Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್‌ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ

ಐಟಿ ಸಿಟಿ ಬೆಂಗಳೂರು ಎಂದಾಕ್ಷಣ ಮೊದಲು ನೆನಪಾಗುವುದೇ ಇಲ್ಲಿನ ವಾಹನ ದಟ್ಟಣೆ. ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಹೋಗಲು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯಬೇಕಾದ ಅನಿವಾರ್ಯತೆ ಬಹಳಷ್ಟು ಜನರಿಗಿದೆ.

ಈ ʼಬೆಂಗಳೂರು ಟ್ರಾಫಿಕ್‌ʼ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಮಹಿಳೆಯೊಬ್ಬುರ ಮಾಡಿದ ವಿಶಿಷ್ಟ ಪ್ರಯೋಗವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ಕಚೇರಿಯಿಂದ ಮನೆಗೆ ಪ್ರತಿದಿನ ವಾಹನದಲ್ಲಿ ತೆರಳುವ ಬದಲಿಗೆ ನಡೆದುಕೊಂಡು ಹೋಗುವ ಮೂಲಕ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ ಮತ್ತು ಅನೇಕ ಮಂದಿಗೆ ಸ್ಫೂರ್ತಿಯಾಗಿದ್ದಾರೆ.

Bengaluru

Viral ವಿಡಿಯೋದಲ್ಲಿ ಏನಿದೆ?

ಶಿಲ್ಪಾ ಎಂಬ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ಸ್ವಾರಸ್ಯಕರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಚೇರಿಯ ಕೆಲಸ ಮುಗಿಸಿ, ಟ್ರಾಫಿಕ್‌ನಲ್ಲಿ ವಾಹನಗಳ ಹಾರ್ನ್ ಸದ್ದು ಕೇಳುತ್ತಾ, ಧೂಳು ತಿನ್ನುತ್ತಾ ಹೈರಾಣಾಗಿ ಮನೆ ಸೇರುವ ಬದಲು, ಶಾಂತವಾಗಿ ಪ್ರತಿದಿನ ಆಫೀಸ್‌ನಿಂದ ಮನೆಗೆ ನಡೆದುಕೊಂಡು ಹೋಗಲು ಅವರು ನಿರ್ಧರಿಸಿದರು. ಸತತ ಎರಡು ವಾರಗಳ ಕಾಲ ಈ ದಿನನಿತ್ಯದ ಸಂಜೆಯ ನಡಿಗೆಯನ್ನು ಅವರು ಕಟ್ಟುನಿಟ್ಟಾಗಿ ಅಭ್ಯಾಸ ಮಾಡಿಕೊಂಡಿದ್ದರು. "ನಾನು ಕಳೆದ ಎರಡು ವಾರಗಳಿಂದ ಪ್ರತಿದಿನ ಸಂಜೆ ಆಫೀಸ್‌ನಿಂದ ಮನೆಗೆ ನಡೆಯಲು ನಿರ್ಧರಿಸಿದೆ. ಗೂಗಲ್ ಮ್ಯಾಪ್ (Google Maps) ಪ್ರಕಾರ ನನ್ನ ಆಫೀಸ್‌ನಿಂದ ಮನೆಗೆ 2.7 ಕಿಲೋಮೀಟರ್ ದೂರವಿದ್ದು, ತಲುಪಲು 38 ನಿಮಿಷಗಳ ದಾರಿಯಾಗಿತ್ತು. ಆದರೆ ವಾಸ್ತವದಲ್ಲಿ ಅದಕ್ಕಿಂತ ಸ್ವಲ್ಪ ಹೆಚ್ಚಿನ ಸಮಯವೇ ಹಿಡಿಯುತ್ತಿತ್ತು," ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ.

ಈ ಅಚ್ಚರಿಯ ಪ್ರಯೋಗದಿಂದ ಅವರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಲಾಭಗಳಾಗಿವೆ. ಈ ಕುರಿತು ಅನುಭವ ಹಂಚಿಕೊಂಡಿರುವ ಅವರು, "ಇದರ ಪ್ರಮುಖ ಲಾಭವೆಂದರೆ, ಟ್ರಾಫಿಕ್‌ನಲ್ಲಿ ಕ್ಯಾಬ್ ಅಥವಾ ಬಸ್‌ನಲ್ಲಿ ಕುಳಿತು ಸುಸ್ತಾಗುವ ಬದಲು, ಗಾಳಿಯಲ್ಲಿ ನಡೆದುಕೊಂಡು ಹೋಗಿದ್ದರಿಂದ ನನ್ನ ದೇಹದಲ್ಲಿ ಮೊದಲಿನಗಿಂತ ಬಹಳ ಉತ್ತಮ ಎನರ್ಜಿ ಇತ್ತು. ಅಲ್ಲದೆ, ಪ್ರತಿದಿನ ನಾನು ನಡೆಯಬೇಕೆಂದಿದ್ದ ನನ್ನ ಹೆಜ್ಜೆಗಳ ಗುರಿಯನ್ನು (ಡೈಲಿ ಸ್ಟೆಪ್ ಕೌಂಟ್) ಯಾವುದೇ ಹೆಚ್ಚುವರಿ ವ್ಯಾಯಾಮವಿಲ್ಲದೆ ಸುಲಭವಾಗಿ ತಲುಪಲು ಸಾಧ್ಯವಾಯಿತು," ಎಂದು ಶಿಲ್ಪಾ ಹೇಳಿಕೊಂಡಿದ್ದಾರೆ. ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಐಟಿ ಉದ್ಯೋಗಿಗಳಿಗೆ, ಬೆನ್ನುನೋವು ಮುಂತಾದ ಸಮಸ್ಯೆಗಳನ್ನು ದೂರವಿಡಲು ಇಂತಹ ನಡಿಗೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು.

ಆದರೆ, ಈ ಆರೋಗ್ಯಕರ ಪ್ರಯೋಗದಲ್ಲಿ ಒಂದು ಸಣ್ಣ ತಮಾಷೆಯ ಆರ್ಥಿಕ ನಷ್ಟವೂ ಅವರಿಗೆ ಎದುರಾಗಿದೆ. "ಈ ವಾಕಿಂಗ್‌ನ ಒಂದು ನಕಾರಾತ್ಮಕ ಅಂಶವೆಂದರೆ, ನಾನು ದಾರಿಯಲ್ಲಿ ಬಾಯಾರಿಕೆ ನೀಗಿಸಲು ಪ್ರತಿದಿನ ಎಳನೀರು ಕುಡಿಯುತ್ತಿದ್ದೆ. ಹೀಗಾಗಿ ಕಳೆದ ಎರಡು ವಾರಗಳಲ್ಲಿ ಬರೋಬ್ಬರಿ 840 ರೂಪಾಯಿಗಳನ್ನು ಕೇವಲ ಎಳನೀರಿಗಾಗಿ ಖರ್ಚು ಮಾಡಿದ್ದೇನೆ," ಎಂದು ಅವರು ನಗುತ್ತಲೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಡಿಯೋ ಈಗ ಟ್ರಾಫಿಕ್‌ಗೆ ಬೇಸತ್ತಿರುವ ಬೆಂಗಳೂರಿಗರ ಹೃದಯ ಗೆದ್ದಿದೆ. "ಸಾಧ್ಯವಾದರೆ ನಿಮ್ಮ ಕಚೇರಿ ಹತ್ತಿರವಿದ್ದರೆ ನೀವೂ ಸಹ ಸಂಜೆಯ ನಡಿಗೆಯನ್ನು ರೂಢಿಸಿಕೊಳ್ಳಿ. ಬೆಂಗಳೂರು ಟ್ರಾಫಿಕ್‌ ಕಿರಿಕಿರಿಗಿಂತ ಈ ಸಂಜೆಯ ನಡಿಗೆ ಎಷ್ಟೋ ಉತ್ತಮ" ಎಂದು ಅವರು ವಿಡಿಯೋ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ. ಅನೇಕ ಇನ್ಸ್ಟಾಗ್ರಾಮ್ ಬಳಕೆದಾರರು ಈ ಐಡಿಯಾವನ್ನು ಮೆಚ್ಚಿಕೊಂಡಿದ್ದು, ಕಚೇರಿ ಹತ್ತಿರವಿದ್ದರೆ ವಾಹನ ಬಳಸುವ ಬದಲು ಪರಿಸರ ಸ್ನೇಹಿಯಾಗಿ ಹೀಗೆ ಮಾಡುವುದೇ ಒಳಿತು ಎಂದು ಕಮೆಂಟ್ ವಿಭಾಗದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

ದಿನನಿತ್ಯದ ಕೆಲಸದ ಜಂಜಾಟದಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ತೀರಾ ಕಡಿಮೆ. ಆದರೆ, ಶಿಲ್ಪಾ ಅವರ ಈ ಸಣ್ಣ ಜೀವನಶೈಲಿಯ ಬದಲಾವಣೆ ಎಲ್ಲರಿಗೂ ಒಂದು ಆರೋಗ್ಯಕರ ಸಂದೇಶ ನೀಡಿದೆ. ಒಂದೊಮ್ಮೆ ನಿಮಗೂ ಕಚೇರಿ ಸಮೀಪದಲ್ಲಿದ್ದರೆ, ವಾಹನ ಬಿಟ್ಟು ನೀವೂ ಒಮ್ಮೆ ಇದನ್ನ ಟ್ರೈ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+