಲ್ಲ.

  • ವಯಸ್ಸು ಅಥವಾ ವಿದ್ಯಾರ್ಹತೆಯ ಯಾವುದೇ ನಿರ್ಬಂಧವಿಲ್ಲ.

  • ವಿಮರ್ಶೆಗಳು ಸೇರಬೇಕಾದ ಕಡೆಯ ದಿನಾಂಕ ಫೆಬ್ರವರಿ 08, 2007.

ಮೊದಲ ಮೂವರು ವಿಜೇತರಿಗೆ ಆಕರ್ಷಕ ನಗದು ಬಹುಮಾನ ದೊರೆಯಲಿದೆ. ಮಾರ್ಚ್‌ 17ರಂದು ನಗರದ ಎ.ಡಿ.ಎ ರಂಗಮಂದಿರದಲ್ಲಿ ನಡೆಯುವ ಡಿವಿಜಿಯವರ ಜನ್ಮದಿನಾಚರಣೆ ಸಮಾರಂಭದಲ್ಲಿ ವಿಜೇತರಿಗೆ ಪ್ರಶ ಸ್ತಿ ನೀಡಲಾಗುವುದು.

ಪ್ರಬಂಧಗಳನ್ನು ಕಳಿಸಬೇಕಾದ ವಿಳಾಸ:

ಸಮಾಜ ಸೇವಕರ ಸಮಿತಿ(ರಿ)
ಕಿಚನ್‌ ಗಾರ್ಡನ್‌, ನಂ.19, 8ನೇ ಅಡ್ಡರಸ್ತೆ,
ಕೈಗಾರಿಕಾ ಪ್ರದೇಶ, ಬನಶಂಕರಿ 2ನೇ ಘಟ್ಟ ,
ಬೆಂಗಳೂರು-560 070

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ರಾಜಕುಮಾರ- 94481 71069
ರಾಘವೇಂದ್ರ-98866 83008

ಅಂತರ್ಜಾಲ ತಾಣ : www.sssglobal.org

(ದಟ್ಸ್‌ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+