2021ರಲ್ಲಿ ಮೋದಿ ಸರ್ಕಾರ ತೆಗೆದುಕೊಂಡ 6 ಪ್ರಮುಖ ನಿರ್ಧಾರಗಳು

ಮೋದಿ ಸರ್ಕಾರಕ್ಕೆ 2021 ಕೆಲವು ಕಠಿಣ ಸವಾಲುಗಳನ್ನು ಒಡ್ಡಿತ್ತು. ಕೋವಿಡ್ 19, ಲಡಾಖ್‌ನ ಗಡಿಯುದ್ದಕ್ಕೂ ಚೀನಾ ತಂಟೆ, ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ರೈತರ ಪ್ರತಿಭಟನೆ ಹೀಗೆ ಹತ್ತು ಹಲವು.

ವರ್ಷವಿಡೀ ಮೋದಿ ಸರ್ಕಾರವು ಹಲವು ಸವಾಲುಗಳನ್ನು ಎದುರಿಸುತ್ತಲೇ ಇದ್ದುದರಿಂದ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು. ಆ ಕೆಲವು ನಿರ್ಧಾರಗಳನ್ನು ನಾವು ನೋಡೋಣ..

ಮೂರು ಕೃಷಿ ಕಾನೂನು ಹಿಂತೆಗೆತ: ಕಳೆದ ವರ್ಷ ನವೆಂಬರ್ ತಿಂಗಳಿನಿಂದ ಮುಖ್ಯವಾಗಿ ಪಂಜಾಬ್ ಹಾಗೂ ಹರ್ಯಾಣದ ಸಾವಿರಾರು ರೈತರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

Year End Special 2021: 6 Key Decisions Taken By Modi Govt This Year

ಮೋದಿ ಸರ್ಕಾರ ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಲು ಮನಸ್ಸು ಮಾಡಿರಲಿಲ್ಲ. ಹಾಗಾಗಿ ನವೆಂಬರ್ 19ರಂದು ತಮ್ಮ ಸರ್ಕಾರದ ಮೂರು ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದರು. ಇದು ವರ್ಷವಿಡೀ ನಡೆಯುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಿತು.

ಉಚಿತ ಕೋವಿಡ್ 19 ಲಸಿಕೆಗಳು: ಭಾರತವು ಎರಡನೇ ಕೋವಿಡ್ ಅಲೆಯಿಂದ ತತ್ತರಿಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಲಸಿಕೆ ಅಭಿಯಾನವನ್ನು ವಿಸ್ತರಿಸಲಾಯಿತು.

ಆದಾಗ್ಯೂ, ಲಸಿಕೆಗಳ ಕೊರತೆಯಿಂದಾಗಿ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ಅಭಿಯಾನವನ್ನು ನಿಲ್ಲಿಸಿದರು ಇದು ದೇಶದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸರ್ಕಾರವನ್ನು ಪ್ರಶ್ನಿಸುವುದರೊಂದಿಗೆ ಜೂನ್ 7 ರಂದು ಪ್ರಧಾನಿ ಮೋದಿ ಅವರು ಎಲ್ಲಿರಿಗೂ ಉಚಿತ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದರು. ಕೇಂದ್ರವು ತಯಾರಕರಿಂದ ಶೇ.75ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಲಿದೆ ಎಂದು ಮೋದಿ ಹೇಳಿದ್ದರು.

7 ಹೊಸ ರಕ್ಷಣಾ ಕಂಪನಿಗಳು: ರಕ್ಷಣಾ ವಲಯದ ಶಸ್ತ್ರಾಸ್ತ್ರಗಳನ್ನು, ಸಾಧನಗಳನ್ನು ತಯಾರಿಸುವ ಸಾರ್ವಜನಿಕ ವಲಯದ 7 ಹೊಸ ರಕ್ಷಣಾ ಕಂಪನಿಗಳನ್ನು ಅಕ್ಟೋಬರ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ರಕ್ಷಣಾ ಸಚಿವಾಲಯದಿಂದ ಈ ಉದ್ದಿಮೆಗಳಿಗೆ 65,000 ಕೋಟಿ ರೂ. ಮೊತ್ತದ ಆರ್ಡರ್‌ಗಳು ದೊರೆಯಲಿವೆ. ಹಳೆಯ ಶಸ್ತ್ರಾಸ್ತ್ರ ಕಾರ್ಖಾನೆಗಳ ಮಂಡಳಿಯನ್ನು (ಒಎಫ್‌ಬಿ) ವಿಸರ್ಜಿಸಿ, ಹೊಸ 7 ಸಾರ್ವಜನಿಕ ವಲಯದ ಕಂಪನಿ (ಪಿಎಸ್‌ಯು)ಗಳನ್ನು ಸ್ಥಾಪಿಸಲಾಗುತ್ತಿದೆ.

ಶಸ್ತ್ರಾಸ್ತ್ರ ಉತ್ಪಾದನೆಯ ಹೊಸ ಕಾರ್ಖಾನೆಗಳಿಗೆ ಸರಕಾರ ಮುಂಗಡವನ್ನೂ ಪಾವತಿಸಲಿದೆ. ರಕ್ಷಣಾ ಇಲಾಖೆ, ಕೇಂದ್ರ ಮೀಸಲು ಪೊಲೀಸ್‌ ಪಡೆ ಮತ್ತು ರಾಜ್ಯ ಸರಕಾರಗಳು ಅವುಗಳಿಗೆ ಹೊಸ ಕಾರ್ಪೊರೇಟ್‌ ಸ್ವರೂಪವನ್ನು ನೀಡಲು ಸಹಕರಿಸಲಿವೆ. ಶಸ್ತ್ರಾಸ್ತ್ರಗಳ ಉತ್ಪಾದನಾ ಕಾರ್ಖಾನೆಗಳಿಗೆ ಕಾರ್ಪೊರೇಟ್‌ ಸ್ವರೂಪ ನೀಡುವುದಕ್ಕಾಗಿ ಈ ಹೊಸ ಕಾರ್ಖಾನೆಗಳನ್ನು ಆರಂಭಿಸಲಾಗಿದೆ.

ಸಿಎಪಿಎಫ್‌, ರಾಜ್ಯ ಪೊಲೀಸ್‌ ಇತ್ಯಾದಿ ಸಂಸ್ಥೆಗಳ ಗುತ್ತಿಗೆಗಳನ್ನು ಸಂಯೋಜಿಸಿ 66 ಒಪ್ಪಂದಗಳಾಗಿಸಿ 65,000 ಕೋಟಿ ರೂ.ಗಳ ಆರ್ಡರ್‌ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಹೊಸ ಕಂಪನಿಗಳಿಗೆ 7,100 ಕೋಟಿ ರೂ ಮುಂಗಡ ಹಣವನ್ನು ಪಾವತಿಸಲಾಗಿದೆ.

ಸೇನೆಯ ಕಾರ್ಯಾಚರಣೆಗೆ ಬೇಕಾಗುವ ನೂತನ ಅವನಿ ಶಸ್ತ್ರಾಸ್ತ್ರ ವಾಹನಗಳ ಉತ್ಪಾದನೆಗೆ ದೊಡ್ಡ ಮೊತ್ತದ ಆರ್ಡರ್‌ ನೀಡಲಾಗುವುದು. ಅರ್ಜುನ್‌ ಯುದ್ಧ ಟ್ಯಾಂಕರ್‌ಗಳ ನಿರ್ಮಾಣಕ್ಕೂ ಆದೇಶಿಸಲಾಗುವುದು.

ಸೇನೆ ಮತ್ತು ಪೊಲೀಸ್‌ ಇಲಾಖೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಕೂಡ ತಯಾರಿಸಲಾಗುವುದು. ಆತ್ಮನಿರ್ಭರ್‌ ಪ್ಯಾಕೇಜ್‌ ಅಂಗವಾಗಿ ಒಎಫ್‌ಬಿಯನ್ನು ವಿಸರ್ಜಿಸಿ 7 ಪಿಎಸ್‌ಯುಗಳಾಗಿಸಲಾಗಿದೆ. ಅವುಗಳಿಗೆ ಸ್ವಾಯತ್ತತೆ ನೀಡಲಾಗುತ್ತಿದೆ. ರಕ್ಷಣಾ ಉತ್ಪಾದನೆಯಲ್ಲಿ ಉತ್ತರದಾಯಿತ್ವ, ದಕ್ಷತೆ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ: ಜುಲೈನಲ್ಲಿ ಮೋದಿ ಸರ್ಕಾರವು ಕೋವಿಡ್ ಅಲೆ, ಐಟಿ ನಿಯಮಗಳು ಹಾಗೂ ರೈತರ ಪ್ರತಿಭಟನೆ ಸೇರಿದಂತೆ ಹಲವು ಟೀಕೆಗಳನ್ನು ಎದುರಿಸುತ್ತಿತ್ತು. ಈ ಸವಾಲುಗಳನ್ನು ಎದುರಿಸಲು ಮೋದಿ ಸರ್ಕಾರ ಸಾಕಷ್ಟು ಬದಲಾವಣೆಗಳನ್ನು ಮಾಡಿತು.

ಡಾ. ಹರ್ಷವರ್ಧನ್, ರವಿಶಂಕರ್ ಪ್ರಸಾದ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ಪ್ರಕಾಶ್ ಜಾವಡೇಕರ್ ಸೇರಿದಂತೆ ಹಲವು ಸಚಿವರನ್ನು ಕೈಬಿಟ್ಟಿತ್ತು. ನಂತರ ಜುಲೈ 7 ರಂದು ಸಂಪುಟ ಪುನಾರಚನೆ ನಡೆಯಿತು.

ಇದರಲ್ಲಿ ಹಲವಾರು ಪ್ರಮುಖ ನಾಯಕರು ಅಂದರೆ ಜ್ಯೋತಿರಾದಿತ್ಯ ಸಿಂಧಿಯಾ, ಮನ್ಸುಖ್ ಮಾಂಡವೀಯಾ ಸೇರಿದಂತೆ ಹಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು.

ಗತಿ ಶಕ್ತಿ ಯೋಜನೆ: ಕೊರೊನಾ ಕಾರಣ ಹಳಿ ತಪ್ಪಿದ್ದ ದೇಶದ ಆರ್ಥಿಕತೆ ಮತ್ತೆ ನಿಧಾನಗತಿಗೆ ಹಳಿಗೆ ಮರಳುತ್ತಿದೆ. ಅದಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಹೊಸ ಯೋಜನೆಗಳನ್ನು ನಿರಂತರವಾಗಿ ಆರಂಭಿಸಲಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ವರ್ಷ ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯ ಮೂಲಕ ಮಾಡಿದ ತಮ್ಮ ಭಾಷಣದಲ್ಲಿ "ಗತಿ ಶಕ್ತಿ ಯೋಜನೆ" ಯನ್ನು ಘೋಷಿಸಿದ್ದರು. 100 ಲಕ್ಷ ಕೋಟಿಯ ಈ ಯೋಜನೆಗೆ ನಾಳೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯನ್ನು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸುಧಾರಿಸಲು ಬಳಸಲಾಗುತ್ತದೆ.

ಈ ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯದ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 100 ಲಕ್ಷ ಕೋಟಿ ರೂಪಾಯಿಗಳ ಈ ಯೋಜನೆಯನ್ನು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬಳಸಲಾಗುತ್ತಿದೆ.

ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯ ಮೂಲಕ ದೇಶದ ಯುವಕರಿಗೆ ಉದ್ಯೋಗಾವಕಾಶಗಳನ್ನು (Employement Generation) ಒದಗಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯದ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಯ ಮೂಲಕ ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಗುರಿ ಇದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೆ ಕಾರಣವಾಗಲಿದೆ.

ಆಗಸ್ಟ್ 15 ರಂದು ಯೋಜನೆಯನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆಯಲ್ಲಿ ರೈಲ್ವೆ, ರಸ್ತೆಗಳು ಮತ್ತು ಹೆದ್ದಾರಿಗಳು, ಪೆಟ್ರೋಲಿಯಂ ಮತ್ತು ಅನಿಲ, ವಿದ್ಯುತ್, ದೂರಸಂಪರ್ಕ, ಹಡಗು, ವಾಯುಯಾನ ಮತ್ತು ಕೈಗಾರಿಕಾ ಪಾರ್ಕ್ ಇಲಾಖೆಗಳು ಸೇರಿದಂತೆ ಕೇಂದ್ರ ಸರ್ಕಾರದ 16 ಇಲಾಖೆಗಳು ಒಳಗೊಳ್ಳಲಿವೆ ಎಂದು ಹೇಳಿದ್ದರು. ಕೇಂದ್ರದ ಎಲ್ಲಾ 16 ಇಲಾಖೆಗಳ ಉನ್ನತ ಅಧಿಕಾರಿಗಳ ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ ರಚಿಸಲಾಗುವುದು ಎಂದು ಅವರು ಹೇಳಿದ್ದರು.

ಐಟಿ ನಿಯಮ 2021: ಫೆಬ್ರವರಿ 25ರಂದು ಕೇಂದ್ರ ಹೊಸ ಐಟಿ ನಿಯಮವನ್ನು ರೂಪಿಸಿತು. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ಡಿಜಿಟಲ್ ಪೋರ್ಟಲ್‌ಗಳ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ರೂಪಿಸಲು ಅದನ್ನು ಕಡ್ಡಾಯಗೊಳಿಸಿತು.

ಈ ಹೊಸ ನಿಯಮ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಹೇಳುವ ಕೆಲವು ಡಿಜಿಟಲ್ ಪೋರ್ಟಲ್‌ಗಳು ಮತ್ತು ಕೇಂದ್ರದ ನಡುವಿನ ಬಿಕ್ಕಟ್ಟಿಕ್ಕೆ ಕಾರಣವಾಯಿತು. ಆದರೆ ಕೇಂದ್ರ ಸರ್ಕಾರವು ಹೊಸ ಕಾನೂನುಗಳ ಬಗ್ಗೆ ದೃಢವಾಗಿದೆ. ಅವುಗಳನ್ನು ಅನುಸರಿಸಲು ಒಟಿಟಿ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳನ್ನು ಕೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+