ಗೃಹ ಸಚಿವರ ಪುತ್ರಿ ಸೌಮ್ಯ ಆಸ್ತಿ ಕೇವಲ 47ಲಕ್ಷ ರೂ
ಬೆಂಗಳೂರು, ಏಪ್ರಿಲ್ 21: ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದ್ದು, ಒಟ್ಟು 47 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಸೌಮ್ಯ ರೆಡ್ಡಿ ಕೇವಲ 47 ಲಕ್ಷ ರೂ. ಚರ ಆಸ್ತಿ ಹೊಂದಿದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. 950 ಗ್ರಾಂ ಚಿನ್ನ, ಐದು ಕೆ.ಜಿ. ಬೆಳ್ಳಿ, ಒಂದು ಕಾರ್ ಹಾಗೂ 4,92,268 ಲಕ್ಷ ರೂ. ಗಳ ಫಿಕ್ಸ್ಡ್ ಡೆಪಾಸಿಟ್ ಹೊಂದಿರುವ ಸೌಮ್ಯ ರೆಡ್ಡಿ ತಮ್ಮ ಪತಿಗಿಂತ ಶ್ರೀಮಂತೆ. ಸೌಮ್ಯ ಅವರ ಪತಿ ಖಾತೆಯಲ್ಲಿ 39,296 ರೂ.ಗಳನ್ನು ಹೊಂದಿದ್ದಾರೆ.
ಸೌಮ್ಯ ರೆಡ್ಡಿಯವರ ಪತಿ ಕೇವಲ ಏಲು ಲಕ್ಷವನ್ನು ಹೊಂದಿದ್ದಾರೆ. ಇನ್ನು ಸೌಮ್ಯ ರೆಡ್ಡಿ ನಾಲ್ಕು ಲಕ್ಷ ರೂ. ಸಾಲ ಹೊಂದಿದ್ದರೆ ಪತಿ ಕೇವಲ ಒಂದು ಲಕ್ಷ ರೂ. ಸಾಲ ಹೊಂದಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣಗಳು ಇಲ್ಲ. ಸೌಮ್ಯ ರೆಡ್ಡಿ ಎಲ್‌ಐಸಿ ಅವರು ಐದು ಲಕ್ಷದ ಎರಡು ಪಾಲಿಸಿಗಳನ್ನು ಮಾಡಿಸಿದ್ದಾರೆ. ಅವರ ಪತಿ ಬಳಿ 5 ಲಕ್ಷದ ಒಂದು ಪಾಲಿಸಿ ಇದೆ.

ಸೌಮ್ಯ ರೆಡ್ಡಿ ಬಳಿ 4,70,000 ಲಕ್ಷ ಮೌಲ್ಯದ ಕಾರು ಇದ್ದು, ಪತಿ 1,85,೦೦೦ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿದ್ದಾರೆ. ಸೌಮ್ಯ ರೆಡ್ಡಿ ಬಳಿ ಒಟ್ಟು 47,64,768 ಲಕ್ಷ ರೂ.ಗಳಿವೆ. ಪತಿಯ ಬಳಿ ಒಟ್ಟು 7,24,296 ರೂ.ಗಳಿವೆ.












Click it and Unblock the Notifications