ಹೈಕೋರ್ಟ್ ಸಮನ್ಸ್ ಸ್ವೀಕರಿಸದ ಪ್ರಜ್ವಲ್ ರೇವಣ್ಣ, ಜಾಹಿರಾತಿಗೆ ಅನುಮತಿ
Recommended Video
ಬೆಂಗಳೂರು, ಸೆಪ್ಟೆಂಬರ್ 06: ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ಸಲ್ಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಸಮನ್ಸ್ ಅವನ್ನು ಸಂಸದ ಪ್ರಜ್ವಲ್ ರೇವಣ್ಣ ಸ್ವೀಕರಿಸಿಲ್ಲದಿರುವ ಕಾರಣ ಸಮನ್ಸ್ ಅನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಲಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಅವರು, ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರಿಗೆ ಸಮನ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು ಆದರೆ ಪ್ರಜ್ವಲ್ ರೇವಣ್ಣ ಅವರು ಸಮನ್ಸ್ ಅನ್ನು ಸ್ವೀಕರಿಸಿಲ್ಲ.
ಹಾಸನದ ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಸಮನ್ಸ್ ಅನ್ನು ತಲುಪಿಸುವ ಯತ್ನ ಮಾಡಲಾಯಿತು. ಆದರೆ ಪ್ರಜ್ವಲ್ ರೇವಣ್ಣ ಅವರು ಆ ವಿಳಾಸದಲ್ಲಿ ಇರಲಿಲ್ಲ, ಹಲವು ದಿನದಿಂದ ಅವರಿಗೆ ಸಮನ್ಸ್ ನೀಡುವ ಯತ್ನ ಮಾಡಿದರೂ ಸಹ ಸಾಧ್ಯವಾಗಿರಲಿಲ್ಲ, ಹಾಗಾಗಿ ವಕೀಲರ ಮನವಿಯಂತೆ ಸಮನ್ಸ್ ಅನ್ನು ಪತ್ರಿಕೆಯ ಜಾಹಿರಾತಾಗಿ ಪ್ರಕಟಿಸಲು ಅನುಮತಿ ನೀಡಲಾಗಿದೆ.

ಸಮನ್ಸ್‌ನ ಅನ್ವಯ ಸೆಪ್ಟೆಂಬರ್ 30 ರ ಒಳಗಾಗಿ ಪ್ರಜ್ವಲ್ ರೇವಣ್ಣ ಅವರು ಆರೋಪಕ್ಕೆ ಉತ್ತರ ನೀಡಬೇಕಿದೆ. ಸೆಪ್ಟೆಂಬರ್ 30 ರ ಒಳಗೆ ಉತ್ತರ ನೀಡದಿದ್ದಲ್ಲಿ ಕಠಿಣ ಕ್ರಮವನ್ನು ಎದುರಿಸಬೇಕಾದ ಸಂದರ್ಭ ಬರಲಿದೆ.
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಎ.ಮಂಜು ಅವರು ಸಹ ದೂರು ಸಲ್ಲಿಸಿದ್ದು, ಆಸ್ತಿ ವಿವರ ಮುಚ್ಚಿಟ್ಟ ಆರೋಪವು ಸಾಬೀತಾದರೆ ಪ್ರಜ್ವಲ್ ರೇವಣ್ಣ ಅವರು ತಮ್ಮ ಸಂಸದ ಸ್ಥಾನ ಕಳೆದುಕೊಳ್ಳುವ ಅಪಾಯವಿದೆ.












Click it and Unblock the Notifications