ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?

ಈ ಹಿಂದೆ, ಅಂದರೆ ಹೆಚ್ಚೇನಿಲ್ಲ ಬರೀ ಒಂಬತ್ತು ತಿಂಗಳ ಹಿಂದಷ್ಟೇ ಒನ್ ಇಂಡಿಯಾ ಕನ್ನಡದಲ್ಲಿ ಒಂದು ಅಸಕ್ತಿಕರ ವರದಿ ಪ್ರಕಟ ಆಗಿತ್ತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ರಾಜಕಾರಣಿಗಳು ಎಷ್ಟು ಮಂದಿ ಇದ್ದಾರೆ ಎಂದು ಲೆಕ್ಕ ಹಾಕುವ ಪ್ರಯತ್ನ ಅದಾಗಿತ್ತು. ಇದೀಗ ಲೋಕಸಭೆ ಚುನಾವಣೆ ಎದುರಿಗೆ ಇದ್ದೇವೆ. ಏನು ಬದಲಾವಣೆ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ.
ಎಚ್.ಡಿ.ದೇವೇಗೌಡ: ಜೆಡಿಎಸ್ ರಾಷ್ಟ್ರಾಧ್ಯಕ್ಷ. ಬೆಂಗಳೂರು ಉತ್ತರ ಅಥವಾ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ.
ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ.
ದೇವೇಗೌಡರ ಮತ್ತೊಬ್ಬ ಮಗ ಎಚ್.ಡಿ.ರೇವಣ್ಣ: ಮೈತ್ರಿ ಸರಕಾರದಲ್ಲಿ ಲೋಕೋಪಯೋಗಿ ಸಚಿವ.
ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!
ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ: ರಾಮನಗರ ಕ್ಷೇತ್ರದ ಶಾಸಕಿ.
ದೇವೇಗೌಡರ ಬೀಗರು ಡಿ.ಸಿ.ತಮ್ಮಣ್ಣ: ಮೈತ್ರಿ ಸರಕಾರದಲ್ಲಿ ಸಾರಿಗೆ ಸಚಿವ
ದೇವೇಗೌಡರ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ: ಹಾಸನ ಜಿಲ್ಲೆಯ ಹೊಳೆನರಸೀಪುರದ ಹಳೇಕೋಟೆಯ ಜಿಲ್ಲಾ ಪಂಚಾಯಿತಿ ಸದಸ್ಯೆ.
ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರ ತಮ್ಮ ಸಿ.ಎನ್.ಬಾಲಕೃಷ್ಣ: ಚನ್ನರಾಯಪಟ್ಟಣದ ಶಾಸಕ.
ದೇವೇಗೌಡರ ಮೊಮ್ಮಗ, ಜೆಡಿಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ: ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ.
ದೇವೇಗೌಡರ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರೀತಂಗೌಡ
ದೇವೇಗೌಡರ ಮತ್ತೊಬ್ಬ ಮೊಮ್ಮಗ, ನಿಖಿಲ್ ಕುಮಾರಸ್ವಾಮಿ: ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ.
ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ರ ಬೀಗರಾದ ರಂಗಪ್ಪ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿ, ಸೋತರು.