ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

TikTok ಬ್ಯಾನ್ ಆತವ್ವಾ: ಉತ್ತರ ಕರ್ನಾಟಕದಾಗ ಹೆಂಗಿತ್ ಅದರ ಹವಾ?

|
Google Oneindia Kannada News

ಬೆಂಗಳೂರು, ಜುಲೈ.-02: ಭಾರತ-ಚೀನಾ ಗಡಿಯಲ್ಲಿ ಲಡಾಖ್ ಪೂರ್ವಭಾಗದ ಗಾಲ್ವಾನ್ ಕಣಿವೆಯಲ್ಲಿ ಡ್ರ್ಯಾಗನ್ ರಾಷ್ಟ್ರ ಕಾಲ್ಕೆರೆದು ನಿಂತಿದೆ. ಚೀನಾಗೆ ಬುದ್ಧಿ ಕಲಿಸಲು ಕೇಂದ್ರ ಸರ್ಕಾರವು ಟಿಕ್ ಟಾಕ್ ಆ್ಯಪ್ ಸೇರಿದಂತೆ 59 ಚೀನೀ ಆ್ಯಪ್ ಬಳಕೆಯನ್ನು ನಿರ್ಬಂಧಿಸಿ ಜೂನ್.29ರಂದು ಆದೇಶ ಹೊರಡಿಸಿದೆ.

Recommended Video

China warns UK ,ಬ್ರಿಟಿಷರಿಗೂ ಹಾಂಗ್ ಕಾಂಗ್ ವಿಚಾರದಲ್ಲಿ ಎಚ್ಚರಿಕೆ ಕೊಟ್ಟ ಚೀನಾ | Oneindia Kannada

ಚೀನಾದ ಸರ್ಕಾರಿ ಮಾಧ್ಯಮ ದಿ ಗ್ಲೋಬಲ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ಟಿಕ್‌ಟಾಕ್ ಮತ್ತು ಹೆಲೋ ಅಪ್ಲಿಕೇಶನ್‌ಗಳ ಮೂಲ(Parent) ಕಂಪನಿಯಾದ ಬೈಟ್‌ಡ್ಯಾನ್ಸ್ಗೆ ಈ ಆ್ಯಪ್‌ಗಳ ನಿಷೇಧದಿಂದ 6 ಬಿಲಿಯನ್ ಡಾಲರ್ (ಸುಮಾರು 45 ಸಾವಿರ ಕೋಟಿ)ವರೆಗೆ ನಷ್ಟದ ಬಗ್ಗೆ ಉಲ್ಲೇಖಿಸಲಾಗಿದೆ.

ಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆ

ಉತ್ತರ ಕರ್ನಾಟಕದ ಮಂದಿಯಂತೂ ಟಿಕ್-ಟಾಕ್ ಇಲ್ಲದೇ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಈ ಚೀನಾ ಆ್ಯಪ್ ನ್ನು ಹಚ್ಚಿಕೊಂಡು ಬಿಟ್ಟಿದ್ದರು. ಸಂಗೀತ, ಹಾಸ್ಯ, ನಟನೆ, ನೃತ್ಯ, ಹಾವ-ಭಾವ, ನೋವು-ನಲಿವು, ಬದುಕಿನ ಸಾರಾಂಶ, ಅಷ್ಟೇ ಯಾಕೆ ತತ್ವಗೀತೆಗಳ ಜೊತೆಗೆ ಬದುಕಿನ ಪಾಠವನ್ನು ಹೇಳುವಂತಾ ವಿಡಿಯೋಗಳನ್ನು ಸೃಷ್ಟಿಸುವಲ್ಲಿ ಉತ್ತರ ಕರ್ನಾಟಕದ ಜನರೇ ಮೇಲುಗೈ ಸಾಧಿಸಿದ್ದರು. ಹಾಗಿದ್ದಲ್ಲಿ ಟಿಕ್-ಟಾಕ್ ಹಾಗೂ ಉತ್ತರ ಕರ್ನಾಟಕದ ಮಂದಿ ನಡುವಿನ ಬಾಂಧವ್ಯ. ಚೀನಾ ಆ್ಯಪ್ ಉತ್ತರ ಕರ್ನಾಟಕದ ಜನರ ಮೇಲೆ ಬೀರಿ ಪ್ರಭಾವ. ಟಿಕ್ ಟಾಕ್ ನಿಷೇಧಕ್ಕೆ ಜನರು ಹಾಗೂ ಬಳಕೆದಾರರ ಪ್ರತಿಕ್ರಿಯೆ ಹೇಗಿದೆ. ಟಿಕ್ ಟಾಕ್ ಸ್ಟಾರ್ ಗಳು ಹೇಳುವುದು ಏನು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಬಸು ಹಿರೇಮಠ್ ಅವರ ಹಾಸ್ಯದ ಟಿಕ್ ಟಾಕ್

ಬಸು ಹಿರೇಮಠ್ ಅವರ ಹಾಸ್ಯದ ಟಿಕ್ ಟಾಕ್

ಟಿಕ್ ಟಾಕ್ ಎಂದಾಕ್ಷಣ ಉತ್ತರ ಕರ್ನಾಟಕವಷ್ಟೇ ಅಲ್ಲ. ರಾಜ್ಯದ ಪ್ರತಿಯೊಬ್ಬ ಟಿಕ್ ಟಾಕ್ ಪ್ರಿಯರಿಗೆ ನೆನಪಿಗೆ ಬರುವ ಮೊಟ್ಟ ಮೊದಲ ಹೆಸರೇ ಬಸು ಹಿರೇಮಠ್. ಹಾಸ್ಯದ ಮೂಲಕ ಬಸು ಹಿರೇಮಠ್ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಹಾಡು, ನೃತ್ಯ, ಸಿನಿಮಾ ಹಿನ್ನೆಲೆ ಧ್ವನಿಗೆ ಲಿಪ್ ಸಿಂಕ್ ಮಾಡುವುದಕ್ಕಷ್ಟೇ ಸೀಮಿತಗೊಂಡಿದ್ದ ಟಿಕ್ ಟಾಕ್ ನಲ್ಲಿ ಹಾಸ್ಯದ ಹೊಸ ಕ್ರೇಜ್ ಹುಟ್ಟು ಹಾಕಿದ ಹಿರಿಮೆ ಉತ್ತರ ಕರ್ನಾಟಕದ ಈ ಪ್ರತಿಭಾವಂತ ಟಿಕ್ ಟಾಕ್ ಸ್ಟಾರ್ ಬಸು ಹಿರೇಮಠ್ ಅವರಿಗೆ ಸಲ್ಲುತ್ತದೆ.

ದೊಡ್ಡಣ್ಣ, ಸಾಧು ಕೋಕಿಲಾ ಅವರ ಧ್ವನಿಗೆ ಲಿಪ್ ಸಿಂಕ್

ದೊಡ್ಡಣ್ಣ, ಸಾಧು ಕೋಕಿಲಾ ಅವರ ಧ್ವನಿಗೆ ಲಿಪ್ ಸಿಂಕ್

ಟಿಕ್ ಟಾಕ್ ಸ್ಟಾರ್ ಎನಿಸಿರುವ ಬಸು ಹಿರೇಮಠ್ ಧ್ವನಿಯಿಂದಲೇ ಹೊಸ ಕ್ರೇಜ್ ಹುಟ್ಟಿಕೊಂಡಿತು. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶಿರಡೋಣ ಗ್ರಾಮದ ಬಸು ಹಿರೇಮಠ್, ಚಡಡಣ ಗ್ರಾಮದಲ್ಲಿ ರೇಡಿಯಂ ಶಾಪ್ ಇಟ್ಟುಕೊಂಡಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಟಿಕ್ ಟಾಕ್ ವಿಡಿಯೋ ಮಾಡುವುದನ್ನು ಆರಂಭಿಸಿದರು. ಬಿಡುವಿನ ಸಂದರ್ಭದಲ್ಲಿ ಟಿಕ್ ಟಾಕ್ ನಲ್ಲಿ ಹಾಸ್ಯ ಕಲಾವಿದರಾದ ದೊಡ್ಡಣ್ಣ, ಸಾಧುಕೋಕಿಲ ಅವರ ಹಿನ್ನೆಲೆ ಧ್ವನಿಗೆ ಲಿಪ್ ಸಿಂಕ್ ಮಾಡುವುದನ್ನು ಆರಂಭಿಸಿದರು. ಹೀಗೆ ಟಿಕ್ ಟಾಕ್ ಆರಂಭಿಸಿದ ಅವರಿಗೆ ತಮ್ಮದೇ ಧ್ವನಿಯಲ್ಲಿ ಹಾಸ್ಯವನ್ನು ಮಾಡಬಾರದೇಕೆ ಎಂಬ ಅಭಿಲಾಷೆ ಹುಟ್ಟಿಕೊಂಡಿತು.

ಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿ

ಬಸು ಹಿರೇಮಠ್ ಧ್ವನಿಯಿಂದಲೇ ಕ್ರೇಜ್

ಬಸು ಹಿರೇಮಠ್ ಧ್ವನಿಯಿಂದಲೇ ಕ್ರೇಜ್

ತಮ್ಮದೇ ಧ್ವನಿಗೆ ಹಾಸ್ಯದ ಹಿನ್ನೆಲೆ ಸಂಗೀತವನ್ನು ನೀಡಿ ಹೊಸ ಹೊಸ ಟಿಕ್ ಟಾಕ್ ವಿಡಿಯೋಗಳನ್ನು ಅಪ್ ಲೋಡ್ ಮಾಡಿದರು. ಈ ಹಾಸ್ಯದ ವಿಡಿಯೋಗಳೇ ಬಸು ಹಿರೇಮಠ್ ಅವರಿಗೆ ಹೆಚ್ಚಿನ ಪ್ರಖ್ಯಾತಿ ತಂದು ಕೊಟ್ಟವು. ನೋಡನೋಡುತ್ತಿದ್ದಂತೆ ನೂರರಿಂದ ಸಾವಿರ, ಸಾವಿರದಿಂದ ಲಕ್ಷ, ಲಕ್ಷದಿಂದ ಕೋಟಿ ಕೋಟಿ ಅಭಿಮಾನಿಗಳ ನೆಚ್ಚಿನ ಟಿಕ್ ಟಾಕ್ ಸ್ಟಾರ್ ಆಗಿ ಬಸು ಹಿರೇಮಠ್ ಬೆಳೆದರು. ಒಂದು ದಿನಕ್ಕೆ ಕನಿಷ್ಠ 3 ಟಿಕ್ ಟಾಕ್ ವಿಡಿಯೋಗಳನ್ನು ಇವರು ಅಪ್ ಲೋಡ್ ಮಾಡುತ್ತಾರೆ. ಈ ಪೈಕಿ ಪ್ರತಿಯೊಂದು ವಿಡಿಯೋಗಳನ್ನು ಕನಿಷ್ಠ 10 ಲಕ್ಷ ಜನರು ವೀಕ್ಷಿಸುತ್ತಾರೆ. 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಲೈಕ್ ಮಾಡುತ್ತಾರೆ.

ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

ಟಿಕ್ ಟಾಕ್ ದುನಿಯಾದಲ್ಲಿ ಬಸು ಹಿರೇಮಠ್ ಬಿಗ್ ಹೀರೋ

ಟಿಕ್ ಟಾಕ್ ದುನಿಯಾದಲ್ಲಿ ಬಸು ಹಿರೇಮಠ್ ಬಿಗ್ ಹೀರೋ

ಸಾಮಾಜಿಕ ಜಾಲತಾಣದಲ್ಲಿ ಬಸು ಹಿರೇಮಠ್ ಹೀರೋ ಆಗಿ ಮಿಂಚುತ್ತಿದ್ದಾರೆ. ಟಿಕ್ ಟಾಕ್ ನಲ್ಲಿ 17 ಲಕ್ಷ ಫಾಲೋವರ್ಸ್ ರನ್ನು ಹೊಂದಿರುವ ಇವರಿಗೆ ಹಲೋ ಆ್ಯಪ್ ನಲ್ಲಿ 5 ಲಕ್ಷ ಫಾಲೋವರ್ಸ್ ಇದ್ದಾರೆ. ಯೂಟ್ಯೂಬ್ ನಲ್ಲಿ 20 ಸಾವಿರ ಫಾಲೋವರ್ಸ್ ರನ್ನು ಹೊಂದಿರುವ ಇವರಿಗೆ ಕಳೆದ ಒಂದೇ ವರ್ಷದಲ್ಲಿ ಇನ್ಸ್ಟ್ರಾ ಗ್ರಾಂನಲ್ಲಿ 2.62 ಲಕ್ಷ ಫಾಲೋವರ್ಸ್ ಇದ್ದಾರೆ. ಇನ್ನು, ಲೈಕೆ ಆ್ಯಪ್ ನಲ್ಲಿ 6 ಕೋಟಿ 90 ಲಕ್ಷ ಫಾಲೋವರ್ಸ್ ರನ್ನು ಹೊಂದಿದ್ದಾರೆ.

ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?

ಭಾರತದ ವಿಚಾರ ಬಂದಾಗ ನಾನು ಟಿಕ್ ಟಾಕ್ ವಿರೋಧಿ

ಭಾರತದ ವಿಚಾರ ಬಂದಾಗ ನಾನು ಟಿಕ್ ಟಾಕ್ ವಿರೋಧಿ

ನನ್ನ ಪ್ರತಿಭೆಯನ್ನು ಹೊರಹಾಕುವುದಕ್ಕೆ ಟಿಕ್ ಟಾಕ್ ಆ್ಯಪ್ ಉತ್ತಮ ವೇದಿಕೆಯಾಗಿತ್ತು. ಲಕ್ಷಾಂತರ ಅಭಿಮಾನಿಗಳನ್ನು ಪಡೆಯಲು ಟಿಕ್ ಟಾಕ್ ನಿಂದಲೇ ಸಾಧ್ಯವಾಗಿದ್ದು ಸುಳ್ಳಲ್ಲ. ಟಿಕ್ ಟಾಕ್ ನಿಂದ ಅಭಿಮಾನವನ್ನು ಸಂಪಾದಿಸಿದ್ದೇನೆಯೇ ವಿನಃ, ಒಂದೇ ಒಂದು ರೂಪಾಯಿ ಹಣವನ್ನೂ ಪಡೆದಿಲ್ಲ. ಇಂಥದರ ಮಧ್ಯೆ ಭಾರತದ ಭದ್ರತೆ ವಿಚಾರ ಬಂದಾಗ ನಾನು ಟಿಕ್ ಟಾಕ್ ನಿಷೇಧ ವಿಧಿಸಿರುವುದನ್ನು ನಾನೂ ಸಹ ಬೆಂಬಲಿಸುತ್ತೇನೆ ಎನ್ನುತ್ತಾರೆ ಟಿಕ್ ಟಾಕ್ ಸ್ಟಾರ್ ಬಸು ಹಿರೇಮಠ್.

ಟಿಕ್ ಟಾಕ್ ನಲ್ಲಿ ಶರಣು ಪಾಟೀಲ್ ಕ್ರೇಜ್

ಟಿಕ್ ಟಾಕ್ ನಲ್ಲಿ ಶರಣು ಪಾಟೀಲ್ ಕ್ರೇಜ್

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಮೂಲದ ಶರಣು ಪಾಟೀಲ್ ಕೂಡಾ ಟಿಕ್ ಟಾಕ್ ನಿಂದ ಸಖತ್ ಫೇಮಸ್ ಆಗಿದ್ದಾರೆ. ಬಿಎಸ್ ಸಿ ಅಂತಿಮ ವರ್ಷ ವಿದ್ಯಾರ್ಥಿಯಾಗಿದ್ದ ಶರಣು ಪಾಟೀಲ್ ಅವರಿಗೆ ಟಿಕ್ ಟಾಕ್ ಆರಂಭದಲ್ಲಿ ಮನರಂಜನೆಯ ವೇದಿಕೆಯಾಗಿತ್ತು. ಆದರೆ ಬಸು ಹಿರೇಮಠ್ ಅವರ ಟಿಕ್ ಟಾಕ್ ವಿಡಿಯೋಗಳಿಂದ ಪ್ರರೇಪಿತಗೊಂಡ ಶರಣು ಪಾಟೀಲ್ ಕೂಡಾ ವಿಭಿನ್ನ ರೀತಿಯಲ್ಲಿ ವಿಶೇಷವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಹಾಸ್ಯದಿಂದ ಮನೆ ಮಾತಾದ ಶರಣು ಪಾಟೀಲ್

ಹಾಸ್ಯದಿಂದ ಮನೆ ಮಾತಾದ ಶರಣು ಪಾಟೀಲ್

ಕಳೆದ ಏಳು ತಿಂಗಳ ಹಿಂದೆಯಷ್ಟೇ ಟಿಕ್ ಟಾಕ್ ವಿಡಿಯೋಗಳ ಮೇಲೆ ಲಕ್ಷ್ಯ ವಹಿಸಿದ ಶರಣು ಪಾಟೀಲ್, ನೋಡನೋಡುತ್ತಿದ್ದಂತೆ ಫೇಮಸ್ ಆಗಿ ಬಿಟ್ಟರು. ಇಂದು ಸುತ್ತಮುತ್ತಲಿನ ಯಾವುದೇ ಊರುಗಳಿಗೆ ತೆರಳಿದರು ಜನರು ತಮ್ಮನ್ನು ಗುರುತಿಸಿ ಮಾತನಾಡುತ್ತಾರೆ. ತಮ್ಮ ಕಲೆಯನ್ನು ತೋರ್ಪಡಿಸಲು ಟಿಕ್ ಟಾಕ್ ಉತ್ತಮ ವೇದಿಕೆಯಾಗಿತ್ತು ಎನ್ನುವುದು ಶರಣು ಪಾಟೀಲ್ ಅವರ ಮಾತು. ಏಳು ತಿಂಗಳ ಹಿಂದೆಯಷ್ಟೇ ಟಿಕ್ ಟಾಕ್ ವಿಡಿಯೋಗಳನ್ನು ಮಾಡುವುದಕ್ಕೆ ಆರಂಭಿಸಿದ ಶರಣು ಪಾಟೀಲ್ ಅವರಿಗೆ ಟಿಕ್ ಟಾಕ್ ನಲ್ಲಿ 3.75 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. 1.5 ಕೋಟಿಗೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದ್ದಾರೆ.

ಟಿಕ್ ಟಾಕ್ ನಲ್ಲೂ ಶರಣು ಪಾಟೀಲ್ ಸ್ಕ್ರಿಪ್ಟ್

ಟಿಕ್ ಟಾಕ್ ನಲ್ಲೂ ಶರಣು ಪಾಟೀಲ್ ಸ್ಕ್ರಿಪ್ಟ್

ಸಾಮಾನ್ಯವಾಗಿ ಟಿಕ್ ಟಾಕ್ ಎಂದರೆ ಒಬ್ಬರು ಹಿನ್ನೆಲೆ ಧ್ವನಿಯಲ್ಲಿ ಅಥವಾ ತಮ್ಮದೇ ಧ್ವನಿಯಲ್ಲಿ ಹಾಸ್ಯವನ್ನು ಮಾಡುವುದನ್ನು ಕಂಡಿರುತ್ತೇವೆ. ಆದರೆ ಶರಣು ಪಾಟೀಲ್ ಈ ವಿಚಾರದಲ್ಲಿ ತುಂಬಾನೇ ಡಿಫರೆಂಟ್. ಏಕೆಂದರೆ ಇವರು ಮಾಡಿರುವ ಬಹುಪಾಲು ವಿಡಿಯೋಗಳು ಸ್ಕ್ರಿಪ್ಟೆಂಡ್ ಆಗಿರುತ್ತವೆ. ಅಂದರೆ ಒಂದು ಕಥೆಯನ್ನು ಹಾಸ್ಯಭರಿತವಾಗಿ ತೋರಿಸುವ ವಿಡಿಯೋಗಳು ಆಗಿರುತ್ತವೆ. ಇಂಥ ಟಿಕ್ ಟಾಕ್ ವಿಡಿಯೋಗಳಲ್ಲಿ ತಾವೊಬ್ಬರೇ ಮಿಂಚುವುದರ ಜೊತೆಗೆ ತಮ್ಮ ಸ್ನೇಹಿತರಿಗೂ ಒಂದು ವೇದಿಕೆ ಕಲ್ಪಿಸಿಕೊಟ್ಟ ಹಿರಿಮೆ ಶರಣು ಪಾಟೀಲ್ ಅವರಿಗೆ ಸಲ್ಲುತ್ತದೆ.

ಟಿಕ್ ಟಾಕ್ ಸ್ಟಾರ್ ಆಗಿ ಮಿಂಚಿದ ಲೋಮೇಶ್

ಟಿಕ್ ಟಾಕ್ ಸ್ಟಾರ್ ಆಗಿ ಮಿಂಚಿದ ಲೋಮೇಶ್

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಲೋಮೇಶ್ ಕೂಡಾ ಉತ್ತರ ಕರ್ನಾಟಕದ ಟಿಕ್ ಟಾಕ್ ಸ್ಟಾರ್ ಗಳ ಪಟ್ಟಿಯಲ್ಲಿ ಮಿಂಚಿದ್ದಾರೆ. ಜ್ಯುವೆಲರಿ ಶಾಪ್ ಇಟ್ಟುಕೊಂಡಿರುವ ಇವರು ಬಿಡುವಿನ ಸಂದರ್ಭದಲ್ಲಿ ಟಿಕ್ ಟಾಕ್ ವೀಕ್ಷಿಸುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ತಾವೂ ಕೂಡಾ ಟಿಕ್ ಟಾಕ್ ಮಾಡುವುದನ್ನು ರೂಢಿಸಿಕೊಂಡರು. ಆರಂಭದಲ್ಲಿ ಆರು ತಿಂಗಳವರೆಗೂ ಕೇವಲ 500-1000 ಜನ ಫಾಲೋವರ್ಸ್ ರನ್ನು ಹೊಂದಿದ್ದ ಲೋಮೇಶ್ ಅವರಿಗೆ ಇಂದು ಟಿಕ್ ಟಾಕ್ ನಲ್ಲಿ ಬರೋಬ್ಬರಿ 2.55 ಲಕ್ಷ ಜನ ಫಾಲೋವರ್ಸ್ ಇದ್ದಾರೆ.

ಲಕ್ಷಗಟ್ಟಲೇ ಲೈಕ್ ಪಡೆಯುತ್ತಿದ್ದ ಲೋಮೇಶ್ ಟಿಕ್ ಟಾಕ್

ಲಕ್ಷಗಟ್ಟಲೇ ಲೈಕ್ ಪಡೆಯುತ್ತಿದ್ದ ಲೋಮೇಶ್ ಟಿಕ್ ಟಾಕ್

ಪ್ರತಿನಿತ್ಯ ಎರಡರಿಂದ ಮೂರು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ಲೋಮೇಶ್ ಅವರ ಪ್ರತಿಯೊಂದು ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದರು. ಲಕ್ಷಾಂತರ ಜನರು ಈ ವಿಡಿಯೋಗಳನ್ನು ಲೈಕ್ ಮಾಡುತ್ತಿದ್ದರು. ಲೋಮೇಶ್ ಅವರ ವಿಡಿಯೋಗಳನ್ನು ಇದುವರೆಗೂ 1 ಕೋಟಿ 70 ಲಕ್ಷ ಜನರು ಲೈಕ್ ಮಾಡಿದ್ದಾರೆ.

ಟಿಕ್ ಟಾಕ್ ನಲ್ಲಿ ಪತಿ-ಪತ್ನಿ ಸಾಮರಸ್ಯ + ಹಾಸ್ಯದ ಟಾನಿಕ್

ಟಿಕ್ ಟಾಕ್ ನಲ್ಲಿ ಪತಿ-ಪತ್ನಿ ಸಾಮರಸ್ಯ + ಹಾಸ್ಯದ ಟಾನಿಕ್

ಚೀನಾದ ಪ್ರಸಿದ್ಧ ಆ್ಯಪ್ ಟಿಕ್ ಟಾಕ್ ಕೇವಲ ಸ್ಟಾರ್ ಗಳಿಗೆ ಮಾತ್ರ ವೇದಿಕೆ ಆಗಿರಲಿಲ್ಲ. ಬಿಡುವಿನ ಸಮಯದಲ್ಲಿ ಮನರಂಜನೆ ಮೂಲಕ ಬದುಕಿನ ಅರ್ಥ ತಿಳಿಸುವ ಸಾಮಾನ್ಯ ಜನರಲ್ಲೂ ಕ್ರೇಜ್ ಹುಟ್ಟಿಸಿತ್ತು. ಟಿಕ್ ಟಾಕ್ ನೋಡುತ್ತಾ ನಗುವಿನಲ್ಲೇ ಮುಳುಗಿದ್ದ ನಿಂಗಪ್ಪ ಗುದಗೇರ ಕೂಡ ಇಂದು ಟಿಕ್ ಟಾಕ್ ಸ್ಟಾರ್ ರಂತೆ ಮಿಂಚು ಹರಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕುರುಬಗೇರಿ ಗ್ರಾಮದ ನಿಂಗಪ್ಪ ಗುದಗೇರ ವೈವಾಹಿಕ ಬದುಕಿಗೆ ಕಾಲಿಸಿದ್ದರು. ಅಂದಿನಿಂದ ಪತ್ನಿ ರೋಜಾ ಗುದಗೇರ ಅವರ ಒಡಗೂಡಿ ಟಿಕ್ ಟಾಕ್ ನಲ್ಲಿ ದಾಂಪತ್ಯ ಬದುಕು ಮತ್ತು ಹಾಸ್ಯದ ಅರ್ಥವನ್ನು ತಿಳಿಸುವ ವಿಭಿನ್ನ ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾ ಜನಮನ ಗೆದ್ದಿದ್ದಾರೆ.

30,000ಕ್ಕೂ ಅಧಿಕ ಫಾಲೋವರ್ಸ್ ರನ್ನು ಹೊಂದಿರುವ ದಂಪತಿ

30,000ಕ್ಕೂ ಅಧಿಕ ಫಾಲೋವರ್ಸ್ ರನ್ನು ಹೊಂದಿರುವ ದಂಪತಿ

ನಿಂಗಪ್ಪ ಗುದಗೇರ ಮತ್ತು ರೋಜಾ ಗುದಗೇರ ದಂಪತಿಯು ಪ್ರತಿನಿತ್ಯ ಕನಿಷ್ಠ ನಾಲ್ಕರಿಂದ ಐದು ಟಿಕ್ ಟಾಕ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಪ್ರತಿಯೊಂದು ವಿಡಿಯೋಗಳು ಕೂಡಾ ಹಾಸ್ಯದಿಂದ ಕೂಡಿರುತ್ತಿದ್ದು, ಕನಿಷ್ಠ 50,000ಕ್ಕಿಂತ ಹೆಚ್ಚು ಲೈಕ್ ಗಳನ್ನು ಪಡೆಯುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸುತ್ತಿದ್ದರು. ಇತ್ತೀಚಿಗಷ್ಟೇ ಟಿಕ್ ಟಾಕ್ ದುನಿಯಾಗೆ ಲಗ್ಗೆಯಿಟ್ಟಿದ್ದ ದಂಪತಿಗೆ 30,000ಕ್ಕೂ ಅಧಿಕ ಫಾಲೋವರ್ಸ್ ರನ್ನು ಹೊಂದಿದ್ದರು.

English summary
Special Story About North Karnataka Tik Tok Stars And How They Reacted To Banned China App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X