ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಗುರುತಿನ ಚೀಟಿ ಜತೆ ಆಧಾರ್ ಲಿಂಕ್ ಹೇಗೆ?

By Mahesh
|
Google Oneindia Kannada News

ಮೊಬೈಲ್ ಸಿಮ್, ವಿಮೆ, ಬ್ಯಾಂಕ್ ಖಾತೆ ಸೇರಿದಂತೆ ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ನಂಬರ್ ಜೋಡಣೆ ಅತಿ ಮುಖ್ಯವಾಗಿದೆ. ಈಗ ಚುನಾವಣಾ ಪರ್ವದಲ್ಲಿ ಆಧಾರ್ ಕಾರ್ಡ್ ನಂಬರ್ ಜೊತೆಗೆ ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ನಂಬರ್ ಜೋಡಣೆ ಮಾಡುವುದು ಒಳ್ಳೆ ಅಭ್ಯಾಸ. ಇದಕ್ಕೆ ಆನ್ ಲೈನ್ ನಲ್ಲಿ ಹೇಗೆ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿ ವರ್ಷದಂತೆ ಈ ವರ್ಷ ಕೂಡಾ ನಕಲಿ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕಬಲ್ಲ ಹೆಸರಿನ ಪಟ್ಟಿ ತಯಾರಿಕೆಯಲ್ಲಿ ಎನ್ಜಿಒಗಳು ನೆರವು ನೀಡುತ್ತಿವೆ. ಆಧಾರ್ ನಂಬರ್ ಜೋಡಣೆ ನಂತರ ನಕಲಿ ಮತದಾರರನ್ನು ತೆಗೆದು ಹಾಕುವುದು ಸುಲಭವಾಗಲಿದೆ.

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಆನ್ ಲೈನ್ ನಲ್ಲಿ ಮತದಾರರಿಗೆ ಸೇವೆ ನೀಡಲು ಇರುವ ಎನ್ ವಿಎಸ್ ಪಿ ವೆಬ್ ಪೋರ್ಟಲ್ ನಲ್ಲಿ ಮತದಾರರ ಗುರುತಿನ ಚೀಟಿ ಇರುವ ಪಟ್ಟಿಗೆ ನಿಮ್ಮ ಹೆಸರು ಸೇರಿರುವುದು, ತೆಗೆದು ಹಾಕುವುದು, ಮಾಹಿತಿ ಬದಲಾಯಿಸುವ ಸುಲಭ ವಿಧಾನದಲ್ಲೇ ಮತದಾರರ ಗುರುತಿನ ಚೀಟಿ ಸಂಖ್ಯೆ ಜತೆಗೆ ಆಧಾರ್ ಸಂಖ್ಯೆ ಜೋಡಿಸಬಹುದು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ,ಬದಲಾವಣೆ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ,ಬದಲಾವಣೆ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ?: ಮತದಾನ ಮಾಡಲು ಅರ್ಹರಾದವರು ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಫಾರ್ಮ್ 6 ಭರ್ತಿ ಮಾಡಿ ಸುಲಭವಾಗಿ ಮತದಾರರ ಗುರುತಿನ ಚೀಟಿ ಪಡೆಯಬಹುದು.

ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವುದು ಹೇಗೆ?: ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿದ್ದರೆ, ಆನ್ ಲೈನ್ ಮೂಲಕ ವಿವರಗಳು ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು. ಆನ್ ಲೈನ್ ನಲ್ಲಿ ತಪ್ಪು ಸರಿಪಡಿಸಲು ಫಾರ್ಮ್ 7 ತುಂಬಬಹುದು.

ಇದಲ್ಲದೆ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವುದು ಕೂಡಾ ಆನ್ ಲೈನ್ ನಲ್ಲಿ ಎನ್ ವಿ ಎಸ್ ಪಿ ವೆಬ್ ಸೈಟ್ ಮೂಲಕ ಮಾಡಬಹುದು. ಆನ್ ಲೈನ್ ನಲ್ಲಿ ಇದೇ ವಿಧಾನದಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ಜತೆಗೆ ಆಧಾರ್ ಸಂಖ್ಯೆ ಜೋಡಿಸಬಹುದು.

ಮತದಾರರ ನೆರವಿಗಾಗಿ ಇರುವ ವೆಬ್ ಸೈಟ್

ಮತದಾರರ ನೆರವಿಗಾಗಿ ಇರುವ ವೆಬ್ ಸೈಟ್

* ಚುನಾವಣಾ ಆಯೋಗದ ವೆಬ್ ಸೈಟ್ (National Voters Services Portal) ಗೆ ಭೇಟಿ ಕೊಡಿ
* ವೆಬ್ ಸೈಟ್ ನ ಮುಖಪುಟದಲ್ಲಿ Apply online for registration of new voter/due to shifting from AC ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಅಥವಾ
* ಫಾರ್ಮ್ 7 ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
* ನಿಮ್ಮ ರಾಜ್ಯ ಹಾಗೂ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ

ವಿಳಾಸ ಬದಲಾಗಿದ್ದರೆ ಹೊಸ ಐಡಿ ಕಾರ್ಡ್ ಪಡೆಯುವುದು ಹೇಗೆ?ವಿಳಾಸ ಬದಲಾಗಿದ್ದರೆ ಹೊಸ ಐಡಿ ಕಾರ್ಡ್ ಪಡೆಯುವುದು ಹೇಗೆ?

ನಿಮ್ಮ ಸ್ವ ವಿವರ

ನಿಮ್ಮ ಸ್ವ ವಿವರ

* ನಿಮ್ಮ ಹೆಸರು(ಮತದಾರರ ಪಟ್ಟಿಯಲ್ಲಿರುವಂತೆ)
* ಪಾರ್ಟ್ ನಂಬರ್ ಹಾಗೂ ಸೀರಿಯಲ್ ನಂಬರ್ ನಮೂದಿಸಿ
* ನಿಮ್ಮ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ

* ಹುಟ್ಟಿದ ದಿನಾಂಕ, ಸಂಬಂಧಿಕರ ಹೆಸರು ದಾಖಲಿಸಿ

Feed Aadhaar No ಆಯ್ಕೆ ಮಾಡಿಕೊಳ್ಳಿ

Feed Aadhaar No ಆಯ್ಕೆ ಮಾಡಿಕೊಳ್ಳಿ

* ಸರ್ಚ್ ಬಟನ್ ಒತ್ತಿ, Feed Aadhaar No ಆಯ್ಕೆ ಮಾಡಿಕೊಳ್ಳಿ
ನಿಮ್ಮ ವೆಬ್ ಪುಟದ ಎಡಬದಿಯಲ್ಲಿ ಸಿಗಲಿದೆ.
* pop up ಪುಟದಲ್ಲಿ ನಿಮ್ಮ ಹೆಸರು, 12 ಅಂಕಿಗಳ ಸಂಖ್ಯೆಗಳ ಅಧಾರ್ ನಂಬರ್, ಎಪಿಕ್ ನಂಬರ್ ಹಾಗೂ ನೋಂದಾಯಿತ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ ಹಾಕಿ
* submit ಬಟನ್ ಕ್ಲಿಕ್ ಮಾಡಿದ ಮೇಲೆ ಸ್ಕ್ರೀನ್ ನಲ್ಲಿ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿರುವುದನ್ನು ಖಾತ್ರಿ ಪಡಿಸಲಾಗುವುದು

English summary
Karnataka Assembly Elections 2018: Here are the step by steps methods which guide you How to apply for linking Aadhaar card number with Voters Identity card online via NVSP portal. One can apply by submitting Form 6 for inclusion of name in electoral roll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X