ಗಂಡಿನ ಮದುವೆ : ಭೂತ, ವರ್ತಮಾನ ಮತ್ತು ಭವಿಷ್ಯ

Past, present and future of married man
"ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮದುವೆ ಆಗಲೇಬೇಕು ಅಂದಾಗ ಮಾತ್ರ ಜೀವನ ಸಂಪೂರ್ಣ ಆಗುತ್ತದೆ. ಇಲ್ಲವಾದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಿಲ್ಲ." ಈ ರೀತಿಯಾಗಿ ಯಾವ ಪುಣ್ಮಾತ್ಮ ಸ್ವರ್ಗಕ್ಕೆ ಹೋಗಿ ಹಿಂದಿರುಗಿದವನು ಹೇಳಿದನೋ ಗೊತ್ತಿಲ್ಲ! ಮಾನವ ಯೋಚಿಸಲು ಅರ್ಹತೆ ಇರುವ ಪ್ರಾಣಿ. ಅದಕ್ಕಾಗಿ ವಂಶವನ್ನು ವೃದ್ದಿಸಲು, ಪ್ರಾಯಕ್ಕೆ ಬಂದ ಯವಕ-ಯುವತಿಯರು ತಮ್ಮ ಮೈಥುನ ವಾಂಛೆಯನ್ನು ಈಡೇರಿಸಕೊಳ್ಳಲು ಮದುವೆ ಎಂಬ ಸಂಪ್ರದಾಯ ಸೃಷ್ಟಿಯಾಯಿತು ಎಂಬುದು ನನ್ನ ಮಟ್ಟಿನ ತಿಳಿವಳಿಕೆಯ ಮಾತು. ಅದೇನೆ ಇರಲಿ, ಇಲ್ಲಿ ನಾವು ಯೋಚಿಸುತ್ತಿರುವುದು ಗಂಡು ಜಾತಿಯಲ್ಲಿ ಹುಟ್ಟಿದ ಮನುಷ್ಯನಲ್ಲಿ ಮದುವೆಯ ಮುಂಚೆ, ನಂತರ ಮತ್ತು ಮಕ್ಕಳಾದ ನಂತರ ಹೇಗೆ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ, ಅದರ ಹಿಂದಿನ ಕಾರಣ ಏನು ಎಂಬುದರ ಬಗ್ಗೆ.

ಮದುವೆಗೆ ಮುಂಚೆ ವೀರ
ಮದುವೆ ಆದ ಮೇಲೆ ಗಂಭೀರ
ಮಕ್ಕಳಾದ ಮೇಲೆ ಫಕೀರ!

ಈ ಮಾತು ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕುಮಟಾ ತಾಲೂಕು ಕೋಡ್ಕಣಿಯ ಎನ್ಕೆ ನಾಯ್ಕರು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಪದೇ ಪದೇ ಹೇಳುತ್ತಿದ್ದರು. ಬಹುಶಃ ಮದುವೆಯ ಅವರ ಅನುಭವವೇ ಆ ರೀತಿ ಮಾತಿನಲ್ಲಿ ಹೊರಹೊಮ್ಮಿತಾ ಅಥವಾ ಓದಿ ತಿಳಿದುಕೊಂಡಿದ್ದೋ ಗೊತ್ತಿಲ್ಲ. ಆ ವಿಚಾರದ ಬಗ್ಗೆ ನಾನು ನನ್ನ ಸುತ್ತಮುತ್ತಲಿನ ವೀರ, ಗಂಭೀರ, ಫಕೀರರೊಂದಿಗೆ ಮಾತನಾಡಿದಾಗ ಶೇ. 90ಕ್ಕೂ ಹೆಚ್ಚು ಜನರು ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿರುವುದು ಈ ಹೇಳಿಕೆಯ ಘನತೆಯನ್ನು ಹೆಚ್ಚಿಸಿದೆ.

ಹೌದು ಈ ಬಗ್ಗೆ ಅಂದಿನಿಂದ, ಮದುವೆಯ ಮುಂಚಿನ, ಮದುವೆ ನಂತರದ ಮತ್ತು ಮದುವೆ ಆಗಿ ಮಕ್ಕಳಾದ ಮೇಲಿನ ಗಂಡಿನ ಸ್ಥಿತಿಯ ಬಗ್ಗೆ ನನಗೆ ತುಂಬಾ ಆಸಕ್ತಿ. ಅವರು ನಡೆದುಕೊಳ್ಳುವ ರೀತಿ, ಅವರ ನಡವಳಿಕೆಯಲ್ಲಿ ಆಗುವ ಬದಲಾವಣೆ, ಜನರು ಅವರನ್ನು ನೋಡುವ ರೀತಿ ಈ ಎಲ್ಲವೂ ನಾವು ಬದುಕುತ್ತಿರುವ ಸಮಾಜದಲ್ಲಿ ಸಾಮಾನ್ಯವಾಗಿದ್ದರೂ, ಈ ಬದಲಾವಣೆಗೆ ಪೂರಕವಾದ ಕಾರಣಗಳನ್ನು ಹಂಚಿಕೊಳ್ಳುವುದು ಅಗತ್ಯ ಅಂತ ನನ್ನ ಭಾವನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+