ಹುಡುಗಿಯರೊಂದಿಗೆ ಓಡಾಟ, ಕೈಕೊಟ್ಟರೆ ಪೊರಪಾಟ
ಬ್ಯಾಚಲರ್
ವೀರರು ಎಲ್ಲಿಗೆ ಹೋಗಲಿ ಬರಲಿ ಏನೇ ಮಾಡಲಿ ಯಾರೂ ಕೇಳುವುದಿಲ್ಲ. ಮನೆಯ ಕಟ್ಟಳೆಗಳು ಇದ್ದರೂ ಅದು ಸ್ವಾತಂತ್ರ್ಯಕ್ಕೆ ಎಂದೂ ಧಕ್ಕೆ ತರುವಂತಾಗಿರುವುದಿಲ್ಲ. ಬೇರೆ ಊರಿಗೆ ಹೋದ ವೀರ ಒಂದೆರಡು ದಿನ ತಡವಾಗಿ ಬಂದರೂ ಅಂತಹ ಪರಿಣಾಮ ಏನೂ ಬೀರುವುದಿಲ್ಲ. ಸ್ನೇಹಿತರೊಂದಿಗೆ ಹರಟೆ, ಪುಂಡಾಟಿಕೆ, ಹಲವಾರು ಹುಡುಗಿಯರೊಂದಿಗೆ ಓಡಾಟ, ಕೈಕೊಟ್ಟರೆ ಪೊರಪಾಟ ಇವೆಲ್ಲವು ವೀರರ ಸಮುದಾಯಕ್ಕೆ ಸೂರ್ಯನ ಹುಟ್ಟಿನಷ್ಟೇ ಸ್ವಾಭಾವಿಕ. ಅವರದೇ ಕನಸಿನ ಲೋಕ. ಆ ಲೋಕದಲ್ಲಿ ಅವರೇ ಮಹಾರಾಜರು. id="toptextpromo">21
ವರ್ಷ ದಾಟಿ ಕೈಯಲ್ಲೊಂದು ಡಿಗ್ರಿ ಬರುತ್ತಿದ್ದಂತೆ ಹಲವರು ಕನಸಿನ ಲೋಕದಿಂದ ಜಾರಿ ವಾಸ್ತವಲೋಕಕ್ಕೆ ಇಳಿಯುತ್ತಾರೆ. ಜವಾಬ್ದಾರಿ ಹೆಚ್ಚಿ ಜೇಬಲ್ಲಿ ಕಾಸು ಆಡಲು ಶುರುವಾಗುತ್ತಿದ್ದಂತೆ ಕನಸಿನ ಕನ್ಯೆಯ ಹುಡುಕುವ, ಸಪ್ತಪದಿ ತುಳಿಯುವ ಕನವರಿಕೆ ಜಾಸ್ತಿಯಾಗುತ್ತ ಸಾಗುತ್ತದೆ. ಮೂವತ್ತಾಗುವುದರೊಳಗೆ ಮದುವೆಯಾಗಿ ಸೆಟ್ಲ್ ಆಗಬೇಕೆಂಬ ಉಮ್ಮೇದು ಕೂಡ ಹೆಚ್ಚುತ್ತದೆ. ಇದಕ್ಕೆ ಗುರುಹಿರಿಯರ ಆಶೀರ್ವಾದ ಇದ್ದೇ ಇರುತ್ತದೆ. id='are-slot-1' class='oiad oi-axt oiadv'> id='top-searched-articles'>ಮದುವೆ
ಮಾಡಿದರೆ ಜವಾಬ್ದಾರಿ ಕಳೆಯಿತು ಎಂದು ತಿಳಿದುಕೊಳ್ಳುವ ಪಾಲಕರು, ವಯಸ್ಸಾಗಿರುವುದೇ ಮದುವೆ ಆಗಿ ಮಕ್ಕಳು ಮಾಡಲು ಎಂದು ತಿಳಿದಿರುವ ಕೆಲವು ಯುವ ಸಮೂಹ, ಮದುವೆಯಾಗದಿದ್ದರೆ ಸಾಮಾಜಿಕ ಮನ್ನಣೆ ದೊರೆಯುವುದಿಲ್ಲ ಎಂದು ಚಿಂತಿಸುವವರ ಸಮೂಹ ಮತ್ತೊಂದುಕಡೆ. ಮದುವೆಯಾಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆಯಾಗಲ್ಲ ಎಂದು ಚಿಂತಿಸುವವರಿಗೂ ಕಮ್ಮಿಯಿರುವುದಿಲ್ಲ. ಒಟ್ಟಿನಲ್ಲಿ ಮದುವೆಯಾಗಬೇಕು, ಹೋಳಿಗೆ ಹಾಕಿಸಬೇಕು ಎಂಬುದೇ ಜೀವನದ ಧ್ಯೇಯವಾಗಿರುತ್ತದೆ. ಅನಿವಾರ್ಯವೋ, ಅಗತ್ಯವೋ ಅಂತೂ ಬಾಸಿಂಗ ಕಟ್ಟಿಕೊಂಡು ಗೃಹಸ್ಥಾಶ್ರಮಕ್ಕೆ ಕಾಲಿಡಲು ವೀರರು ಸಿದ್ಧ.











Click it and Unblock the Notifications