ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಗಿ ಈರಣ್ಣನವರ ಕನ್ನಡ ಶಾಯಿರಿಗಳು

By Shami
|
Google Oneindia Kannada News

Prof Itagi Eeranna
ಪ್ರೊ.ಇಟಗಿ ಈರಣ್ಣ ಅವರು ಬರೆದ ಕನ್ನಡ ಶಾಯಿರಿಗಳನ್ನು ರೂಪಾಂತರ ಕ್ರಿಯಾಶೀಲ ಜೀವಗಳು ಸಂಸ್ಥೆ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಗದಗಿನಲ್ಲಿ ಮುಕ್ತಾಯಗೊಂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕ ಬಿಸಿ ಬಿಸಿ ಆಮ್ಲೆಟ್ಟುಗಳಂತೆ ಮಾರಾಟವಾಯಿತು. ಪುಸ್ತಕದ ಬೆಲೆ ರೂ.125. ಪುಸ್ತಕಗಳಿಗಾಗಿ [email protected] ಸಂಪರ್ಕಿಸಬಹುದು.

ಕೃತಿಯಲ್ಲಿ ಬದುಕಿನ ವಿವಿಧ ಮಜಲುಗಳನ್ನು ನೇವರಿಸುತ್ತಾ, ಮನುಷ್ಯ ಸ್ವಭಾವಗಳಿಗೆ ಕಚಗುಳಿಗೆಗಳನ್ನು ಕೊಡುವ 180 ಶಾಯಿರಿಗಳಿವೆ. ಆಯ್ದ ಕೆಲವು ಶಾಯಿರಿಗಳು ನಿಮ್ಮ ಸ್ಯಾಂಪಲ್ ಓದಿಗೆ. ಕನ್ನಡ ಶಾಯಿರಿಗಳ ಬಗ್ಗೆ ಪ್ರಜಾವಾಣಿಯಲ್ಲಿ ಬರೆಯುತ್ತಾ ಕ ವೆಂ ರಾಜಗೋಪಾಲ್ ಅವರು ಹೇಳುತ್ತಾರೆ : "ಸಾಮಾನ್ಯರಿಗೂ ಅಸಾಮಾನ್ಯರಿಗೂ 'ಮಜಾ'

* ಈ ಕತ್ತಲ ರಾತ್ರಿ ನಿನ್ನ ದಾರಿ ಕಾದೂ ಕಾದೂ ನನ್ನೆದಿ ಒಂದs ಅಳತಿ ಸುಡಾಕ ಹತ್ತೇತಿ|
ಕತ್ತಲಾಗೇತೆಂತ ಹೆದರಿ ಕುಂದರಬ್ಯಾಡ ನನ್ನ ಸುಡೂ ಎದಿ ನಿನ್ನ ದಾರ್ಯಾಗ ಬೆಳಕು ಚೆಲ್ಲೇತಿ||

* ನನಗನಸತೈತಿ ಈ ಹರಿಯೂ ಬೆಳದಿಂಗಳಾ ಹೆಪ್ಪಾಗಿ ನಿನ್ ಮೈ ಆಗಿರಬೇಕು |
ಇಲ್ಲಾಂದ್ರ ನನ್ನ ಬಿಸಿ ನಿನ್ನ ಮೈಗೆ ತಾಗಿ ಅದು ಕರಗಿ ಈ ಬೆಳದಿಂಗಳಾಗಿ ಹರಡಿರಬೇಕು ||

* ಮುಚ್ಚಿದ ತುಟಿ ನೀ ಬಿಚ್ಚಿ ನಕ್ಕೆಂದ್ರ ಹುಣವಿ ಬೆಳದಿಂಗಳು ಹರಿತೈತಿ |
ಕಟ್ಟಿದ ಮುಡಿ ನೀ ಬಿಚ್ಚಿ ಸವರಿದೆಂದ್ರ ಅಮಾಸಿ ಕತ್ತಲು ಕವೀತೈತಿ ||

* ಮಾತಾಡುವಾಗ ಮುತ್ತು ಕೊಡೋಕೆ ಬರಾಂಗಿಲ್ಲ ಮುತ್ತು ಕೊಡುವಾಗ ಮಾತಾಡಾಕ ಬರಾಂಗಿಲ್ಲ |
ಮುತ್ತಿನಂತಾ ಪ್ರೀತಿ ಮಾತಿನ್ಯಾಕಿ ಆಕಿ ಬೇರೆ ಮಾತಿನ್ಯಾಗ ಮುತ್ತು ಕೊಡತಾಳಲ್ಲ ||

* ಬಡ್ಡಿ ತಗೊಂಡು ಸಾಲಾ ಕೊಡಾಕ ಇದೇನೂ ಬ್ಯಾಂಕ್ ಅಲ್ಲಾ |
ದುಡ್ಡು ತಗೊಂಡು ಪ್ರೀತಿ ಕೊಡಾಕ ನಾನೇನೂ ಸೂಳಿ ಅಲ್ಲಾ ||

* ಎಷ್ಟು ದಿನ ಕಾದಿದ್ವಿ ಈ ರಾತ್ರಿಗೆ |
ಮಾತ್ ಮಾತಿನ್ಯಾಗ ಮುಗಿತಿ ರಾತ್ರಿ ಏನನ್ನಬೇಕು ಈ ನಮ್ಮ ಮಾತಿಗೆ ||

* ಕನ್ನಡದೊಳಗ 'ಶಾಯಿರಿ' ನಂತೂ ಯಾರೂ ಬರೆದಿಲ್ಲ ಇವತ್ತಿನ ತನಕ |
ನನಗಂತೂ ಬರೀಬೇಕನಸತೈತಿ ನಾನಂತೂ ಸಾಯೋತನಕ ||

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X