ಅಸೀಮತೆಯ ಅಮಿತಾಬರಯ್ಯ ಈ ನಮ್ಮ ಸರ್ ಎಂ. ವಿಶ್ವೇಶ್ವರಯ್ಯ

By: ರಾಜ್ ಆಚಾರ್ಯ
Subscribe to Oneindia Kannada

ವಿಶ್ವೇಶ್ವರಯ್ಯನವರನ್ನು ಜಾತಿಯ ಜಂಜಡಕ್ಕೆ ಸಿಲುಕಿಸಿ ಅವರ ಮೇರು ವ್ಯಕ್ತಿತ್ವಕ್ಕೆ ಕುಂದು ತರುವ ವ್ಯರ್ಥ ಪ್ರಯತ್ನದಲ್ಲಿರುವ ಬುದ್ಧಿ ಜೀವಿಗಳು ಎನ್ನಿಸಿಕೊಂಡವರ ಬಗ್ಗೆ ಕನಕರವಿಟ್ಟೆ ಈ ಲೇಖನ ಬರೆಯಲಾಗಿದೆ "ಸರ್ ಅನ್ನೊ ಶಬ್ದ ಬರಲಿಲ್ಲ ಬಿಟ್ಟಿ ಇಂಗ್ಲೆಂಡ್ ರಾಣಿ ಕೊಟ್ಲು ಬೆನ್ನು ತಟ್ಟಿ ಅನ್ನ, ನೀರು ಬಿಟ್ಟು ಕಟ್ಟಿದರು ಕನ್ನಂಬಾಡಿ ಕಟ್ಟೆ ಸಾರೆ ಬಿಟ್ಟರು ಜಗತ್ತಿನೊಳಗೆ ಇಂಜಿನೀಯರ ಗಟ್ಟಿ" "ಗುಡಿಸಿದರೆ ಕಸವಿರಾಬಾರದು ಬಡಿಸಿದರೆ ಹಸಿವಿರಬಾರದು" ಎಂಬಂತೆ ಬಾಳಿ ಬದುಕಿ ವಿಶ್ವ ಚೇತನರು ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನ ಇಂದು. ಸಮಸ್ತ ಮಾನವ ಕುಲ ಈ ದಿನವನ್ನು 'ವಿಶ್ವ ಅಭಿಯಂತರ ದಿನ' ಎಂದೇ ಪರಿಗಣಿಸಿ ಅವರನ್ನು ಅವರ ಕಾಯಕ ನಿಷ್ಟೆಯನ್ನು ನೆನಪಿಸಿಕೊಳ್ಳುತ್ತದೆ. ಆ ಮೂಲಕ ವಿಶ್ವದ ಮಹಾನ್ ಚೇತನಕ್ಕೆ ಈ ದಿನದ ಗೌರವ ಸಮರ್ಪಿತವಾಗಿದೆ.ಕನ್ನಡಿಗರ ಅಭಿಮಾನದ ಆರಾಧ್ಯ ದೈವ ಈ ಅಭಿಯಂತರು ವಿಶ್ವೇಶ್ವರಯ್ಯನವರು.

ಎಲ್ಲಾ ತರತಮಗಳ ಆಚೆ ಇವರ ಅಸೀಮತೆಯನ್ನು ಅರ್ಥೈಸಿಕೊಳ್ಳಲು ನಾವು ಈಗಲೂ ಹೆಣಗುತ್ತಿರುವುದು ನಮ್ಮ ದುರಾದೃಷ್ಟವೆಂದೇ ಹೇಳಬೇಕು. ಜಾತಿ-ಧರ್ಮ-ವರ್ಗಗಳ ಜಂಜಡದಲ್ಲಿ ಅವರನ್ನು ಬಂಧಿಸಿ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಕಾಯಕ ಎಂದಿಗೂ ಸಲ್ಲ. ವಿಕಾರಗಳ ಮರೆತು ವಿಶ್ವಾತ್ಮ ಮಾನವತೆಯನ್ನು ಸಾರಿದ ಆ ಪುಣ್ಯ ಪುರುಷನನ್ನು ನೆನೆಯೋಣ. ಅವರ ಸಾಧನೆಗಳ ಸ್ಮರಿಸೋಣ. ಅವರ ಕಾರ್ಯದಕ್ಷತೆ ಮತ್ತು ಜ್ಞಾನವನ್ನು ಪರಿಗಣಿಸಿ ಆಂಗ್ಲ ಸರ್ಕಾರ ಅವರಿಗೆ ' ನೈಟ್ ಕಮಾಂಡರ್ ಆಫ್ ಇಂಡಿಯನ್ ಎಂಪೈರ್ (ಕೆ ಸಿ ಐ ಇ) ಪ್ರಶಸ್ತಿ ನೀಡಿ ಗೌರವಿಸಿತು. ಆಗ ಭಾರತೀಯ ಪುಡಾರಿಯೊಬ್ಬ ' ನೀವು ಎಂತಹ ದೇಶ ಪ್ರೇಮಿ. ಇದೇ ಪ್ರಶಸ್ತಿಯನ್ನು ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರಿಗೆ ಆಂಗ್ಲ ಸರ್ಕಾರ ನೀಡಿತು ಆದರೆ, ರವೀಂದ್ರರು ಬಂಗಾಳದ ವಿಭಜನೆ ಮಾಡಿದ ಸರ್ಕಾರದ ನೀತಿಯನ್ನು ಖಂಡಿಸಿ ಪ್ರಶಸ್ತಿಯನ್ನು ತಿರಸ್ಕರಿಸಿ ತಮ್ಮ ದೇಶ ಭಕ್ತಿ ಮೆರೆದರು.

Special Article : Sir MV is true Bharat Ratna and inspiration to All

ನೀವು ಸಹ ಹಾಗೆ ಮಾಡಿ ನಿಮ್ಮ ದೇಶ ಪ್ರೇಮವನ್ನು ಮೇರೆಯಿರಿ ' ಎಂದು ಸಲಹೆ ನೀಡಿದರು. ಈ ಗೌರವ ನಾನು ಭಾರತೀಯ ಎಂದು ನನಗೆ ಕೊಡುತ್ತಿಲ್ಲ, ನಾನು ಹೊಂದಿರುವ ಜ್ಞಾನಕ್ಕಾಗಿ ನೀಡುತ್ತಿರುವುದು, ಹಾಗಾಗಿ ಯಾವುದೇ ವ್ಯಕ್ತಿಯ ಜ್ಞಾನಕ್ಕಾಗಿ ನೀಡುವ ಪ್ರಶಸ್ತಿಯನ್ನು ನಿರಾಕರಿಸಬಾರದು.ಹೀಗೆ ಮಾಡುವುದು ಜ್ಞಾನಕ್ಕೆ ಮಾಡುವ ಅವಮಾನ ಹಾಗಾಗಿ ರಾಜಕೀಯವನ್ನು ಇಲ್ಲಿ ನೀವು ಬೆರೆಸಬಾರದು. ಆಂಗ್ಲರ ವಿರುದ್ದ ಈ ರೀತಿಯಲ್ಲಿ ಪ್ರಶಸ್ತಿ ವಿರೋಧಿಸಿ ಚಳುವಳಿ ಮಾಡುವುದಕ್ಕಿಂತ ಬಡತನ ಮುಕ್ತ ಭಾರತ ಮಾಡುವುದು ನಿಜವಾದ ಚಳುವಳಿ ' ಎಂದು ವಿಶ್ವೇಶ್ವರಯ್ಯನವರು ತಿರುಗೇಟು ನೀಡಿದರು. ಸರ್ ಎಂವಿ ಅವರ ಕಾರ್ಯವೈಖರಿ ಹಾಗೂ ದಕ್ಷತೆಗೆ ಬೆರಗಾದ ಆಂಗ್ಲರ ಚೀಫ್ ಸೆಕ್ರೆಟರೀಯಾದ ಮಾಂಟೆಗೋ 1919ರಲ್ಲಿ ರಲ್ಲಿ ಸರ್ ಎಂ ವಿ ಅವರಿಗೆ ತನ್ನ ಸಚಿವ ಮಂಡಲದಲ್ಲಿ ಸ್ಥಾನ ನೀಡಿದಾಗ ಅದನ್ನು ನಯವಾಗಿ ಎಂ. ವಿ ತಿರಸ್ಕರಿಸಿ ತನ್ನ ದೇಶಭಕ್ತಿ ಮೆರೆದರು.

ವಿಶ್ವೇಶ್ವರಯ್ಯನವರ ಪಕ್ಷಿ ನೋಟ : 1. ಕನ್ನಂಬಾಡಿ ಕಟ್ಟೆ ನಿರ್ಮಾತೃ 2 ಹಿಂದೂಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಈಗ HAL 3. ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ 4.ಸರಕಾರಿ ಸಾಬೂನು ಕಾರ್ಖಾನೆ 5.ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 6.ಕನ್ನಡ ಸಾಹಿತ್ಯ ಪರಿಷತ್, 7. ಮೈಸೂರು ವಿಶ್ವವಿದ್ಯಾನಿಲಯ 8 ಶಿವನ ಸಮುದ್ರ ಹಾಗು ಜೋಗ್ ಜಲ ವಿದ್ಯುತ್ ಯೋಜನೆ 9 ಬ್ಲಾಕ್ ಸಿಸ್ಟಮ್ ನೀರಾವರಿ ಯೋಜನೆ 10. ಪ್ಯಾರಾ ಸಿಟಾಯ್ಡ್ ಲ್ಯಾಬೋರೇಟರಿ 11. ಮೈಸೂರು ಸಕ್ಕರೆ ಕಾರ್ಖಾನೆ 12. ಮೈಸೂರು ಸ್ಯಾಂಡಲ್ ಸೋಪು 13. ಭಟ್ಕಳ ಬಂದರು 14. ಶ್ರೀಗಂಧ ಎಣ್ಣೆ ತಯಾರಿಕೆ 15. ಹಿಂದೂ ಮಾರ್ಡನ್ ಹೋಟಲ್ 16. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ 17.ಬೆಂಗಳೂರು ವಿಶ್ವವಿದ್ಯಾನಿಲಯ 18. ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ 19. ಸೆಂಚುರಿ ಕ್ಲಬ್ 20. ಪೂನಾ ಡೆಕ್ಕನ್ ಕ್ಲಬ್ 21. ಹೆಬ್ಬಾಳದ ಗಾಂಧಿ ಕೃಷಿ ವಿಶ್ವವಿದ್ಯಾಲಯ 22.ಗ್ವಾಲಿಯರ್ ಟೈಗರ್ ಡ್ಯಾಂ 23. ಪೂನಾದ ಖಡಕವಾಸ್ಲಾ ಜಲಾಶಯ 24.ಹೈದರಾಬಾದಿನ ಒಳಚರಂಡಿ ವ್ಯವಸ್ಥೆ 25.ಹೈದರಾಬಾದಿನ ಮೂಸಿ ನದಿಯ ಯೋಜನೆ ಆಂಗ್ಲರು ಭಾರತದ ಸಂಪತ್ತನ್ನು ದೋಚಿ ತಮ್ಮ ದೇಶಕ್ಕೆ ರವಾನೆ ಮಾಡಿ, ಅಲ್ಲಿ ಸಿದ್ದಪಡಿಸಿದ ವಸ್ತುಗಳನ್ನು ಭಾರತಕ್ಕೆ ಮಾರಾಟ ಮಾಡಿ. ಭಾರತೀಯ ಗುಡಿ ಕೈಗಾರಿಕೆಗಳನ್ನು ಸಂಪೂರ್ಣ ನಾಶಮಾಡಿ ತಮ್ಮ ಸರಕುಗಳಿಗೆ ಭಾರತವನ್ನು ಮಾರುಕಟ್ಟೆ ಮಾಡಿಕೊಂಡು ತಮ್ಮ ಆರ್ಥಿಕ ಪರಿಸ್ಥಿಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಸರ್ ಎಂ ವಿ ಬ್ರಿಟಿಷರ ವಿರೋಧದ ನಡುವೆಯೂ ಭಾರತೀಯ ಕೈಗಾರಿಕೆಗಳನ್ನು ಉಳಿಸಿ, ಬೆಳೆಸುವ ಹಲವಾರು ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಉಕ್ಕಿನ ಕಾರ್ಖಾನೆಯಂತಹ ಬೃಹತ್ ಕೈಗಾರಿಕೆಯನ್ನು ಸಹ ಆರಂಭಿಸಿ ಜಗತ್ತಿನಲ್ಲಿ ಭಾರತದ ಕೈಗಾರಿಕೆಗಳಿಗೆ ವಿಶ್ವ ಮಾನ್ಯತೆ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ವಿಕೃತ ಮನಸ್ಥಿತಿಯ ಆಂಗ್ಲರಿಗೆ ತಮ್ಮದೇ ರೀತಿಯಲ್ಲಿ ಪೆಟ್ಟುಕೊಟ್ಟವರು ಸರ್ ಎಂ ವಿ ಯವರು. ಇಂತಹ ನಿಜವಾದ ದೇಶಪ್ರೇಮಿಯ ಜನ್ಮದಿನವಿಂದು ನಾವೆಲ್ಲರೂ ಮಾಡುವ ಕಾಯಕದಲ್ಲಿ ಶಿಸ್ತು, ಸಂಯಮ, ಆದರ್ಶಗಳನ್ನು ಅಳವಡಿಸಿಕೊಂಡು ಅವಿರತವಾಗಿ ದುಡಿಯೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Special Article : Sir M Visvesvaraya a notable Indian engineer, scholar, statesman and the Diwan of Mysore during 1912 to 1918. Greatest Indian Engineer Bharat Ratna M. Visvesvaraya was true Bharat Ratna and inspiration to all.
Please Wait while comments are loading...