ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ-ಡಾಕ್‌ನಿಂದ ಕನ್ನಡ ತಂತ್ರಾಂಶ ಉಪಕರಣ ಬಿಡುಗಡೆ

By Staff
|
Google Oneindia Kannada News

ನವದೆಹಲಿ : ಕೇಂದ್ರ ಸರ್ಕಾರ ಸಿ-ಡಾಕ್‌ ಅಭಿವೃದ್ಧಿಪಡಿಸಿರುವ ಕನ್ನಡ ತಂತ್ರಾಂಶದ ಟೂಲ್‌ಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ದಯಾನಿಧಿ ಮಾರನ್‌ ಬುಧವಾರ(ಜನವರಿ 24) ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಟೂಲ್‌ಗಳನ್ನು ಬಿಡುಗಡೆಗೊಳಿಸಿದರು.

ಕನ್ನಡವೂ ಸೇರಿದಂತೆ ಮರಾಠಿ, ಒರಿಯಾ, ಮಲಯಾಳಂ, ಉರ್ದು, ಪಂಜಾಬಿ ಮತ್ತು ಅಸ್ಸಾಮಿ ಭಾಷೆಗಳ ತಂತ್ರಾಂಶ ಉಪಕರಣ (software tools)ಗಳನ್ನು ಮಾರನ್‌ ಬಿಡುಗಡೆ ಮಾಡಿದರು. ತಂತ್ರಾಂಶ ಸಿಡಿ ರೂಪದಲ್ಲಿ ಲಭ್ಯವಿದೆ. ಅಲ್ಲದೆ ಅಂತರ್ಜಾಲದ ಮೂಲಕವೂ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ಪ್ಯಾಕೇಜ್‌ನಲ್ಲಿ ಲಭ್ಯವಿರುವ ತಂತ್ರಾಶ ಉಪಕರಣಳು:

ಇದರಲ್ಲಿ ಎಲ್ಲಾ ಭಾಷೆಗಳ ಮೂರು ಫಾಂಟ್‌ಗಳು ಲಭ್ಯವಿದೆ. ಇದರ ಜತೆಗೆ ಕೀಬೋರ್ಡ್‌ ಡ್ರೆೃವರ್‌, ಮಲ್ಟಿ ಫಾಂಟ್‌ ಕೀಬೋರ್ಡ್‌ ಎಂಜಿನ್‌, ಯುನಿಕೋಡ್‌ ಕಂಪ್ಲೇಂಟ್‌ ಕೀಬೋರ್ಡ್‌ ಡ್ರೆೃವರ್‌, ಜೆನೆರಿಕ್‌ ಫಾಂಟ್‌ ಕೋಡ್‌ ಮತ್ತು ಸ್ಟೋರೇಜ್‌ ಕೋಡ್‌ ಕನ್ವರ್ಟರ್‌, ಸ್ಪೆಲ್‌ ಚೆಕರ್‌, ದ್ವಿಭಾಷಾ ನಿಘಂಟು, ಭಾಷಾಂತರ ಟೂಲ್‌ ಮತ್ತು ಲ್ಯಾಂಗ್ವೇಜ್‌ ಟ್ಯೂಟರ್‌ ಪ್ಯಾಕೇಜ್‌ ಲಭ್ಯವಿದೆ.

ಸಿ -ಡಾಕ್‌ ಕೆಲವು ವಾರಗಳ ಹಿಂದೆಯಷ್ಟೇ ಭಾರತ್‌ ಅಪರೇಟಿಂಗ್‌ ಸಿಸ್ಟಮ್‌, ನೆಟ್‌ವರ್ಕ್‌ ಗಾರ್ಡ್‌, ಏರಿಯಾ ಟ್ರಾಅಫಿಕ್‌ ಕಂಟ್ರೋಲರ್‌, ಇ- ಸರಳ್‌ ವ್ಯಾಪಾರ್‌ ಸುವಿಧಾ ಹಾಗೂ ಬಾಂಗ್ಲಾ-ಅಸ್ಸಾಮಿ-ಮಣಿಪುರಿ ಸ್ಪೋಕನ್‌ ಕಾರ್ಪೋರಾ ಎಂಬ ಐದು ಹೊಸ ಅನ್ವಯ ತಂತ್ರಾಶಗಳನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X