ಐಪಿಎಲ್‌ಗೂ ಮುನ್ನ ಈಡನ್ ಗಾರ್ಡನ್ಸ್‌ನಲ್ಲಿ ಮಿಂಚಿದ ಉದಯೋನ್ಮುಖ ಪ್ರತಿಭೆ ಸಾರ್ಥಕ್ ರಂಜನ್ ಯಾರು?
Sarthak Ranjan: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬ್ಯಾಟರ್ ಸಾರ್ಥಕ್ ರಂಜನ್, ಐಪಿಎಲ್ ಸೀಸನ್‌ಗೂ ಮುನ್ನ ಶುಕ್ರವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ತಂಡದ ಆಂತರಿಕ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ರಾಜಕಾರಣಿ ಪಪ್ಪು ಯಾದವ್ ಅವರ ಪುತ್ರನಾಗಿರುವ ಸಾರ್ಥಕ್, ಕೇವಲ 16 ಎಸೆತಗಳಲ್ಲಿ 37 ರನ್ ಸಿಡಿಸಿ ಮಿಂಚಿದರು.
ರಿಂಕು ಸಿಂಗ್ ನಾಯಕತ್ವದ 'ಗೋಲ್ಡನ್ ನೈಟ್ಸ್' ಪರವಾಗಿ ಆಡಿದ ಇವರು, ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ನೇತೃತ್ವದ 'ಪರ್ಪಲ್ ನೈಟ್ಸ್' ವಿರುದ್ಧ ಈ ಪ್ರದರ್ಶನ ನೀಡಿದರು. ತಮ್ಮ ಇನಿಂಗ್ಸ್‌ನಲ್ಲಿ ಸಾರ್ಥಕ್ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದ್ದು, ಈ ವೇಳೆ ಸುಮಾರು 240ರಷ್ಟು ಸ್ಟ್ರೈಕ್ ರೇಟ್ ಹೊಂದಿದ್ದರು. ಇನ್ನೂ ಅಂತಿಮವಾಗಿ ಬ್ಲೆಸ್ಸಿಂಗ್ ಮುಜರಬಾನಿ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ನೀಡುವ ಮೂಲಕ ಸಾರ್ಥಕ್ ಪೆವಿಲಿಯನ್‌ನತ್ತ ನಡೆದರು.

ದೇಶಿಯ ಟೂನಿಗಳಲ್ಲಿ ಅದ್ಭುತ ಪ್ರದರ್ಶನ
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ, 29 ವರ್ಷದ ಈ ಆಟಗಾರನನ್ನು ಕೆಕೆಆರ್ ಫ್ರಾಂಚೈಸಿಯು ಅವರ ಮೂಲ ಬೆಲೆಯಾದ 30 ಲಕ್ಷ ರೂಪಾಯಿಗೆ ಖರೀದಿಸಿತು. ಆದರೆ, ಐಪಿಎಲ್ ಪಾದಾರ್ಪಣೆಗೂ ಮುನ್ನ ದೇಶೀಯ ಕ್ರಿಕೆಟ್ ಹಾಗೂ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ನಿರಂತರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸಾರ್ಥಕ್ ಅವರ ಈ ಅದ್ಭುತ ಪ್ರತಿಭೆಯು ಆಯ್ಕೆದಾರರು ಹಾಗೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅಗ್ರ ಕ್ರಿಕೆಟ್ ಹಂತಕ್ಕೆ ಏರಲು ಶ್ರಮಿಸುತ್ತಿರುವ ಪ್ರತಿಭಾವಂತ ದೇಶೀಯ ಆಟಗಾರರಿಗೆ ಸಾರ್ಥಕ್ ಅವರ ಆಯ್ಕೆಯು ಒಂದು ಉತ್ತಮ ಉದಾಹರಣೆಯಾಗಿದೆ.
ಸಾರ್ಥಕ್‌ಗೆ ಶುಭಹಾರೈಸಿದ ತಂದೆ ಪಪ್ಪು ಯಾದವ್
ತಂದೆ ಪಪ್ಪು ಯಾದವ್ ಅವರು ಟ್ವೀಟ್ ಮಾಡಿ, "ಅಭಿನಂದನೆಗಳು ಮಗನೇ, ಶ್ರದ್ಧಯಿಂದ ಆಡು, ನಿನ್ನ ಪ್ರತಿಭೆಯ ಬಲದಿಂದ ನಿನ್ನದೇ ಆದ ಗುರುತನ್ನು ರೂಪಿಸಿಕೊ. ಇನ್ಮುಂದೆ ಸಾರ್ಥಕ್ ಹೆಸರಿನಿಂದಲೇ ನಮ್ಮನ್ನು ಗುರುತಿಸುವಂತೆ ಆಗಲಿ," ಎಂದು ಶುಭಹಾರೈಸಿದ್ದಾರೆ. ಹೀಗೆ ದೊಡ್ಡ ವೇದಿಕೆಯಲ್ಲಿ ಸಾರ್ಥಕ್ ಅದ್ಭುತ ಪ್ರದರ್ಶನದ ಮೂಲಕ ತನ್ನದೇ ಆಟ ಛಾಪು ಮೂಡಿಸಲಿ ಎಂದು ಅವರು ತುಂಬು ಹೃದಯದಿಂದ ಹಾರೈಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್‌ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣ್‌ದೀಪ್ ಸಿಂಗ್, ರಿಂಕು ಸಿಂಗ್, ರೋವ್ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮರೂನ್ ಗ್ರೀನ್, ಫಿನ್ ಅಲೆನ್, ಮತೀಶ ಪತಿರಾನ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೀಫರ್ಟ್, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.












Click it and Unblock the Notifications