ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ
ಪರಿಶಿಷ್ಟ ಜಾತಿ ಸ್ಥಾನಮಾನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದವರು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ಪಡೆಯಲು ಅರ್ಹರು. ಕ್ರಿಶ್ಚಿಯನ್ ಧರ್ಮದಂತಹ ಇನ್ನಿತರ ಧರ್ಮಗಳಿಗೆ ಮತಾಂತರಗೊಂಡರೆ ಆ ವ್ಯಕ್ತಿ ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಇದು ಹಲವು ಸಮುದಾಯದ ಜನರಲ್ಲಿ ಆತಂಕ ಉಂಟು ಮಾಡಿದೆ ಎಂದು ಕೆಲವು ಅಂಶಗಳನ್ನು ಪ್ರಸ್ತಾಪಿಸಿರುವ ಕರ್ನಾಟಕ ಕಾಂಗ್ರೆಸ್ ಅಸಮಾಧಾನ ಹೊರ ಹಾಕಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ 'ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು, ಕ್ರೈಸ್ತರು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರಿಗೆ 'ಎಸ್‌ಸಿ ಹುದ್ದೆ' ನಿರಾಕರಿಸುವ ಕುರಿತು, ಅಲ್ಪಸಂಖ್ಯಾತ ಸಮುದಾಯಗಳ ಬಡ ವರ್ಗಗಳಲ್ಲಿ ಗಂಭೀರ ಆತಂಕ, ಅಶಾಂತಿ ಮತ್ತು ಭಯವನ್ನು ಉಂಟು ಮಾಡಿದೆ ಎಂದಿದೆ.

ಧರ್ಮಾಂತರವಾದ ನಂತರವೂ 'ಎಸ್‌ಸಿ ಹುದ್ದೆ' (ಅಥವಾ ಹಿಂದುಳಿದ ವರ್ಗಗಳ ಹುದ್ದೆ) ನೀಡುವ ಪ್ರಶ್ನೆ, ಸಮಾಜದ ಹಿಂದುಳಿದ ಮತ್ತು ಅತೀ ದೀನ ವರ್ಗಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದು ಕೇವಲ ಸಂವಿಧಾನದ (ಅನುಸೂಚಿತ ಜಾತಿಗಳ) ಆದೇಶ, 1950 ಅನ್ನು ಸರಳವಾಗಿ ವ್ಯಾಖ್ಯಾನಿಸುವ ಮೂಲಕ ನಿರ್ಧರಿಸಲಾಗುವ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಒಂದಷ್ಟು ಅನುಮಾನ ಹಾಗೂ ಮೂಲಭೂತ ಪ್ರಶ್ನೆಗಳನ್ನು ಪಕ್ಷ ಮುಂದಿಟ್ಟಿದೆ.
ಮೂಲಭೂತ ಪ್ರಶ್ನೆಗಳಿಗೆ ಉತ್ತರ ಬೇಕೆಂದ ಕಾಂಗ್ರೆಸ್
* ಧರ್ಮಾಂತರವಾದ ನಂತರ 'ಎಸ್‌ಸಿ ಹುದ್ದೆ' ನೀಡುವ ಪ್ರಶ್ನೆ 21/1/2011ರಿಂದಲೇ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಬಾಕಿಯಿದೆ (Centre, PIL v/s Union of India, Writ Petition 180 of 2004). ಹೀಗಿರುವಾಗ, ದೊಡ್ಡ ಪೀಠಕ್ಕೆ ಒಪ್ಪಿಸದೇ ಇಬ್ಬರು ನ್ಯಾಯಮೂರ್ತಿಗಳ ಪೀಠವು ಈ ವಿಷಯವನ್ನು ಹೇಗೆ ತೀರ್ಮಾನಿಸಬಹುದು? ಎಂದು ಕೇಳಿದೆ.
* ಈ ವಿಷಯ ಈಗಾಗಲೇ 3 ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಯಲ್ಲಿದೆ ಎಂಬುದನ್ನು ಪ್ರಧಾನಮಂತ್ರಿ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಏಕೆ ತಿಳಿಸಲಿಲ್ಲ? ಇದು ಸರ್ಕಾರದ ಉದ್ದೇಶಪೂರ್ವಕ ನಡೆನಾ? ಎಂದು ಅನುಮಾನ ಹೊರ ಹಾಕಿದೆ.
21/1/2011ರಂದು ಸುಪ್ರೀಂ ಕೋರ್ಟ್ ಈ ಪ್ರಶ್ನೆಯನ್ನು ವಿಚಾರಣೆಗಾಗಿ ರೂಪಿಸಿದೆ ಎಂಬುದನ್ನು ಸರ್ಕಾರ ಏಕೆ ತಿಳಿಸಲಿಲ್ಲ? 2022ರಲ್ಲಿ ಈ ವಿಷಯವನ್ನು ಪರಿಶೀಲಿಸಲು ಮಾಜಿ ಮುಖ್ಯ ನ್ಯಾಯಮೂರ್ತಿ ಜಿ. ಬಾಲಕೃಷ್ಣನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಅದರ ವರದಿ ಇನ್ನೂ ಬಾರದಿರುವುದನ್ನು ಸರ್ಕಾರ ಏಕೆ ತಿಳಿಸಲಿಲ್ಲ? ಹಾಗಿದ್ದರೆ, ಈ ವಿಷಯವನ್ನು ಮುಂಚಿತವಾಗಿ ಹೇಗೆ ನಿರ್ಧರಿಸಬಹುದು? ಇದು ನ್ಯಾಯಾಲಯವನ್ನು ತಪ್ಪು ದಾರಿಗೆಳೆಯುವ ಉದ್ದೇಶಪೂರ್ವಕ ಪ್ರಯತ್ನವಲ್ಲವೇ?.
* ಸುಪ್ರೀಂ ಕೋರ್ಟ್‌ನ ಈ ಪ್ರಕರಣವು 'ಎಸ್‌ಸಿ ಅಟ್ಟ್ರಾಸಿಟೀಸ್ ಕಾಯ್ದೆ'ಗೆ ಸಂಬಂಧಪಟ್ಟದ್ದೇ ಹೊರತು ಮೀಸಲಾತಿಗೆ ಸಂಬಂಧಪಟ್ಟದಲ್ಲ ಎಂಬ ಸರ್ಕಾರದ ವಾದ ಸರಿಯೇ? ಇದು ತಪ್ಪು ಹಾಗೂ ಅಸಂಗತವಾದ. ಒಬ್ಬ ವ್ಯಕ್ತಿ 'ಮೀಸಲಾತಿಗೆ' ಎಸ್‌ಸಿ ಆಗಿ ಪರಿಗಣಿಸಲ್ಪಟ್ಟು, 'ಅಟ್ಟ್ರಾಸಿಟೀಸ್ ಕಾಯ್ದೆ'ಗೆ ಮಾತ್ರ ಎಸ್‌ಸಿ ಅಲ್ಲ ಎಂದು ಹೇಳುವುದು ಸಾಧ್ಯವೇ?
* ಅಲ್ಪಸಂಖ್ಯಾತರಿಗೆ ಮೀಸಲಾತಿ ಲಾಭಗಳನ್ನು ನಿರಾಕರಿಸುವ ಬಿಜೆಪಿಯ ರಾಜಕೀಯ ನಿಲುವಿನಿಂದಲೇ ಈ ಭೇದಭಾವ ಮೂಡಿದುದೇ?. ಸಂಸತ್ತಿನಲ್ಲಿ 1996ರಲ್ಲಿ ಕ್ರೈಸ್ತ ಧರ್ಮಾಂತರಿತ ಎಸ್‌ಸಿಗಳಿಗೆ ಎಸ್‌ಸಿ ಹುದ್ದೆ ವಿಚಾರ ಪ್ರಸ್ತಾಪಿಸಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಒಂದಷ್ಟು ಅಂಶಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ರಾಜಕೀಯ ಇರುವ ಬಗ್ಗೆ ಅನುಮಾನ ಹೊರ ಹಾಕಿದೆ.
-
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ













Click it and Unblock the Notifications