Get Updates
Get notified of breaking news, exclusive insights, and must-see stories!

Amazon Layoffs: ಅಮೆಜಾನ್‌ನಿಂದ ಮತ್ತೆ ಉದ್ಯೋಗ ವಜಾ, ಮೂರೇ ವರ್ಷದಲ್ಲಿ 57,000 ಮಂದಿ ಮನೆಗೆ

Amazon Layoffs: ವಿಶ್ವದ ದಿಗ್ಗಜ ಇ-ಕಾಮರ್ಸ್‌ ಸಂಸ್ಥೆಗಳಲ್ಲಿ ಒಂದಾಗಿರುವ ಅಮೆಜಾನ್ ತನ್ನ ನೌಕರರ ಉದ್ಯೋಗ ವಜಾ ಪ್ರಕ್ರಿಯೆ ಮುಂದುವರಿಸಿದೆ. ಕೋವಿಡ್‌ನಿಂದ ಈವರೆಗೆ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಇದೀಗ ರೊಬೋಟಿಕ್ಸ್ ವಿಭಾಗದ ಉದ್ಯೋಗಿಗಳನ್ನು ವಜಾಗೊಳಿಸಿರುವುದು ದೊಡ್ಡ ಸುದ್ದಿಯಾಗಿದೆ. ಇದರಿಂದ ಕಂಪನಿಯ ಇತರ ನೌಕರರಲ್ಲೂ ವಜಾ ಆತಂಕ ಎದುರಾಗಿದೆ. ಅಮೆಜಾನ್ ಮಾತ್ರವಲ್ಲದೇ ವಿವಿಧ ಕಂಪನಿಗಳಿಂದ 2026ರಲ್ಲಿ ಜಾಗತಿಕವಾಗಿ ಸುಮಾರು 35,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಅಮೆಜಾನ್ ಕಂಪನಿಯು ತನ್ನಲ್ಲಿ ಕೆಲಸ ಮಾಡುತ್ತಿದ್ದ ರೊಬೋಟಿಕ್ಸ್‌ ವಿಭಾಗದ ಸುಮಾರು 100 ಮಂದಿ ನೌಕರರನ್ನು ಮುಲಾಜಿಲ್ಲದೇ ಕೆಲಸದಿಂದ ಕಿತ್ತು ಹಾಕಿದೆ. ವೆಚ್ಚ ಕಡಿತ, ತಂಡದ ಪುನರ್‌ರಚನೆ ಹಾಗೂ ಇನ್ನಿತರ ಕಾರಣಗಳನ್ನು ನೀಡಿರುವ ಕಂಪನಿಯು ವಜಾಗೊಳಿಸಿದೆ ಎಂದು ವರದಿ ಆಗಿದೆ. ಇದು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 57,000 ಮಂದಿಗೆ ಅಮೆಜಾನ್ ಗೇಟ್ ಪಾಸ್ ನೀಡಿದೆ.

Amazon Layoffs

ಮುಲ್ಲಾಜಿಲ್ಲದೇ ನೌಕರರ ವಜಾ, ಕಾರಣವೇನು?

ಕಂಪನಿಯು ಕೆಲಸಗಾರರನ್ನು ಪುನರ್‌ ರಚಿಸುತ್ತಿದೆ. ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ವಜಾ ಪ್ರಕ್ರಿಯೆ ನಡೆಸಿದೆ. ವೈಟ್‌ ಕಾಲರ್ ನೌಕರರನ್ನು ಗೇಟ್ ಪಾಸ್ ನೀಡಿದೆ. ಇದೇ ಕಂಪನಿಯು ಕೋವಿಡ್ ಹೊತ್ತಿನಲ್ಲಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿತ್ತು. ಇದೀಗ ಮುಲ್ಲಾಜಿಲ್ಲದೇ ಮನೆಗೆ ಕಳುಹಿಸಿದೆ.

ಅಮೆಜಾನ್ ಸಿಇಒ ಆಂಡಿ ಜೆಸ್ಸಿ ನೇತೃತ್ವದಲ್ಲಿ ಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮಾಡಲು ಮುಂದಾಗಿದ್ದೇವೆ. ವೆಚ್ಚ ನಿರ್ವಹಣೆ ಮೇಲೆ ಹಿಡಿತ ಸಾಧಿಸಲು, ಅಧಿಕಾರಶಾಹಿಗಳನ್ನು ಇಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಐಬಿಎಂ, ಗೂಗಲ್, ಮೆಟಾ, ಇಂಟೆಲ್, ಸೇರಿದಂತೆ ಕೆಲವು ಕಂಪನಿಗಳು ಉದ್ಯೋಗ ವಜಾ ಮಾಡಿತ್ತು. ಆಗಲೂ ನೌಕರರಿಗೆ ಗೇಟ್‌ ಪಾಸ್ ನೀಡಿದ್ದ ಅಮೆಜಾನ್‌ ತನ್ನ ವಜಾ ಅಭಿಯಾನ ಇಂದಿಗೂ ಮುಂದುವರಿಸಿದೆ.

2026ರಲ್ಲಿ 16,000 ನೌಕರರ ವಜಾ

AI ಬಂದ ಮೇಲೆ ಹೆಚ್ಚಿನ ಉದ್ಯೋಗ ವಜಾ ಆಗಿದೆ. ಕಳೆದ ವರ್ಷ 2025 ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕವಾಗಿ ಬರೋಬ್ಬರಿ 14000 ನೌಕರರಿಗೆ ವಜಾ ಮೇಲ್ ಮಾಡಿತ್ತು. ಪ್ರಸಕ್ತ ವರ್ಷ 2026ರ ಮೊದಲ ತಿಂಗಳಲ್ಲಿ ಸಹ ಒಟ್ಟು ಸುಮಾರು 16,000 ಕಾರ್ಪೊರೇಟ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದೀಗ 100ಕ್ಕೂ ಹೆಚ್ಚು ನೌಕರರು ಮನೆಗೆ ಹೋಗಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದಾಗಿ ಮೆಟಾ, ಒರಾಕಲ್‌ನಿಂದ ಅಮೆಜಾನ್‌ವರೆಗೆ, ಟೆಕ್ ಕಂಪನಿಗಳು ವಿಶ್ವದಾದ್ಯಂತ 35,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+