ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Engineers' Day 2022 : ಭಾರತದ ಜೊತೆ ತಾಂಜಾನಿಯಾ, ಶ್ರೀಲಂಕಾದಲ್ಲೂ ವಿಶ್ವೇಶ್ವರಯ್ಯರ ಜನ್ಮದಿನದಂದು ಎಂಜಿನಿಯರ್ಸ್ ಡೇ

|
Google Oneindia Kannada News

ಸರ್ ಎಂ ವಿಶ್ವೇಶ್ವರಯ್ಯರ ಹೆಸರು ಕೇಳದ ಕನ್ನಡಿಗರು ವಿರಳ. ಕನ್ನಂಬಾಡಿ ಕಟ್ಟೆ ಅಥವಾ ಕೆಆರ್‌ಎಸ್ ಎಂದರೆ ದುತ್ತನೆ ನೆನಪಿಗೆ ಬರುವುದು ಸರ್ ಎಂವಿ ಹೆಸರು. ಇವರ ಎಂಜಿನಿಯರಿಂಗ್ ಜ್ಞಾನ ಅಗಾಧವಾದುದು. ಕರ್ನಾಟಕ ಕಂಡ ಅತ್ಯುತ್ತಮ ಎಂಜಿನಿಯರ್ ಇವರು. ವಿಶ್ವದ ಅತ್ಯುತ್ತಮ ಎಂಜಿನಿಯರ್‌ಗಳ ಸಾಲಿನಲ್ಲಿ ವಿಶ್ವೇಶ್ವರಯ್ಯರನ್ನು ನಿಲ್ಲಿಸಬಹುದು.

1960ರಲ್ಲಿ ಹುಟ್ಟಿ 1962ರಲ್ಲಿ ಶತಾಯುಷಿಯಾಗಿ ಇಹಲೋಕ ತ್ಯಜಿಸಿದ ಸರ್ ಎಂ ವಿಶ್ವೇಶ್ವರಯ್ಯ ಮೈಸೂರಿನ ದಿವಾನರಾಗಿ ಮಾಡಿದ ಕೆಲಸಗಳು ಅಷ್ಟಿಷ್ಟಲ್ಲ. ಸೆಪ್ಟೆಂಬರ್ 15ರಂದು ಅವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಎಂಜಿನಿಯರ್ ದಿನವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ಶ್ರೀಲಂಕಾ ಹಾಗೂ ತಾಂಜೇನಿಯ ದೇಶಗಳಲ್ಲೂ ವಿಶ್ವೇಶ್ವರಯ್ಯರ ಗೌರವಾರ್ಥ ಇದೇ ದಿನದಂದು ಎಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ.

ಅಜ್ಜಂದಿರ ದಿನ: ಅಜ್ಜಿ, ಅಜ್ಜಿ ಮೊಮ್ಮಕ್ಕಳ ಅವಿನಾಭಾವ ಸಂಬಂಧ; ಇತಿಹಾಸ, ಮಹತ್ವ ತಿಳಿಯಿರಿಅಜ್ಜಂದಿರ ದಿನ: ಅಜ್ಜಿ, ಅಜ್ಜಿ ಮೊಮ್ಮಕ್ಕಳ ಅವಿನಾಭಾವ ಸಂಬಂಧ; ಇತಿಹಾಸ, ಮಹತ್ವ ತಿಳಿಯಿರಿ

ಸರ್ ಎಂ ವಿಶ್ವೇಶ್ವರಯ್ಯರ ಪೂರ್ವಜರು ಆಂಧ್ರದ ಮೋಕ್ಷಗುಂಡಂ ಎಂಬ ಸ್ಥಳದ ಮೂಲದವರು. ನೂರಾರು ವರ್ಷಗಳ ಹಿಂದೆ ಈಗಿನ ಚಿಕ್ಕಬಳ್ಳಾಪುರಕ್ಕೆ ಇವರು ವಲಸೆ ಬಂದಿದ್ದರು. ತೆಲುಗು ಬ್ರಾಹ್ಮಣ ಕುಟುಂಬದ ವಿಶ್ವೇಶ್ವರಯ್ಯ ಹುಟ್ಟಿದ್ದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದಲ್ಲಿ 1961 ಸೆಪ್ಟೆಂಬರ್ 15ರಂದು. ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಆರಂಬಿಕ ವಿದ್ಯಾಭ್ಯಾಸ ಮಾಡಿದ ಅವರು ಮದ್ರಾಸ್ ಯೂನಿವರ್ಸಿಟಿಯಲ್ಲಿ ಬಿಎ ವ್ಯಾಸಂಗ ಮಾಡಲು ಹೋದರಾದರೂ ನಂತರ ಮನಸು ಬದಲಾಯಿಸಿ ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದರು. ಇದು ಕರ್ನಾಟಕ ಮತ್ತು ಭಾರತಕ್ಕೆ ಹೊಸ ಮಾಣಿಕ್ಯ ತಯಾರಾಗುವ ಹಾದಿಯಲ್ಲಿ ಒಂದು ಪ್ರಮುಖ ತಿರುವು.

ಬ್ರಾಹ್ಮಣರಾದರೂ ದಾರಿದ್ರ್ಯ ಪರಿಸ್ಥಿತಿ
ವಿಶ್ವೇಶ್ವರಯ್ಯ ಅವರ ಕುಟುಂಬ ಬಹಳ ಬಡತನದ ಪರಿಸ್ಥಿತಿಯಲ್ಲಿತ್ತು. ಅವರ ತಂದೆ ಶ್ರೀನಿವಾಸ ಶಾಸ್ತ್ರಿ ಸಂಸ್ಕೃತ ವಿದ್ವಾಂಸರಾಗಿದ್ದರು. ವಿಶ್ವೇಶ್ವರಯ್ಯ ಚಿಕ್ಕಂದಿನಲ್ಲಿರುವಾಗಲೇ ತಂದೆ ಮೃತಪಟ್ಟಿದ್ದರು. ತಾಯಿ ಅಲ್ಲಿ ಇಲ್ಲಿ ಬೇಡಿ ತಂದು ಮನೆಯನ್ನು ನಡೆಸುತ್ತಿದ್ದರು.

World EV Day 2022: ಇವೇ ನೋಡಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು; ಬೆಲೆ ಎಷ್ಟು?World EV Day 2022: ಇವೇ ನೋಡಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳು; ಬೆಲೆ ಎಷ್ಟು?

ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ವೆಸ್ಲಿ ಮಿಷನ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಒಮ್ಮೆ ಬಸ್ಸಿನಲ್ಲಿ ಬರಲು ಹಣವಿಲ್ಲದೇ 35 ಕಿಲೋಮೀಟರ್ ದೂರ ನಡೆದುಕೊಂಡೇ ಹೋಗಿದ್ದರು.

Engineers Day 2022 Date, History, Significance of Sir M Visvesvaraya birth anniversary in Kannada

ಮನೆಪಾಠ ಇತ್ಯಾದಿ ಕೆಲಸ ಮಾಡುತ್ತಾ ಹಾಗು ಹೀಗೂ ಕಾಲೇಜು ಶುಲ್ಕ ಹೊಂದಿಸಿಕೊಂಡು 1880ರಲ್ಲಿ ಬಿಎ ಅನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಮಾಡಿದರು. ರಾಜ್ಯದಲ್ಲಿ ಆಗ ಎಂಜಿನಿಯರಿಂಗ್ ಕಾಲೇಜು ಇರಲಿಲ್ಲವಾದ್ದರಿಂದ ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದರು. ಅದೃಷ್ಟಕ್ಕೆ ಅವರಿಗೆ ಆಗ ಸ್ಕಾಲರ್‌ಶಿಪ್ ಸಿಕ್ಕಿತು. ಕುತುಹಲವೆಂದರೆ, ಮೂರು ವರ್ಷದ ಎಂಜಿನಿಯರಿಂಗ್ ಕೋರ್ಸ್ ಅನ್ನು ಅವರು ಎರಡೂವರೆ ವರ್ಷದಲ್ಲಿ ಮುಗಿಸಿದರು. ಅವರ ಪ್ರಖರ ಬುದ್ಧಿಮತ್ತೆಯಿಂದಾಗಿ ಇದು ಸಾಧ್ಯವಾಯಿತು. ಅವರಿಗೆ ಜೇಮ್ಸ್ ಬರ್ಕ್ಲಿ ಪುರಸ್ಕಾರ ಕೂಡ ಸಿಕ್ಕಿತು. ಕೂತಲೇ ಉದ್ಯೋಗವೂ ಸುಲಭವಾಗಿ ಸಿಕ್ಕಿತು.

ಸ್ಲೂಸ್ ಗೇಟ್ ಅನ್ವೇಷಣೆ
ಸರ್ ಎಂ ವಿಶ್ವೇಶ್ವರಯ್ಯ ಬಹಳ ಮೇಧಾವಿ ಎಂಜಿನಿಯರ್ ಎನಿಸಿದ್ದರು. ಇವರ ಎಂಜಿನಿಯರಿಂಗ್ ಕೌಶಲ್ಯಕ್ಕೆ ಬ್ರಿಟಿಷರೂ ಮಾರು ಹೋಗಿದ್ದರು. ಪುಣೆಯಲ್ಲಿ ಅವರು ಅಟೊಮ್ಯಾಟಿಕ್ ಸ್ಲೂಸ್ ಗೇಟ್ ಕಂಡು ಹಿಡಿದರು ಗಮನ ಸೆಳೆದರು. ಜಲಾಶಯದಲ್ಲಿ ನೀರಿ ಮಟ್ಟ ಏರಿದಾಗ ಜಾರು ಬಾಗಿಲುಗಳು ಸ್ವಯಂಚಾಲಿತವಾಗಿ ತೆರೆದು ನೀರನ್ನು ಹೊರಬಿಡುವ ರೀತಿಯಲ್ಲಿ ಇವರು ಸ್ಲೂಸ್ ಗೇಟ್‌ಗಳನ್ನು ನಿರ್ಮಿಸಿದರು. ನೀರಿನ ಮಟ್ಟ ಕಡಿಮೆ ಆದಾಗ ಈ ಸ್ಲೂಸ್ ಗೇಟ್‌ಗಳು ತಾವಾಗೇ ಮುಚ್ಚುತ್ತಿದ್ದವು. ಇವರ ಸ್ಲೂಸ್ ಗೇಟ್ ಅನ್ವೇಷಣೆ ಬಹಳ ಉಪಯುಕ್ತವಾಗಿ ಪರಿಣಮಿಸಿತು.

ಯೆಮೆನ್ ಜಲಕ್ರಾಂತಿ
ದೂರದ ಅರಬ್ ನಾಡಿನ ಮರಳುಗಾಡು ಯೆಮೆನ್ ದೇಶದಲ್ಲಿ ಬ್ರಿಟಿಷರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಸರ್ ಎಂ ವಿಶ್ವೇಶ್ವರಯ್ಯರನ್ನು ಕಳುಹಿಸಿದ್ದರು. ಅಲ್ಲಿ ವಿಶ್ವೇಶ್ವರಯ್ಯ ಕೂಲಂಕಷವಾಗಿ ಅಧ್ಯಯನ ಮಾಡಿದರು. ಯೆಮೆನ್‌ನ ಏಡನ್ ನಗರದಲ್ಲಿ ಬಿದ್ದ ಮಳೆ ಮರಳುಭೂಮಿಯಲ್ಲಿ ಹಿಂಗಿ ಹೋಗುತ್ತಿತ್ತು. ಇಲ್ಲಿ ನೆಲದೊಳಗೆ ನೀರಿನ ಜಲಾಶಯ ಇರುವುದನ್ನು ವಿಶ್ವೇಶ್ವರಯ್ಯ ಗುರುತಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಈ ವಿಚಾರಕ್ಕೆ ಯೆಮೆನ್‌ನ ಏಡನ್ ನಗರ ಈಗಲೂ ವಿಶ್ವೇಶ್ವರಯ್ಯಗೆ ಋಣಿಯಾಗಿದೆ. ಬ್ರಿಟಿಷ್ ಸರಕಾರ ಕೂಡ ಅವರನ್ನು ಗೌರವಿಸಿತು.

ಮೈಸೂರು ಸಂಸ್ಥಾನದಲ್ಲಿ ಕೈಂಕರ್ಯ
1908ರಲ್ಲಿ ವಿಶ್ವೇಶ್ವರಯ್ಯ ಬಾಂಬೆ ಪ್ರಾಂತ್ಯದಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಭಾರೀ ಪ್ರವಾಹ ಸ್ಥಿತಿ ಇತ್ತು. ವಿದೇಶ ಪ್ರವಾಸದಲ್ಲಿದ್ದ ವಿಶ್ವೇಶ್ವರಯ್ಯರನ್ನು ಬೇಗನೇ ಬರುವಂತೆ ಹೈದರಾಬಾದ್ ನಿಜಾಮರು ಮನವಿ ಮಾಡಿದರು. ಅದರಂತೆ ಹೈದರಾಬಾದ್‌ಗೆ ಬಂದ ವಿಶ್ವೇಶ್ವರಯ್ಯ ವಿಶೇಷ ಸಲಹಾ ಎಂಜಿನಿಯರ್ ಆದರು. ಈ ವೇಳೆ, ತಮ್ಮ ರಾಜ್ಯದ ಪ್ರತಿಭೆ ಹೊರಗೆ ಕೆಲಸ ಮಾಡುವುದನ್ನು ಕಂಡ ಅಂದಿನ ಮೈಸೂರು ಸಂಸ್ಥಾನದ ದಿವಾನ ಮಾಧವರಾವ್ ಅವರು ವಿಶ್ವೇಶ್ವರಯ್ಯರಿಗೆ ಚೀಫ್ ಎಂಜನಿಯರ್ ಹುದ್ದೆಗೆ ಆಹ್ವಾನಿಸಿದರು. ಎಂಜಿನಿಯರಿಂಗ್ ಕ್ಷೇತ್ರಕ್ಕೆ ಪೂರಕವಾದ ಕೆಲ ಯೋಜನೆಗಳ ಷರುತ್ತುಗಳ ಮೇರೆಗೆ ವಿಶ್ವೇಶ್ವರಯ್ಯ ಒಪ್ಪಿಕೊಂಡರು.

ವಿಶ್ವೇಶ್ವರಯ್ಯ ಅಧಿಕಾರಕ್ಕೆ ಬರುತ್ತಲೇ ಮೊದಲು ಮಾಡಿದ ಕೆಲವೆಂದರೆ, ಎಂಜಿನಿಯರ್ ಹುದ್ದೆಗಳನ್ನು ಅರ್ಹತೆ ಇರುವವರಿಗೆ ಕೊಟ್ಟಿದ್ದು. ಮೈಸೂರು ಪ್ರಾಂತ್ಯದ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಇತ್ತ ಸಲಹೆಗಳನ್ನು ಪರಿಗಣಿಸಿ ಅಂದಿನ ಮಹಾರಾಜರು ಹಲವು ಕ್ರಮಗಳನ್ನು ಕೈಗೊಂಡರು.

1912ರಲ್ಲಿ ವಿಶ್ವೇಶ್ವರಯ್ಯ ಮೈಸೂರಿನ ದಿವಾನರಾದರು. ಆ ಹುದ್ದೆಯಲ್ಲಿ ರಾಯರು ಮಾಡಿದ ಕಾರ್ಯ ಇನ್ನೂ ಅಗಾಧವಾದುದು. ವಿಶ್ವೇಶ್ವರಯ್ಯ ಕಟ್ಟಿಸಿದ ಕೆಆರ್‌ಎಸ್ ಅಣೆಕಟ್ಟು ಆಗಿನ ಕಾಲಕ್ಕೆ ಏಷ್ಯಾದಲ್ಲಿ ಅತಿದೊಡ್ಡ ಜಲಾಶಯಗಳಲ್ಲಿ ಒಂದೆನಿಸಿತ್ತು. ಹಲವು ವಿದ್ಯುಚ್ಛಕ್ತಿ ಯೋಜನೆಗಳನ್ನು ಕೊಟ್ಟರು. ಕರ್ನಾಟಕದಲ್ಲಿ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ತಾಂತ್ರಿಕ ಶಿಕ್ಷಣ, ಇತ್ಯಾದಿ ಬೆಳವಣಿಗೆಯಲ್ಲಿ ಸರ್ ಎಂವಿ ಪಾತ್ರ ದೊಡ್ಡದರು.

Engineers Day 2022 Date, History, Significance of Sir M Visvesvaraya birth anniversary in Kannada

ಹಲವು ಗೌರವಗಳು
ಮೇಧಾವಿಯಾಗದ್ದ ವಿಶ್ವೇಶ್ವರಯ್ಯ ಬಗ್ಗೆ ಬ್ರಿಟಿಷರಲ್ಲೂ ಅಭಿಮಾನ ಇತ್ತು. ಅನೇಕ ಬಿರುದು, ಸನ್ಮಾನಗಳು ರಾಯರನ್ನು ಅರಸಿ ಹೋಗಿದ್ದವು. ದಿವಾನರಾಗಿದ್ದಾಗ ಬ್ರಿಟಿಷ್ ಸರಕಾರ ವಿಶ್ವೇಶ್ವರಯ್ಯಗೆ ಸರ್ ಬಿರುದು ನೀಡಿ ಗೌರವಿಸಿತು. 1955ರಲ್ಲಿ ಸ್ವತಂತ್ರ ಭಾರತದಲ್ಲಿ ವಿಶ್ವೇಶ್ವರಯ್ಯಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಈ ಗೌರವ ಪಡೆದ ಮೊದಲ ಕನ್ನಡಿಗರು ಅವರು.

ವಿಶ್ವೇಶ್ವರಯ್ಯ ಅವರು ಕೆಲ ಪ್ರಮುಖ ಪುಸ್ತಕಗಳನ್ನೂ ರಚಿಸಿದ್ದಾರೆ. ಮೆಮೋಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್ ಎಂಬುದು ಇವರ ಆತ್ಮಕಥನ. "ನನ್ನ ವೃತ್ತಿ ಜೀವನದ ನೆನಪುಗಳು" ಎಂದು ಈ ಪುಸ್ತಕವನ್ನು ಡಾ. ಗಜಾನನ ಶರ್ಮ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

1920ರಲ್ಲಿ ರೀಕಂಸ್ಟ್ರಕ್ಟಿಂಗ್ ಇಂಡಿಯಾ, 1937ರಲ್ಲಿ "ನೇಷನ್ ಬಿಲ್ಡಿಂಗ್" ಎಂಬ ಪುಸ್ತಕಗಳನ್ನು ಆಂಗ್ಲ ಭಾಷೆಯಲ್ಲಿ ಬರೆದರು. ಇವೆರಡು ಪುಸ್ತಕಗಳೂ ಕನ್ನಡಕ್ಕೆ ಅನುವಾದಗೊಂಡಿವೆ.

English summary
National Engineers' Day is celebrated on September 15th in India, Tanzania and Sri Lanka. This day markes as respect to Sir M Visvesvaraya, the Engineering genius from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X