• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆಯಾದ ಗಂಡ ಇಸ್ಪೀಟ್ ಎಲೆಯ ಜೋಕರ್

By * ವಿವೇಕ ಬೆಟ್ಕುಳಿ, ಉತ್ತರ ಕನ್ನಡ
|

ಒಂದು ಮಾತಿದೆ 'ಮದುವೆಯಾದ ಗಂಡಿನ ಸ್ಥಿತಿ ಇಸ್ಪೀಟ್ ಎಲೆಯ ಜೋಕರ್'ನಂತೆ! ಮದುವೆಯಾದವರು ಈ ಮಾತನ್ನು ಒಪ್ತಾರಾ? ಈ ಬಗ್ಗೆ ಇಸ್ಪೀಟ್ ಪಂಡಿತರು ಏನು ಹೇಳ್ತಾರೆ?

ಬೇರೆ ಮನೆಯಿಂದ ಬಂದ ಹೆಣ್ಣಿಗೆ ಪ್ರಬುದ್ಧ ಗಂಡನಾಗಿ, ಮುತ್ತು ಕೊಡುವವಳು ಬಂದಾಗ ತುತ್ತು ಹಾಕಿದ ತಾಯಿಯನ್ನು ಮರೆಯದ ಮಗನಾಗಿ, ಅಕ್ಕ ತಂಗಿಯರ ಜವಾಬ್ದಾರಿ ಅರಿತ ಅಣ್ಣ/ ತಮ್ಮನಾಗಿ, ನಟಿಸಬೇಕಾದ ಪಾತ್ರಗಳು, ಅವನ್ನು ಸುಸೂತ್ರವಾಗಿ ನಿಭಾಯಿಸಬೇಕಾದ ಜವಾಬ್ದಾರಿಯಿದೆಯಲ್ಲ ಅದು ಬಲು ಕಷ್ಟದ್ದು. ಒಂದು ಮಾತನಾಡಿದರೆ ಕಡಿಮೆ ಎರಡು ಮಾತನಾಡಿದರೆ ಹೆಚ್ಚು ಎಂಬಂತೆ ಇರುವುದು ಅವನ ಸ್ಥಿತಿ. ಒಟ್ಟಾರೆ ವೀರನಾಗಿದ್ದ ಯುವಕ ಅನಿವಾರ್ಯವಾಗಿ ಗಂಭೀರನಾಗಬೇಕಾಗುತ್ತದೆ.

ಒಂದು ಹದದಲ್ಲಿ ಸಾಗುತ್ತಿರುವ ಸಂಸಾರದ ಹಳಿ ಹೇಗೆ ತಪ್ಪಿಸಬೇಕೆಂಬುದನ್ನು ಇಂದು ಬರುತ್ತಿರುವ ಧಾರಾವಾಹಿಗಳನ್ನು ನೋಡಿ ಕಲಿಯಬೇಕು. ಅಳಿಯ ಅಲ್ಲ ಮಗಳ ಗಂಡ ಅನ್ನುವ ಹಾಗೆ, ಯಾವುದೇ ಧಾರಾವಾಹಿಗೆ ಏನೇ ಹೆಸರಿಟ್ಟರೂ ಕಥಾ ಹಂದರ ಮಾತ್ರ ಅದೇ. ಅಲ್ಲಲ್ಲಿ ಅಪವಾದಗಳಿರಬಹುದು. ಅತ್ತೆ ಸೊಸೆ ಜಗಳ, ಅನೈತಿಕ ಸಂಬಂಧ, ವ್ಯಾಪಾರದಲ್ಲಿ ಮೋಸ, ಅಳಿಯ ಮನೆ ತೊಳಿಯ, ನಿರುದ್ಯೋಗಿ ಗಂಡ, ಮೂತಿ ತಿವಿಯುವ ಹೆಂಡತಿ... ಒಟ್ಟಿನಲ್ಲಿ ಸಂಸಾರದ ಗುಟ್ಟು ಟಿವಿ ಧಾರಾವಾಹಿಗಳಲ್ಲಿ ರಟ್ಟು.

ಗೆಳೆಯರೊಂದಿಗೆ ಮೊದಲಿನಂತೆ ಪಾರ್ಟಿ ಮಾಡುವಂತಿಲ್ಲ, ಸಿನೆಮಾ ನಾಟಕ ಎಂದು ಬಿಂದಾಸ್ ಆಗಿ ತಿರುಗಾಡುವಂತಿಲ್ಲ. ಪ್ರತಿಯೊಂದಕ್ಕೂ ಅಕೌಂಟು ಪುಸ್ತಕದಲ್ಲಿ ಬರೆದಂತೆ ಹೆಂಡತಿಗೆ ಲೆಕ್ಕ ನೀಡದೆ ಬೇಕೆ ದಾರಿಯೇ ಇಲ್ಲ. ಹತ್ತು ರುಪಾಯಿ ಹೆಚ್ಚು ಖರ್ಚು ಮಾಡಿದರೆ ಇಪ್ಪತ್ತು ರುಪಾಯಿಯಷ್ಟು ಸಿಟ್ಟು ತಿನ್ನಬೇಕು. ಪ್ರತಿ ಸಂಜೆ ಮಲ್ಲಿಗೆ ಹೂವು ತರದೇಹೋದರೆ ಆ ರಾತ್ರಿ ಇನ್ನೊಂದು ತೀರದಲ್ಲಿ ಮಲಗಬೇಕು. ಮದುವೆಯಾದ ಮೇಲೆ ಸಾಕಷ್ಟು ಬದಲಾಗಿದ್ದಾನೆ ಎಂಬಂತಹ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ.

ನಾವು ಧರಿಸುವ ಬಟ್ಟೆ, ಆಡುವ ನುಡಿ, ನಡವಳಿಕೆಗಳಲ್ಲಿ ಹೆಂಡತಿಯ ಛಾಪು ಇರುತ್ತದೆ. ಮಾತು ಕಡಿಮೆಯಾಗುತ್ತದೆ, ಮೌನವೇ ಮಾತಾಡುತ್ತದೆ. ಮದುವೆ ಆಗಿ 9 ತಿಂಗಳಿಗೆ ಮಕ್ಕಳಾದರೆ ಸರಿ, ಇಲ್ಲವಾದರೆ ಎಲ್ಲರ ಪ್ರಶ್ನೆಗೂ ಉತ್ತರಿಸಬೇಕಾದ ಅಗತ್ಯತೆ, ಏನಾದರೂ ತೊಂದರೆ ಇದ್ದರೆ ಇಂತಹ ಡಾಕ್ಟರ ಹತ್ತಿರ ಹೋಗಿ, ಈ ದೇವರಿಗೆ ಹರಕೆ ಮಾಡಿ ಅಂತ ಪುಕ್ಕಟೆ ಸಲಹೆಗಳು ಪುಂಖಾನುಪುಂಖವಾಗಿ ಬರಲು ಆರಂಭಿಸುತ್ತವೆ. ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು? ಮಗುವೊಂದಾದರಂತೂ ಅಲ್ಲಿಗೆ ಮುಗಿಯುತ್ತದೆ ಜೀವನ ಎಂಬ ಮಹಾಭಾರತದ ಅಲ್ಪ ಕಾಲದ ಗಂಭೀರ ಅಧ್ಯಾಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Past, present and future of married man. A system called marriage opens up pandora's box once a man ends his bachelorhood. It crosses through various phases. There is heaven and hell as well. An essay by Vivek Betkuli, Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more