ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್‌ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ಕಾನೂನು ಏನಿದೆ?

|
Google Oneindia Kannada News

ಹೋಟೆಲ್‌ಗೆ ಹೋದಾಗ ಊಟದ ಬಳಿಕ ಟಿಪ್ಸ್ ಕೊಡುವುದು ರೂಢಿ. ಆದರೆ, ಈಗ ಹೊಟೇಲ್‌ನವರೇ ನಿರ್ದಿಷ್ಟ ಮೊತ್ತದ ಟಿಪ್ಸ್ ನಿಗದಿ ಮಾಡಿ ಅದನ್ನು ಸರ್ವಿಸ್ ಚಾರ್ಜ್ (Service Charge) ರೂಪದಲ್ಲಿ ಗ್ರಾಹಕರಿಂದ ವಸೂಲಿ ಮಾಡುತ್ತಾರೆ. ಉಟದ ಬಿಲ್‌ನಲ್ಲೇ ಸರ್ವಿಸ್ ಚಾರ್ಜ್ ಸೇರಿಸಲಾಗುತ್ತದೆ. ಗ್ರಾಹಕರು ಸರ್ವಿಸ್ ಚಾರ್ಜ್ ಕೊಟ್ಟು ಜೊತೆಗೆ ರೂಢಿಗತವಾಗಿ ಬಂದ ಟಿಪ್ಸ್ ಅನ್ನೂ ಸರ್ವರ್‌ಗೆ ನೀಡುತ್ತಾರೆ. ಇದು ಗ್ರಾಹಕರ ಸುಲಿಗೆ ಎಂದು ಆರೋಪಿಸಬಹುದು.

ಕೇಂದ್ರ ಸರಕಾರದ ಗಮನಕ್ಕೂ ಇದು ಬಂದಿದ್ದು, ಹೊಟೇಲ್ ಉದ್ಯಮಕ್ಕೆ ಎಚ್ಚರಿಕೆ ನೀಡಿದೆ. ಗ್ರಾಹಕ ಸ್ವ ಇಚ್ಛೆಯಿಂದ ನೀಡಬೇಕಾದ ಸೇವಾ ದರವನ್ನು ಹೊಟೇಲ್‌ನವರು ಬಿಲ್ ಮೂಲಕವೇ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (National Restaurant Association of India- ಎನ್‌ಆರ್‌ಎಐ) ಗೆ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಪತ್ರ ಬರೆದಿದ್ದಾರೆ.

ಹೋಟೆಲ್‌ನಿಂದ ಪಾರ್ಸೆಲ್ ತಂದ ಪರೋಟದಲ್ಲಿ ಹಾವಿನ ಚರ್ಮ ಪತ್ತೆಹೋಟೆಲ್‌ನಿಂದ ಪಾರ್ಸೆಲ್ ತಂದ ಪರೋಟದಲ್ಲಿ ಹಾವಿನ ಚರ್ಮ ಪತ್ತೆ

2017ರಲ್ಲಿ ಇಲಾಖೆ ರೂಪಿಸಿದ್ದ ಮಾರ್ಗಸೂಚಿಯನ್ನು ಉಲ್ಲೇಖಿಸಿ ರೆಸ್ಟೋರೆಂಟ್‌ಗಳ ಕ್ರಮವನ್ನು ರೋಹಿತ್ ಪ್ರಶ್ನೆ ಮಾಡಿದ್ದಾರೆ. ಸದ್ಯ ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ ಎರಡರಂದು ಈ ಸಂಬಂಧ ಚರ್ಚೆ ಮಾಡಲು ಸಭೆ ಕರೆದಿದೆ.

ಸೇವಾ ಶುಲ್ಕ ಏನು?

ಸೇವಾ ಶುಲ್ಕ ಏನು?

ಆರಂಭದಲ್ಲೇ ಹೇಳಿದ ಹಾಗೆ ಸರ್ವಿಸ್ ಚಾರ್ಜ್ ಅಥವಾ ಸೇವಾ ಶುಲ್ಕ ಎಂಬುದು ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಆಹಾರ ತಲುಪಿಸುವ ಸಿಬ್ಬಂದಿ ಹಾಗು ಗ್ರಾಹಕರ ಮಧ್ಯೆ ನಡೆಯುವ ನೇರ ವಹಿವಾಟು. ಅಂದರೆ, ಸರಳವಾಗಿ ಅದು ಹೋಟೆಲ್‌ನಲ್ಲಿ ಸರ್ವರ್‌ಗೆ ನಾವು ಕೊಡುವ ಟಿಪ್ಸ್ ಹಣ.

ಆದರೆ, ಈ ಟಿಪ್ಸ್ ಹಣವನ್ನು ಹೊಟೇಲ್‌ನವರು ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಗ್ರಾಹಕರಿಗೆ ನೀಡುವ ಬಿಲ್‌ಗೆ ಸೇರಿಸಿಬಿಡುತ್ತಾರೆ. ಸೇವೆ ಇಷ್ಟವಾದಲ್ಲಿ ಮಾತ್ರ ಗ್ರಾಹಕ ಸ್ವ ಇಚ್ಛೆಯಿಂದ ಸರ್ವಿಸ್ ಚಾರ್ಜ್ ಕೊಡಬಹುದು. ಬಲವಂತವಾಗಿ ಅಥವಾ ಕಡ್ಡಾಯವಾಗಿ ಅದನ್ನು ವಸೂಲಿ ಮಾಡುವಂತಿಲ್ಲ.

ಶವರ್ಮಾ ತಿಂದ ಬಾಲಕಿ ಸಾವು, ಬ್ಯಾಕ್ಟೀರಿಯಾಗೆ ಬಾಲಕಿ ಬಲಿಶವರ್ಮಾ ತಿಂದ ಬಾಲಕಿ ಸಾವು, ಬ್ಯಾಕ್ಟೀರಿಯಾಗೆ ಬಾಲಕಿ ಬಲಿ

ಗೈಡ್‌ಲೈನ್ಸ್ ಏನಿದೆ?

ಗೈಡ್‌ಲೈನ್ಸ್ ಏನಿದೆ?

ಮೇಲೆ ತಿಳಿಸಿದಂತೆ ಸರ್ವಿಸ್ ಚಾರ್ಜ್ ಅಥವಾ ಟಿಪ್ಸ್ ಕೊಡುವುದು ಬಿಡುವುದು ಗ್ರಾಹಕರ ಇಚ್ಛೆಗೆ ಬಿಟ್ಟಿದ್ದು. ಎಷ್ಟು ಟಿಪ್ಸ್ ಕೊಡಬೇಕು ಎಂಬುದೂ ಗ್ರಾಹಕರ ಇಚ್ಚೆಯೇ. ಹೋಟೆಲ್‌ನವರಾಗಲೀ, ಸಿಬ್ಬಂದಿಯಾಗಲೀ ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರನ್ನು ಕಡ್ಡಾಯಪಡಿಸುವಂತಿಲ್ಲ. ಇದು 2017ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

"ಹೋಟೆಲ್ ಮತ್ತು ಗ್ರಾಹಕರ ನಡುವಿನ ವಹಿವಾಟಿನಲ್ಲಿ ಸೇವಾ ಶುಲ್ಕ ಅಥವಾ ಟಿಪ್ಸ್ ಸೇರುವುದಿಲ್ಲ. ಅದು ಗ್ರಾಹಕ ಹಾಗು ಹೋಟೆಲ್ ಸಿಬ್ಬಂದಿ ಮಧ್ಯೆ ನಡೆಯುವ ಪ್ರತ್ಯೇಕ ವಹಿವಾಟಾಗಿರುತ್ತದೆ. ಜೊತೆಗೆ ಗ್ರಾಹಕರ ನಿರ್ಧಾರವೇ ಅಂತಿಮವಾಗಿರುತ್ತದೆ" ಎಂಬುದು ಮಾರ್ಗಸೂಚಿಯಲ್ಲಿ ಇರುವ ಒಂದು ಅಂಶ.

ಸರ್ವಿಸ್ ಚಾರ್ಜ್ ಕೊಡಲು ಒಪ್ಪದ ಗ್ರಾಹಕರನ್ನು ಹೊಟೇಲಿಗೆ ಸೇರಿಸದೇ ಇರುವ ಘಟನೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿವೆ. ಹಾಗೆಯೇ, ಗ್ರಾಹಕರು ಸರ್ವಿಸ್ ಚಾರ್ಜ್ ಜೊತೆಗೆ ವೇಟರ್‌ಗೆ ಟಿಪ್ಸ್ ಕೂಡ ಕೊಡುತ್ತಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಒಂದು ವೇಳೆ ಗ್ರಾಹಕರಿಗೆ ತಾವು ವಂಚನೆಗೊಳಗಾಗುತ್ತಿರುವುದು ಕಂಡುಬಂದಲ್ಲಿ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯನ್ನು ಸಂಪರ್ಕಿಸಿ ನ್ಯಾಯ ಕೇಳಬಹುದು.

ಹೊಟೇಲಿನವರು ಯಾಕೆ ಹೆದರುತ್ತಿಲ್ಲ?

ಹೊಟೇಲಿನವರು ಯಾಕೆ ಹೆದರುತ್ತಿಲ್ಲ?

ಕೇಂದ್ರ ಸರಕಾರ ಹೋಟೆಲ್ ಸರ್ವಿಸ್ ಚಾರ್ಜ್ ವಿಚಾರದಲ್ಲಿ ನಿಯಮವೇನು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳು ಅದನ್ನು ಯಾಕೆ ಜಾರಿಗೆ ತಂದಿಲ್ಲ ಎಂಬ ಪ್ರಶ್ನೆ ಸಹಜ. ಕೇಂದ್ರದ ಮಾರ್ಗಸೂಚಿಯು ಕಾನೂನಾಗಿಲ್ಲ. ಅದು ಕೇವಲ ಶಿಫಾರಸು ಅಥವಾ ಸಲಹೆ ಮಾತ್ರ. ಈ ಸಲಹೆ ಮೀರಿದರೆ ದಂಡ ವಿಧಿಸುವ ಅಥವಾ ಶಿಕ್ಷೆ ನೀಡುವ ಅವಕಾಶ ಕಾನೂನಿನಲ್ಲಿ ಇಲ್ಲ.

ಸಂಬಂಧಪಟ್ಟ ಕಾನೂನು ಎಂದರೆ 2019ರ ಗ್ರಾಹಕ ರಕ್ಷಣೆ ಕಾಯ್ದೆ. ಇದರಲ್ಲಿ ಸರ್ವಿಸ್ ಚಾರ್ಜ್ ಅಥವಾ ಟಿಪ್ಸ್ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ರೆಸ್ಟೋರೆಂಟ್‌ನವರ ವಾದ

ರೆಸ್ಟೋರೆಂಟ್‌ನವರ ವಾದ

ಸರ್ವಿಸ್ ಚಾರ್ಜ್ ಕಡ್ಡಾಯ ಇಲ್ಲದಿದ್ದರೂ ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿ ಯಾಕೆ ಸೇವಾ ಶುಲ್ಕ ಸೇರಿಸುತ್ತೀರಿ ಎಂದು ಹೋಟೆಲ್‌ನವರನ್ನು ಕೇಳಿದರೆ ಅವರು ಅದನ್ನು ಒಪ್ಪುವುದಿಲ್ಲ. ನಾವು ಬಿಲ್‌ನಲ್ಲಿ ಸೇರಿಸಿರುತ್ತೇವೆ. ಆದರೆ, ಅದನ್ನು ಕೊಡಲೇಬೇಕೆಂದು ಕಡ್ಡಾಯ ಮಾಡುವುದಿಲ್ಲ. ಗ್ರಾಹಕರಿಗೆ ಬೇಡ ಎಂದಾದಲ್ಲಿ ನಾವು ಸರ್ವಿಸ್ ಚಾರ್ಜ್ ಮೊತ್ತವನ್ನು ಕಳೆದುಹಾಕುತ್ತೇವೆ ಎಂದು ಉತ್ತರ ನೀಡುತ್ತಾರೆ.

ಬಿಲ್‌ನ ಮೊತ್ತದಲ್ಲಿ ಶೇ 10ರಷ್ಟು ಹಣ ಸೇವಾ ಶುಲ್ಕ ಪಡೆಯುತ್ತೇವೆ. ಈ ಹಣವನ್ನು ಹೋಟೆಲ್ ಸಿಬ್ಬಂದಿಗೆ ನೀಡುತ್ತೇವೆ ಎಂದೂ ಇವರು ಸಮರ್ಥನೆ ಮಾಡಿಕೊಳ್ಳುತ್ತಾರೆ.

ಇಲಾಖೆ ಕರೆದ ಸಭೆಯ ಅಜೆಂಡಾ ಏನು?

ಇಲಾಖೆ ಕರೆದ ಸಭೆಯ ಅಜೆಂಡಾ ಏನು?

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ 2ರಂದು ಸಭೆ ಕರೆದಿದೆ. ಇದರಲ್ಲಿ ನಾಲ್ಕು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಸರ್ವಿಸ್ ಚಾರ್ಜ್ ಹೇರುತ್ತಿರುವುದು, ಅದನ್ನು ಕಡ್ಡಾಯಗೊಳಿಸಿರುವುದು, ಇತರ ಶುಲ್ಕಗಳ ಹೆಸರಿನಲ್ಲಿ ಸರ್ವಿಸ್ ಚಾರ್ಜ್ ಪಡೆಯುತ್ತಿರುವುದು, ಸರ್ವಿಸ್ ಚಾರ್ಜ್ ಐಚ್ಛಿಕ ಎಂಬ ವಿಚಾರವನ್ನು ಗ್ರಾಹಕರಿಂದ ಮುಚ್ಚಿಡುವುದು ಈ ವಿಚಾರಗಳನ್ನು ಇಲಾಖೆಯ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ.

English summary
The Union government has pulled up restaurants for forcing consumers to pay a service charge after a meal. The Department of Consumer Affairs has called for a meeting on 2 June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X