ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020 ವರ್ಷಾಂತ್ಯದಲ್ಲಿ ಘೋರ ಪರಿಸ್ಥಿತಿಯ ಎಚ್ಚರಿಕೆ ಕೊಟ್ಟ WFP

|
Google Oneindia Kannada News

ಇಡೀ ವಿಶ್ವಕ್ಕೆ ಕೊರೋನಾ ತಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಲಕ್ಷಾಂತರ ಸಂಸ್ಥೆಗಳು ನೆಲಕಚ್ಚಿವೆ. ಕೋಟ್ಯಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ದುಡಿವ ಕೈಗಳಿಗೆ ಕೆಲಸವಿಲ್ಲದೆ ಬಡಜನರು ಪಾತಾಳಕ್ಕೆ ಕುಸಿದುಹೋಗಿದ್ದಾರೆ. ದುಡಿವ-ಕೊಳ್ಳುವ ಶಕ್ತಿ ಅವಕಾಶಗಳೆರಡೂ ಅವರ ಪಾಲಿಗೆ ಇಲ್ಲವಾಗಿದೆ. ಏತನ್ಮಧ್ಯೆ ವಿಶ್ವದಾಧ್ಯಂತ 'ಹಸಿವು' ದುಪ್ಪಟ್ಟಾಗಿದೆ.

2020 ಡಿಸೆಂಬರ್ ಮಾಸಕ್ಕೆ ಕಳೆದ ಸಾಲಿಗಿಂತ ಎರಡು ಪಟ್ಟು ಹೆಚ್ಚಿನ ಜನ ಹಸಿವಿನಿಂದ ಬಳಲುವ ಘೋರ ಪರಿಸ್ಥಿತಿ ಎದುರಾಗಲಿದೆ ಎಂದು World Food Programme ಎಚ್ಚರಿಸಿದೆ. WFPಗೆ 2020ರ ನೊಬೆಲ್ ಶಾಂತಿ ಪುರಸ್ಕಾರ ದೊರೆತ ಹಿನ್ನೆಲೆಯಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.

ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪುರಸ್ಕಾರದ ಗೌರವವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪುರಸ್ಕಾರದ ಗೌರವ

1961ರಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇತೃತ್ವದಲ್ಲಿ ಸ್ಥಾಪಿತವಾದ ವಿಶ್ವ ಆಹಾರ ಯೋಜನೆ (World Food Programme) WFPಗೆ 2020ರ ನೊಬೆಲ್ ಶಾಂತಿ ಪುರಸ್ಕಾರ ಸಂದಿರುವ ಹಿನ್ನೆಲೆಯಲ್ಲಿ ಮನದುಂಬಿ ಮಾತನಾಡಿರುವ WFP ನಿರ್ದೇಶಕ 'ತಮ್ಮ ಸಂಸ್ಥೆಯ ಸಾವಿರಾರು ಕಾರ್ಯಕರ್ತರ ಕೆಲಸವನ್ನು ಗುರುತಿಸಿ ಗೌರವಿಸಿದಂತಾಗಿದೆ' ಎಂದು ಬಣ್ಣಿಸಿದ್ದಾರೆ. ಮುಂದೆ ಓದಿ...

"ಹಸಿವಿದ್ದಲ್ಲಿ ಶಾಂತಿಯುತ ವಿಶ್ವವನ್ನು ಕಾಣಲಾಗದು"

WFP ವಿಶ್ವದಾದ್ಯಂತ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಸುಮಾರು 100 ಮಿಲಿಯನ್ ಜನರಿಗೆ ಆಹಾರ ಒದಗಿಸುತ್ತಿದೆ. ಸಂಸ್ಥೆಯ ಒಟ್ಟು 17,000 ಉದ್ಯೋಗಿಗಳ ಪೈಕಿ ಸುಮಾರು ಶೇಕಡಾ 90ರಷ್ಟು ಮಂದಿ WFP ನೆರವು ನೀಡುತ್ತಿರುವ ರಾಷ್ಟ್ರಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಸಂಘರ್ಷವಿದೆಯೋ ಅಲ್ಲಿ ಹಸಿವಿದೆ. ಎಲ್ಲಿ ಹಸಿವಿದೆಯೋ ಅಲ್ಲಿ ಸಾಮಾನ್ಯವಾಗಿ ಸಂಘರ್ಷವಿದೆ. ಹಾಗಾಗಿ ಆಹಾರ ಭದ್ರತೆ, ಶಾಂತಿ ಮತ್ತು ಸುಸ್ಥಿರತೆ ಒಂದಕ್ಕೊಂದು ಪೂರಕವಾಗಿ ಮುನ್ನಡೆಯುವಂಥವು. ಶಾಂತಿ ಇಲ್ಲದೆ ನಾವು ಹಸಿವಿಲ್ಲದ ವಿಶ್ವವನ್ನು ಕಟ್ಟಲಾರೆವು. ಹಸಿವಿದ್ದಲ್ಲಿ ಶಾಂತಿಯುತ ವಿಶ್ವವನ್ನು ಕಾಣಲಾಗದು-WFP.

 ಹಸಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದೆ ಕೋವಿಡ್

ಹಸಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದೆ ಕೋವಿಡ್

ವಿಶ್ವದಾದ್ಯಂತ ಪ್ರತಿ 9 ಮಂದಿಯಲ್ಲೊಬ್ಬರಿಗೆ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿಯಲ್ಲಿಟ್ಟುಕೊಳ್ಳಲು ಅಗತ್ಯವಿರುವ ಗುಣಮಟ್ಟದ ಆಹಾರ ನಿರಂತರವಾಗಿ ಲಭ್ಯವಾಗುತ್ತಿಲ್ಲ. ಅಂದರೆ ವಿಶ್ವದಾದ್ಯಂತ 820 ಮಿಲಿಯನ್ ಮಂದಿಗೆ ಗುಣಮಟ್ಟದ ಆಹಾರ ದಿನಂಪ್ರತಿ ಸಿಗುತ್ತಿಲ್ಲವೆಂದರ್ಥ.
ಹಸಿವೆಂಬುದು ಏನು ಬೇಕಾದರೂ ಮಾಡಬಹುದು. ಮುಂದೊಂದು ದಿನ ಯುದ್ಧಕ್ಕೆ ನಾಂದಿಯಾಗಬಹುದು. ತೀವ್ರವಾದ ಹಸಿವು ವಿಶ್ವದಾದ್ಯಂತ ಕಾಣಿಸುತ್ತಿದೆ. ಈಗಿನ ಹವಾಮಾನ ವೈಪರೀತ್ಯ ಹಾಗೂ ಕೋವಿಡ್-19 ಇದನ್ನು ಇನ್ನಷ್ಟು ಜಟಿಲಗೊಳಿಸಿದೆ.

ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!

 2019ರಲ್ಲಿ 88 ದೇಶದ 97 ಮಿಲಿಯನ್ ಜನರಿಗೆ ನೆರವು

2019ರಲ್ಲಿ 88 ದೇಶದ 97 ಮಿಲಿಯನ್ ಜನರಿಗೆ ನೆರವು

WFP ಸಂಸ್ಥೆ ಆರಂಭವಾದಾಗ ಆಗಿನ ಅಮೆರಿಕಾದ ಅಧ್ಯಕ್ಷ ಡ್ವೈಟ್ ಐಶೆನ್ "ನನ್ನ ದೇಶವೂ ಸೇರಿದಂತೆ ಅನೇಕ ದೇಶಗಳು ಅಗತ್ಯಕ್ಕಿಂತ ಹೆಚ್ಚಿನ ಆಹಾರ ಉತ್ಪಾದನೆ ಮಾಡುತ್ತಿವೆ. ಅಂತೆಯೇ ಅಭಿವೃದ್ಧಿ ಶೀಲ ಹಾಗೂ ಬಡ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಹಸಿವಿನಿಂದ, ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಅದನ್ನು ನಾವು ಮರೆಯಬಾರದು" ಎಂದು ಉದ್ಘರಿಸಿದ್ದರು. ಜೊತೆಗೆ ಪ್ರತಿ ಬಾರಿ ಇಂಥವೇ ಮಾತುಗಳನ್ನು ನಾವು ಹೇಳುತ್ತಿರಬಾರದೆಂದೂ ಹೇಳಿದ್ದರು.
ಅಮೆರಿಕಾ, ಹಲವು ರಾಷ್ಟ್ರಗಳಿಗೆ ಆಹಾರ ಸರಬರಾಜು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇತರೆ ದೇಶಗಳೂ ಇದಕ್ಕೆ ವಿಶ್ವಸಂಸ್ಥೆಯ ಮೂಲಕ ಜೊತೆಯಾಗಬೇಕೆಂದು ಐಸೆನ್ ಹೋವರ್ ತಾಕೀತು ಮಾಡಿದ್ದರು. WFP ವಿಶ್ವದ ಅತಿ ದೊಡ್ಡ ಸೇವಾ ಯೋಜನೆಯಾಗಿದೆ. 2019ರಲ್ಲಿ ಸುಮಾರು 88 ದೇಶದ 97 ಮಿಲಿಯನ್ ಜನರಿಗೆ ಇದರ ನೆರವು ದೊರೆತಿದೆ.

“ಮನುಕುಲ ಶಾಂತಿ ಸ್ಥಾಪಿಸದ ಹೊರತು ಹಸಿವನ್ನು ನೀಗಿಸಲು ಸಾಧ್ಯವಿಲ್ಲ”

“ಮನುಕುಲ ಶಾಂತಿ ಸ್ಥಾಪಿಸದ ಹೊರತು ಹಸಿವನ್ನು ನೀಗಿಸಲು ಸಾಧ್ಯವಿಲ್ಲ”

ವಿಶ್ವ ಆಹಾರ ಯೋಜನೆಯು ಹಲವು ರಾಷ್ಟ್ರಗಳ ಜನರಿಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಬೇಕಾದ ನೇರ ನೆರವು ನೀಡುತ್ತದೆ. ವಿಶೇಷವಾಗಿ ಯುದ್ಧ, ಬರ, ನೆರೆ, ಬೆಳೆ ನಾಶ, ಸಾಮಾಜಿಕ ಸಂಘರ್ಷಗಳು ಹಾಗೂ ನೈಸರ್ಗಿಕ ವಿಕೋಪಗಳಂಥ ಸಂದರ್ಭಗಳಲ್ಲಿ ನೇರವಾದ ನೆರವು ನೀಡುತ್ತಾ ಬಂದಿದೆ. ಇಂಥ ತುರ್ತುಗಳು ಬಂದಾಗ WFP ಸಿಬ್ಬಂದಿ ಅಲ್ಲಿಗೆ ಬೇಕಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಾರೆ.

ವಿಶ್ವದೆಲ್ಲೆಡೆಯ ಸಂಘರ್ಷಗಳು ಮತ್ತು ಹಸಿವಿನ ನಡುವೆ ಸಂಬಂಧವನ್ನು ನೊಬೆಲ್ ಪ್ರಶಸ್ತಿ ಗುರುತಿಸಿದೆ. 2018ರ ವಿಶ್ವ ಸಂಸ್ಥೆಯ ಭದ್ರತಾ ಸಭೆಯ ಸಂಕಲ್ಪದಲ್ಲಿ "ಮನುಕುಲ ಶಾಂತಿಯನ್ನು ಸ್ಥಾಪಿಸದ ಹೊರತು ಹಸಿವನ್ನು ನೀಗಿಸಲು ಸಾಧ್ಯವಿಲ್ಲ" ಎಂದು ಹೇಳಿದೆ. ಸಂಘರ್ಷಗಳು ಆಹಾರದ ಕೊರತೆ ಉಂಟುಮಾಡುತ್ತವೆ.

ಹೆಚ್ಚುತ್ತಿರುವ ಆಹಾರ ಅಭದ್ರತೆ

ಹೆಚ್ಚುತ್ತಿರುವ ಆಹಾರ ಅಭದ್ರತೆ

ಆಹಾರ ಅಭದ್ರತೆ ಇಡೀ ವಿಶ್ವದಲ್ಲಿ ತುರ್ತಾಗಿ ಗಮನಹರಿಸಬೇಕಾದ ವಿಷಯ ಮತ್ತು ಭವಿಷ್ಯದಲ್ಲಿಯೂ ಗಮನಕೊಡಲೇಬೇಕಾದ ವಿಷಯ. ಇದೀಗ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಜಾಗತಿಕ ಸಾಂಕ್ರಾಮಿಕ ಕೋವಿಡ್-19 ತಂದೊಡ್ಡಿರುವ ಸಂಕಷ್ಟದಿಂದಾಗಿ ಬರುವ ಡಿಸೆಂಬರ್ ಹೊತ್ತಿಗೆ ಹಸಿವಿನಿಂದ ನರಳುವವರ ಸಂಖ್ಯೆ ಎರಡುಪಟ್ಟು ಹೆಚ್ಚಾಗಲಿದೆ. ವಿಶ್ವದೆಲ್ಲೆಡೆ ಬಡ ಜನರು ಇನ್ನಷ್ಟು ಹೆಚ್ಚಿನ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿದ್ದಾರೆ, ಅನುಭವಿಸಲಿದ್ದಾರೆ. ಅವರಿಗೆ ಒಂದು ಹೊತ್ತಿಗೆ ಊಟ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಭವಿಷ್ಯದಲ್ಲಿ ಹವಾಮಾನ ಬದಲಾವಣೆ ಮತ್ತೊಂದು ದೊಡ್ಡ ಆಪತ್ತು. ಇದರಿಂದ ಕೃಷಿಯ ಮೇಲೆಯೂ ಹೆಚ್ಚಿನ ದುಷ್ಪರಿಣಾಮಗಳು ಬೀರುತ್ತಿವೆ. ಹೀಗೆ ಉಣ್ಣಲೇ ಇಲ್ಲದ ವಿಶ್ವದೆದುರು ಮಿಸೈಲುಗಳ ಪ್ರದರ್ಶನ ನಡೆಯುತ್ತಿರಲು ಮಾನವ ಕುಲದ ಆದ್ಯತೆಗಳನ್ನೇ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ.

English summary
The World Food Programme has warned that, by December 2020, more than twice as many people will starve compare to last year. The WFP has shared some information in the wake of the 2020 Nobel Peace Prize,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X