• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಬಂಧ ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಕೊಡಲಿ : ಕುಮಾರ್ ಬಂಗಾರಪ್ಪ ಸಂದರ್ಶನ

By ಗುರು ಕುಂಟವಳ್ಳಿ
|
   ಸಂಬಂಧ ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಕೊಡಲಿ : ಕುಮಾರ್ ಬಂಗಾರಪ್ಪ ಸಂದರ್ಶನ | oneindia Kannada

   ಶಿವಮೊಗ್ಗ, ಮೇ 01 : 'ಜೀವನಪೂರ್ತಿ ಸಹೋದರರಾಗೇ ಇರಬೇಕು ಎಂಬುದು ನನ್ನ ಉದ್ದೇಶ. ಆದರೆ, ಅವರಿಗೆ ಆ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಸಂಬಂಧಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬೇಗೆ ತಿಳುವಳಿಕೆ ಬರಲಿ' ಎಂದು ಕುಮಾರ್ ಬಂಗಾರಪ್ಪ ಹೇಳಿದರು.

   ಕುಮಾರ್ ಬಂಗಾರಪ್ಪ ಅವರು ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಚುನಾವಣೆಯಲ್ಲಿ ಅವರ ಎದುರಾಳಿ ಸಹೋದರ, ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ. ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ಕಾರ್ಯ ನಡೆಸುತ್ತಿರುವ ಕುಮಾರ್ ಬಂಗಾರಪ್ಪ ಅವರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದರು.

   ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ

   'ಮಾಧ್ಯಮಗಳು ಸೊರಬದಲ್ಲಿ ಸಹೋದರರ ಸವಾಲ್ ಎಂಬ ಪದವನ್ನು ಬಳಸುತ್ತವೆ. ಜೀವನಪೂರ್ತಿ ನಾವೆಲ್ಲರೂ ಸಹೋದರರಾಗೇ ಇರಬೇಕು ಎಂಬುದು ನನ್ನ ಉದ್ದೇಶ, ಅವರಿಗೆ ಆ ಉದ್ದೇಶ ಇದೆಯೋ ಇಲ್ಲವೋ ತಿಳಿದಿಲ್ಲ' ಎಂದು ಎದುರಾಳಿಯ ಹೆಸರು ಹೇಳದೇ ಕುಮಾರ್ ಬಂಗಾರಪ್ಪ ಟೀಕಿಸಿದರು.

   ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿ. ಕುಮಾರ್ ಬಂಗಾರಪ್ಪ ಬಿಜೆಪಿಯ ಅಭ್ಯರ್ಥಿ. ಕಾಂಗ್ರೆಸ್ ಪಕ್ಷದಿಂದ ರಾಜು ತಲ್ಲೂರು ಅವರು ಕಣದಲ್ಲಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ ನೋಡಿ..

   ಪ್ರಚಾರದಲ್ಲಿ ತೊಡಗಿದ್ದೀರಿ, ಜನರ ಪ್ರತಿಕ್ರಿಯೆ ಹೇಗಿದೆ?

   ಬಿಜೆಪಿ ಪರವಾಗಿ ಅಭೂತಪೂರ್ವವಾದ ಬೆಂಬಲ ಸಿಗುತ್ತಿದೆ. ರೈತರು, ಮಹಿಳೆಯರು, ಯುವಕರು ದೊಡ್ಡಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಆಶೀರ್ವದಿಸಲಿದ್ದಾರೆ. ಸೊರಬ ಕ್ಷೇತ್ರಕ್ಕೆ ನೀರಾವರಿಯ ವ್ಯವಸ್ಥೆ ಆಗಬೇಕು, ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದು ನಮ್ಮನ್ನು ಸ್ವಾಗತಿಸುತ್ತಿದ್ದಾರೆ. ಯಡಿಯೂರಪ್ಪ ಮತ್ತು ಮೋದಿ ಅವರ ಅಲೆ ಕ್ಷೇತ್ರದಲ್ಲಿ ಎದ್ದಿದೆ. ಶಾಂತಿಯುತವಾಗು ಚುನಾವಣೆ ನಡೆಯಲಿದೆ.

   ಸೊರಬದ ಅಭಿವೃದ್ಧಿಗೆ ನಿಮ್ಮ ಚಿಂತನೆಗಳೇನು?

   ನೀರಾವರಿಗೆ ನಮ್ಮ ಮೊದಲ ಆದ್ಯತೆ. ಬಗರ್ ಹುಕುಂನಲ್ಲಿ ಅನ್ಯಾಯ ನಡೆದಿದೆ, ಅದನ್ನು ಸರಿಯಾದ ಹಾದಿಗೆ ತರುವ ಕೆಲಸವಾಗಬೇಕು. ಸುಮಾರು 25 ಸಾವಿರ ಅರ್ಜಿಗಳನ್ನು ವಜಾ ಮಾಡಲಾಗಿದೆ. ಬಡವರಿಗೆ, ರೈತರಿಗೆ ಅನುಕೂಲವಾಗಲು ಇವುಗಳನ್ನು ಸರಿದಾರಿಗೆ ತರಬೇಕಾಗಿದೆ.

   ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಬೇಕು ಎಂಬ ಕನಸಿದೆ. ಕ್ಷೇತ್ರದ ವಿದ್ಯುತ್ ವಿತರಣಾ ವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕು. ಹಿಂದೆ ಕೈಗೊಂಡಿದ್ದ ಅನೇಕ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಬೇಕು.

   ಕ್ಷೇತ್ರದಲ್ಲಿ ನಿಮ್ಮ ಎದುರಾಳಿ ಯಾರು?

   ಇಲ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೋರಾಟ ನಡೆಯುತ್ತಿತ್ತು. ಲೋಕಸಭೆ ಚುನಾವಣೆಯಲ್ಲಿಯೂ ಹೀಗೆ ಹೋರಾಟ ನಡೆದಿತ್ತು. ಎರಡೂ ಪಕ್ಷಗಳು ನಮ್ಮ ಎದುರಾಳಿ.

   ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಡಮ್ಮಿ ಅಭ್ಯರ್ಥಿ ಹಾಕಿತ್ತು. ಈ ಚುನಾವಣೆಗೆ ಕ್ಷೇತ್ರದಲ್ಲಿ ಸಮಾಜದ ಮತಗಳನ್ನು ವಿಭಜನೆ ಮಾಡಲು ಒಬ್ಬ ಅಭ್ಯರ್ಥಿ ಹಾಕಲಾಗಿದೆ. ಗೆದ್ದರೆಷ್ಟು, ಸೋತರೆಷ್ಟು ಎಂಬ ಅಭಿಪ್ರಾಯದಲ್ಲಿ ಕಣಕ್ಕಿಳಿಸಲಾಗಿದೆ.

   ಜೆಡಿಎಸ್ ಪಕ್ಷದಲ್ಲಿ ಅಜೆಂಡಾ ಇಲ್ಲ. 5 ವರ್ಷ ಅಧಿಕಾರವಿದ್ದಾಗಲೇ ಕೆಲಸ ಮಾಡಿಲ್ಲ. ಕಾಂಗ್ರೆಸ್, ಜೆಡಿಎಸ್ ಇಬ್ಬರು ಎದುರಾಳಿಗಳಾಗಿ ಇರುತ್ತಾರೆ. ಅವರನ್ನು ಎದುರಿಸುವ ಶಕ್ತಿ ಇದೆ.

   ಸಹೋದರರ ಸ್ಪರ್ಧೆ ಬಗ್ಗೆ ಏನು ಹೇಳುವಿರಿ?

   ಮಾಧ್ಯಮಗಳು ಸಹೋದರರ ಸವಾಲ್ ಎಂಬ ಪದವನ್ನು ಬಳಕೆ ಮಾಡುತ್ತವೆ. ಜೀವನ ಪರ್ಯಂತ ಸಹೋದರರಾಗಿ ಇರಬೇಕು ಎಂಬುದು ನನ್ನ ಉದ್ದೇಶ. ಅವರಿಗೆ ಆ ಉದ್ದೇಶ ಇದೆಯೋ?, ಇಲ್ಲವೋ ತಿಳಿದಿಲ್ಲ.

   ಸಂಬಂಧಗಳು, ಸಹೋದರರು, ಅಣ್ಣ-ತಮ್ಮ-ತಂಗಿ ಎಲ್ಲದಕ್ಕೂ ಅರ್ಥವಿಲ್ಲದೇ ರಾಜಕಾರಣ ಮಾಡಲು ಹೋಗುತ್ತಿದ್ದಾರೆ. ದೇವರು ಅವರಿಗೆ ಬೇಗ ತಿಳಿವಳಿಕೆ ಕೊಡಲಿ ಎಂದು ಪ್ರಾರ್ಥಿಸುವೆ. ಸಂವಿಧಾನದ ಅಡಿಯಲ್ಲಿ ಎಲ್ಲಾ ಪಕ್ಷಗಳು ಸಹೋದರರು. ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ನೇರ ಹಣಾಹಣಿ ಕ್ಷೇತ್ರದಲ್ಲಿದೆ.

   ಸಂದರ್ಶನದ ಪೂರ್ಣ ವಿವರಕ್ಕಾಗಿ ವಿಡಿಯೋ ನೋಡಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Kumar Bangarapap interview : Kumar Bangarapap contesting for Karnataka assembly elections 2018 form Sorab assembly constituency. Sorab will witness for brother's fight. His brother Madhu Bangarappa JD(S) candidate.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more