ವರ್ಷದ ವ್ಯಕ್ತಿ: ರಿಯಲ್ ಸ್ಟಾರ್, ಪ್ರಜಾಕಾರಣಿ ಉಪೇಂದ್ರ

Posted By: Nayana
Subscribe to Oneindia Kannada

ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.

ರಿಯಲ್ ಸ್ಟಾರ್ ಉಪೇಂದ್ರ ಹೊಸ ಅಲೆಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಪ್ರತಿಭಾವಂತ ನಟ ಮತ್ತು ನಿರ್ದೇಶಕ.

ವರ್ಷದ ವ್ಯಕ್ತಿ 2017

'ಓಂ' ಚಿತ್ರದ ಮೂಲಕ ಕನ್ನಡ ಚಿತ್ರ ರಂಗದ ಇತಿಹಾಸ ಸೃಷ್ಟಿಸಿದ ನಟ ನಿರ್ದೇಶಕ ಉಪೇಂದ್ರ ನಂತರ ಎ ಚಿತ್ರದ ಮೂಲಕ ಸ್ವತಃ ನಟರಾಗಿ ಹೊರ ಹೊಮ್ಮಿದರು. ಕಳೆದ ಒಂದೂವರೆ ದಶಕಗಳಿಂದ ಕನ್ನಡ ಚಿತ್ರಗಳ ಮೂಲಕ ಮನೆಮಾತಾಗಿರುವ ಉಪೇಂದ್ರ ಇದೀಗ ರಾಜಕೀಯದತ್ತ ಮುಖ ಮಾಡಿದ್ದಾರೆ.

Newsmakar of Karnataka 2017 : Actor, Politician Upendra

ರಾಜಕೀಯ ಎಂಬುದು ರಾಜಕಾರಣಿಗಳಿಗೆ ಮಾತ್ರ ಸಂಬಂಧಿಸಿದ ಕ್ಷೇತ್ರವಲ್ಲ ಪ್ರಜೆಗಳನ್ನೊಳಗೊಂಡ ರಾಜಕೀಯ ಎಂಬ ಪರಿಕಲ್ಪನೆ ಹೊರ ತಂದರು. ಈ ಮೂಲಕ ಪ್ರಜಾಕೀಯ ಎಂಬ ಕಲ್ಪನೆ ಮೂಲಕ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿ ಕರ್ನಾಟಕದ ಜನರ ಮನೆಮಾತಾಗಿದ್ದಾರೆ.ಇದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

ಈಗಾಗಲೇ ಕಳೆದ ನವೆಂಬರ್ 1 ರಂದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜಕೀಯ ಪಕ್ಷ ಘೋಷಿಸಿದರು. ಕೆಪಿಜೆಪಿ ಪಕ್ಷದಿಂದ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.

ಕಾರ್ಮಿಕರು, ಬಡವರು ಶ್ರಮಿಕರು, ಹಾಗೂ ಕೆಳ ಮಧ್ಯಮ ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಪಕ್ಷವೊಂದನ್ನು ರಚಿಸಬೇಕು ಹಾಗೂ ಅದರ ಮೂಲಕ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಳ್ಳಬೇಕು.

ತೆರಿಗೆ ಹಣವನ್ನು ಜನರ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು. ಎಂಬ ಮಹತ್ವಾಕಾಂಕ್ಷೆಯೊಂದಿಗೆ ಉಪೇಂದ್ರ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ.

ಹೊಸ ರಾಜಕೀಯ ಪಕ್ಷ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಸ್ಥಾಪನೆ ಮೂಲಕ ರಾಜ್ಯದ ರಾಜಕೀಯದಲ್ಲಿ ಹೊಸ ಭರವಸೆ ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಒನ್ ಇಂಡಿಯಾ ವರ್ಷದ ವ್ಯಕ್ತಿಗೆ ಆಯ್ಕೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Real Star Upendra formed a political outfit Karnataka Pragnyavanta Janata Paksha. One India Kannada has chosen Upendra as person of the year who was in news for his political moves.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ