ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲೊಂದು ಮಹಲ್! ಆದರೆ,ಅಲ್ಲ ಇದು ತಾಜ್ ಮಹಲ್!

By Staff
|
Google Oneindia Kannada News


ರಾತ್ರಿಯ ಭಯಾನಕ ಏಕಾಂತತೆಯಲ್ಲಿ ಮಹಾರಾಜರ ಚಿತ್ರ ನನಗೆ ಸಂಗಾತಿಯಾಗತೊಡಗಿತ್ತು. ಕಣ್ಣುಮುಚ್ಚಿಕೊಂಡು ನನ್ನ ಹಾಗು ಮಹಾರಾಜರ ಸಂಭಾಷಣೆಯನ್ನು ಆಲಿಸುತ್ತಿದ್ದೆ. ಕಣ್ಣು ತೆರೆದಾಗ ಮಹಲಿನ ಗೋಡೆಗಳು “ಒಳ್ಳೆ ಒಳಗುಟ್ಟಿನವಳು ಈ ಶರ್ಮಿಷ್ಠೆ! ಪ್ರಿಯಕರನೊಂದಿಗೆ ಗಳಿಗೆಗಳಿಗೆಗಳುದ್ದಕ್ಕೂ ಸರಸದ ಮಾತುಗಳಲ್ಲಿ ತೊಡಗಿರುತ್ತಾಳೆ.ಆದರೆ ಅದರಲ್ಲಿನ ಒಂದಕ್ಷರವೂ ನಮ್ಮ ಕಿವಿಗೆ ಬೀಳುವುದಿಲ್ಲವಲ್ಲ ಎನ್ನುತ್ತಿದ್ದವು.” [ಶರ್ಮಿಷ್ಠೆಯ ಸ್ವಗತ; ಯಯಾತಿ :ವಿ.ಎಂ.ಇನಾಂದಾರ್]



Make the destiny your destinationಒಂದೂರಲೊಬ್ಬ ರಾಜ ಇದ್ದ. ಒಂದಿವ್ಸ ಊರಿಂದೂರಿಗೆ ಹೋಗೋವಾಗ ಒಂದು ಹುಡುಗಿ ಸೊಂಟದ ಮೇಲೆ ನೀರು ತುಂಬಿದ ಕೊಡ ಇಟ್ಟ್ಕೊಂಡು ಕಾಳಿದಾಸನ ವರ್ಣನೆಗೆ ಮಾತ್ರ ನಿಲುಕುವಂತೆ ಬಳುಕುತ್ತಾ ಹೋಗ್ತಾಇದ್ಲು. ರಾಜನಿಗೆ ಆ ಹುಡುಗಿ ಮೇಲೆ ಮನಸ್ಸಾಯ್ತು. ಸರಿ, ಭಟರನ್ನು ಕಳುಹಿಸಿ ಕೂಡಲೇ ಆ ಹುಡುಗಿ ಮನೆ ಮಂದಿಯೊಡನೆ ಮದುವೆ ಮಾತು ಪ್ರಸ್ತಾಪ ಮಾಡಿ, ಒಡ್ಡೋಲಗ ಊದಿಸಿ, ಅರಮನೆಗೆ ಕರೆದುಕೊಂಡು ಬಂದ.

ಅವಳನ್ನು ರಾಣಿ ಮಾಡೇ ಬಿಟ್ಟ. ಓಕೆ, ಈ ಕಥೆಯಲ್ಲೇನು ಸ್ವಾರಸ್ಯ ಇದೆ? ನಾವು ಕೇಳಿರುವ ಎಲ್ಲಾ fairy taleಗಳಲ್ಲೂ ಕೊಂಚ, ಹೆಚ್ಚು ಹೀಗೇ ತಾನೇ ಆಗೋದು?! ಇಂಥದ್ದೇ ಹಗಲುಗನಸನ್ನು ನಾವು ಎಷ್ಟೋ ಬಾರಿ ಬೆಳಗಿನ ಜಾವದ ಕನಸಾಗಲೀ ದೇವರೇ ಅಂಥ ಗುಟ್ಟಾಗಿ ಪ್ರಾರ್ಥಿಸಿದ್ದು ಇದೆ ತಾನೆ. . . . . .ನೋಡಿ, ನೋಡಿ ಜೋರಾಗ್ಹೇಳ್ದೇಹೋದ್ರೂ ಪರ್ವಾಗಿಲ್ಲ ಮನಸ್ಸಿನಲ್ಲಾದ್ರೂ ನಿಜ ಹೇಳ್ಕೊಳ್ಳಿ. ಓಕೆ, ನೀವು nostalgiaಗಳ ಗುಹೆ ಹೊಕ್ಕುವುದಕ್ಕೆ ಮುಂಚೆ ಆ ಕಥೆಯ ಮುಂದಿನ ಭಾಗ ಹೇಳ್ತೀನಿ ಕೇಳಿ.

ಸರಿ ಆ ಹುಡುಗಿ ಮಹಾರಾಣಿ ಆಗೋದಕ್ಕೆ ಮುಂಚೆ ರಾಜ ಅವಳನ್ನು ಮೊದಲು ನೋಡಿದ್ದನಲ್ಲ ಅದೊಂದು ಪುಟ್ಟಾತಿಪುಟ್ಟ ಹಳ್ಳಿ.. ನೀರಿಗೆ ಬಹಳ ತಾಪತ್ರಯ ಇದ್ದ village! ಹೂಂ, ತನ್ನ ರಾಣಿಯ ತವರೂರನ್ನು ಹಾಗೇ ಬಿಡೋದು ಅಂದ್ರೇನು? So, ರಾಜ ಆ ಹಳ್ಳಿಗೆ ಸರಾಗವಾದ ನೀರಿನ ವ್ಯವಸ್ಥೆ ಮಾಡಿದ. ಅಷ್ಟು ಸಾಕೇ? ತನ್ನ ಸಾಮ್ರಾಜ್ಯದ ರಾಣಿಯ ಬಗ್ಗೆ ಪ್ರೀತಿಯ ಹರಿವು ಎಷ್ಟಿದ್ದರೂ ಯಾಕೋ ರಾಜನಿಗೆ ತೃಪ್ತಿಯಾಗದು. ಆ ಹಳ್ಳಿಯಲ್ಲೊಂದು ಗುಡಿ ಕಟ್ಟಿಸಿ ಕೃತಾರ್ಥ ಭಾವ ಮೆರೆದ ರಾಜ!

Temple built by JC Wadeyer in Mangalaಆಹಾ, ಈಗ ನಿಮಗೆ ಈ ಕಥೆಯನ್ನು ಮೊದಲೊಮ್ಮೆ ಇದೇ ತರಹ ಕೇಳಿದ್ದ ನೆನಪಲ್ಲ್ವಾ? ಇಲ್ಲ. ಇಲ್ಲ ಈಗ ನೀವು ಸುಳ್ಳು ಹೇಳ್ತಿಲ್ಲ! ಹೌದು, ಇದು ನಮ್ಮ ಮಹಾರಾಜರೇ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್ ಹಾಗು ಅವರ ರಾಣಿ ತ್ರಿಪುರ ಸುಂದರಮ್ಮಣ್ಣಿಯವರ ಬಗ್ಗೆ ನಾವೆಲ್ಲಾ ಬಾಲ್ಯದಿಂದ ಕೇಳಿ ಬೆಳೆದ ಕಥೆ ತಾನೆ?!

ಗೊತ್ತಾಯ್ತು, ನಿಮಗೆ ಆ ಹಳ್ಳಿ ಹೆಸರು ನೆನಪಾಗುತ್ತಿಲ್ಲ ಅಲ್ಲ್ವಾ? ಅದರ ಹೆಸರು ಮಂಗಳ. ಅರಮನೆ ಊರು ಮೈಸೂರಿನ ಐಲಾಂದ್ರ ಕಂಬದ ಚೌಕದಿಂದ ಸೀದ ನಲವತ್ತು ಮೇಲೊಂದೆರಡು ಕಿಲೋ ಮೀಟರ್ ಹೋದ್ರೆ ಆ ಮಂಗಳ ಮಹಲ್‍ ಅನ್ನು ನೋಡಬಹುದಂತೆ.

ಕೆರೆತೊರೆಯ ಜೀವಜಲದಿಂದ ಜೀವನ ನಡೆಸೋ ಹುಡುಗಿ ಎಂದಾದ್ರು ರಾಣಿಯಾಗೋ ಕಲ್ಪನೆ ಮಾಡ್ಕೊಂಡಿರಕ್ಕಾದ್ರೂ ಸಾಧ್ಯವಾಗಿರುತ್ತಾ? ಮಹತ್ತ್ವಾಕಾಂಕ್ಷೆಯಿರಲಿ ಆಸೆ ಆಕಾಂಕ್ಷೆ‍ಗೂ ಆಸ್ಪದವಿರದಿರಬಹುದಾದ ಬದುಕಿನ ಚರದಲ್ಲಿ ಅರಮನೆ, ರಾಣಿ ಹುದ್ದೆ ಯಾವ ಭಾವವನ್ನು ಬಿತ್ತಿರಬಹುದು? ಅದ್ಯಾವ ಒತ್ತಡವನ್ನು ನೀಡಿರಬಹುದು? ಈ ಕಥೆ ಕೇಳಿದಾಗ್ಲೆಲ್ಲಾ ನನಗೆ ಹೀಗೆಲ್ಲಾ ಅನ್ನಿಸುತ್ತೆ. ಅದಕ್ಕೆ ನಿಮ್ಮ್ಹತ್ರ ಹೇಳಿಕೊಳ್ಳೋಣ ಅನ್ನಿಸ್ತು. ನನಗೊತ್ತು ನೀವೆಲ್ಲಾ ನನಗೆ ಏನು ಪಾಠ ಹೇಳಿಕೊಡ್ತೀರಿ ಅಂತ! “Make the destiny your destination” ಅಂತ ತಾನೆ? Wonderful, ಹಾಗೇ ಆಗ್ಲಿ ಬಿಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X