Get Updates
Get notified of breaking news, exclusive insights, and must-see stories!

ಮಕ್ಕಳ ದಿನದಂದು ಮಗುವಿನ ಮನದಿಂದ...


ನನ್ನ ಮೋಸ್ಟ್‌ ಫ‚ೇವರಿಟ್‌ ಥಿಂಗ್‌ ಅಥವಾ ಮೋಸ್ಟ್‌ ಫ‚ೇವರಿಟ್‌ ಆಟದಸಾಮಾನು ಏನ್‌ ಗೊತ್ತಾ? ಏರೋಪ್ಲೇನು! ಎಲ್ಲ ಹುಡುಗರಂತೆ ಆಟಿಗೆ ಕಾರುಗಳ ಹುಚ್ಚು ಇದೆಯಾದ್ರೂ ವಿಮಾನ ಅಂದ್ರೆ ತುಂಬಾ ಇಷ್ಟ. ನನ್ನ ವಿಮಾನ ಕ್ರೇಜಿನ ಬಗ್ಗೆಯೇ ಒಂದು ದೊಡ್ಡ essay ಬರೆಯಬಹುದು. ವಿಮಾನ ಹಾರಾಟವನ್ನು ನಾನು ಎಷ್ಟು passionate ಆಗಿ ಗಮನಿಸುತ್ತೇನೆಂದರೆ 9/11 ದುರ್ಘಟನೆಯಾಗಿ (ಆವಾಗ ನಾವು ವಾಷಿಂಗ್ಟನ್‌ನಲ್ಲೇ ಇದ್ದೆವು, ನನಗೆ ಎರಡು ವರ್ಷ ವಯಸ್ಸೂ ಆಗಿರಲಿಲ್ಲ) ಕೆಲವು ದಿನಗಳವರೆಗೆ ಅಮೆರಿಕದ ವಿಮಾನನಿಲ್ದಾಣಗಳೆಲ್ಲ ಶಟ್‌ಡೌನ್‌ ಆಗಿ ವಿಮಾನ ಹಾರಾಟವೆಲ್ಲ ಸ್ಥಗಿತಗೊಂಡಿತ್ತಷ್ಟೆ? ಆಕಾಶದಲ್ಲಿ ಯಾಕೆ ವಿಮಾನಗಳೇ ಕಾಣಿಸ್ತಿಲ್ಲ? ಎಂದು ಆಗ ನಾನು ನನ್ನ ಮಮ್ಮಿಯತ್ರ ಕೇಳಿದ್ದೆ! ಈಗಂತೂ ನಮ್ಮ ಮನೆ ವಾಷಿಂಗ್ಟನ್‌ ಡಲಸ್‌ ಏರ್‌ಪೋರ್ಟ್‌ಗೆ ಹತ್ತಿರದಲ್ಲೇ ಇರುವುದರಿಂದ ವಿಮಾನಗಳು ನನಗೆ ಪಕ್ಕದ್ಮನೆ ಫ‚ೆ್ರಂಡ್ಸ್‌ ಇದ್ದಂತೆ.

ಯಾವ ವಿಮಾನ, ಯಾವ ಏರ್‌ಲೈನ್ಸ್‌ನದು, ಅದು ಏರ್‌ಬಸ್‌ ಎ320ಯೆುೕ ಅಥವಾ ಬೋಯಿಂಗ್‌ 747 ಮೊಡೆಲ್‌ನದಾ, ಯಾವ ಏರ್‌ಲೈನ್ಸ್‌ಗೆ ಯಾರು ಪಾರ್ಟ್‌ನರ್‌, STAR alliance, OneWorld, Skyteam ಮುಂತಾದ ಮಿತ್ರಕೂಟಗಳಲ್ಲಿ ಯಾವ್ಯಾವ ಏರ್‌ಲೈನ್ಸ್‌ ಇರೋದು ಎನ್ನೋದನ್ನೆಲ್ಲ ತಿಳಿದುಕೊಂಡಿದ್ದೇನೆ. ಒಂದು ಚಿತ್ರ ಬಿಡಿಸು ಅಂತ ಯಾರಾದ್ರೂ ಹೇಳಿದ್ರೆ ನಾನು ಬಿಡಿಸೋದು - ಯು ಗೆಸ್ಡ್‌ ಇಟ್‌ ರೈಟ್‌ - ಎರೋಪ್ಲೇನಿನ ಚಿತ್ರವನ್ನೇ! ಕಂಪ್ಯೂಟರನ್ನು ಗೇಮ್ಸ್‌ ಆಡೋದಕ್ಕಿಂತಲೂ ಹೆಚ್ಚಿಗೆ ನಾನು ಉಪಯೋಗಿಸೋದು ಗೂಗಲ್‌ ಇಮೇಜಸ್‌ನಲ್ಲಿ ವಿಮಾನಗಳ ಚಿತ್ರಗಳನ್ನು ಹುಡುಕಿ ಪ್ರಿಂಟ್‌ಔಟ್‌ ತೆಗೆಯೋದಕ್ಕೆ! ನನಗೆ ರಾತ್ರೆ ಮಲಗುವಾಗ ಬೆಡ್‌ಟೈಮ್‌ ಸ್ಟೋರಿ ಸಹ ಏರೊಪ್ಲೇನಿನದೇ ಆಗಬೇಕು! ಕಳೆದ ವರ್ಷ ಸ್ಕೂಲಿಂದ ನಮಗೆ ಫಿ‚ೕಲ್ಡ್‌ ಟ್ರಿಪ್‌ ಇದ್ದದ್ದೂ ವಾಷಿಂಗ್ಟನ್‌ ಡಿಸಿಯ ‘ಏರ್‌ ಏಂಡ್‌ ಸ್ಪೇಸ್‌ ಮ್ಯೂಸಿಯಂ’ ಎಂದರೆ ನನಗೆ ಎಷ್ಟು ಖುಶಿಯಾಗಿರಬೇಡ!

ಅತ್ಯಂತ ದೊಡ್ಡ ವಿಮಾನವಾದ ಇನ್ನೊಂದು ವಿಷಯ. ನಿಮಗೆ ನನ್ನ ‘ಹ್ಯಾಲೊವಿನ್‌ ಉದ್ದಿನವಡಾ’ ಮತ್ತು ಬೆಂಗಳೂರಿನ ನನ್ನ ಅಜ್ಜಂದಿರ ಸಮಾಚಾರ ಹೇಳಲೆಬೇಕು! ಮೊನ್ನೆ ಅಕ್ಟೋಬರ್‌ 31ಕ್ಕೆ ಹ್ಯಾಲೋವಿನ್‌ ಇತ್ತಲ್ಲ? ನಾನು ಈಸಲ ಸೂಪರ್‌ಮ್ಯಾನ್‌ ಕಾಸ್ಟ್ಯೂಮ್ಸ್‌ ಹಾಕಿದ್ದೆ. ನಮ್ಮನೆಗೆ ಹತ್ತಿರದಲ್ಲೇ ಇರುವ ಫ‚ಾ್ಯರ್‌ಒಕ್ಸ್‌ ಮಾಲ್‌ಗೆ ‘ಟ್ರಿಕ್‌ ಒರ್‌ ಟ್ರೀಟ್‌’ಗೆ ಹೋಗಿದ್ದೆ. ಅವತ್ತು ನನ್ನಂತೆಯೇ ವಿಧವಿಧದ ವೇಷಗಳಲ್ಲಿ ಅಲ್ಲಿ ತುಂಬಾ ಮಕ್ಕಳು ಬಂದಿದ್ದರು. ಮಾಲ್‌ನಲ್ಲಿ ಎಲ್ಲ ಅಂಗಡಿಗಳವರೂ ನಮಗೆ ಪ್ರೀತಿಯಿಂದ (ನಾವು ಹೆದರಿಸುವ ಮೊದಲೇ) ಕ್ಯಾಂಡಿ ಕೊಡುತ್ತಿದ್ದರು. ನಾನೂ ಕುಂಬಳಕಾಯಿಬಕೆಟ್‌ ತುಂಬ ಕ್ಯಾಂಡಿ ಸಂಗ್ರಹಿಸಿದೆ. ಅದಾದ ಮೇಲೆ ನಾವೆಲ್ಲ ಅಲ್ಲೇ ಪಕ್ಕದ ವುಡ್‌ಲ್ಯಾಂಡ್ಸ್‌ ಇಂಡಿಯನ್‌ ರೆಸ್ಟೊರೆಂಟ್‌ಗೆ ಹೋಗಿದ್ದೆವು. ಅಲ್ಲಿ ನನ್ನ ಮೋಸ್ಟ್‌ ಫ‚ೇವರಿಟ್‌ ವಡಾ ತಿಂದು ಖುಶಿಪಟ್ಟೆ. ಅಂತೂ ಸೂಪರ್‌ಮ್ಯಾನ್‌ನ ಶಕ್ತಿಯ ಗುಟ್ಟು ಈಗ ನಿಮಗೆ ಗೊತ್ತಾಯ್ತಲ್ಲ? ಡೊನಟ್‌, ಬೇಗಲ್‌, ಪಿಜ್ಜಾ, ಕ್ಯಾಂಡಿ ಯಾವುದೂ ಅಲ್ಲ. ಸೂಪರ್‌ಮ್ಯಾನ್‌ಗೆ ಸೂಪರ್‌ ಇಷ್ಟವಾಗೋದು ಉದ್ದಿನವಡಾ!

ನನಗೆ ವಡಾ ರುಚಿ ಹತ್ತಿಸಿದ್ದು ಬೆಂಗಳೂರಿನಲ್ಲಿ ನನ್ನಜ್ಜ. ನಾನು ಬೆಂಗಳೂರಿಗೆ ಹೋಗಿದ್ದಾಗ ಅಜ್ಜ ನನ್ನನ್ನು ಮನೆಹತ್ತಿರದ ದರ್ಶಿನಿಗೆ ಕರಕೊಂಡುಹೋಗಿ ವಡಾ ಕೊಡಿಸ್ತಿದ್ರು. ಅಜ್ಜನ ಇಷ್ಟದ ವಡಾ ನನಗೂ ಫ‚ೇವರಿಟ್‌ ಆಯ್ತು. ಬೆಂಗಳೂರಿನಲ್ಲಿ ನನಗೆ ಇನ್ನೊಬ್ಬ ಸ್ಪೆಷಲ್‌ ‘ಅಜ್ಜ’ ಇದ್ದಾರೆ ಅವರೇ ಪೆಜತ್ತಾಯಜ್ಜ. ನಾನು ಬೆಂಗಳೂರಿಗೆ ಹೋಗುವಾಗ ಅವರು ತಪ್ಪದೇ ನಮ್ಮನೆಗೆ ಬರುತ್ತಾರೆ, ನನಗೆ ಸಿಹಿತಿಂಡಿ ತಂದುಕೊಡುತ್ತಾರೆ. ಅವರ ಟೊಯಾಟಾ ವ್ಯಾನ್‌ನಲ್ಲಿ ಒಂದು ಸಣ್ಣ ರೌಂಡ್‌ ಹಾಕಿಸ್ತಾರೆ. ನನ್ನನ್ನು ತನ್ನ ‘ಗುರು’ ಎನ್ನುತ್ತಾರೆ. ನಾನು ಹ್ಯಾಲೊವಿನ್‌ ಕಾಸ್ಟ್ಯೂಮ್ಸ್‌ ಹಾಕಿದ ಫೊಟೊ ಕಳಿಸಬೇಕೆಂದು ಪೆಜತ್ತಾಯಜ್ಜ ಈಮೈಲ್‌ ಬರೆದಿದ್ದಾರೆ. ‘ಹ್ಯಾಲೊವಿನ್‌ ಕಾಸ್ಟ್ಯೂಮ್‌ನ ಸೂಪರ್‌ಮ್ಯಾನ್‌ ವಡಾ ತಿನ್ನುತ್ತಿರುವಾಗಿನ’ ಈ ಫೊಟೊ ಅವರಿಗೆ ಕಳಿಸಿದ್ದೇನೆ. ಅದನ್ನೇ ಇಲ್ಲಿ ನಿಮ್ಮೆಲ್ಲರಿಗೂ ತೋರಿಸುತ್ತಿದ್ದೇನೆ.

ಇಷ್ಟು ಹೇಳಿ ನನ್ನ ಈ ಚಿಕ್ಕ ಹರಟೆಯನ್ನು ಮುಗಿಸುತ್ತೇನೆ. ಕೇಳಿ ನಿಮಗೆ ಖುಶಿಯಾಗಿದ್ದರೆ ನನಗೂ ದುಪ್ಪಟ್ಟು ಖುಶಿ. ಹರಟೆಗೆ ನನ್ನತ್ರಸರಕು ಇನ್ನೂ ಬೇಕಷ್ಟು ಇದೆ, ಮುಂದೆ ಯಾವಾಗಾದ್ರೂ ಸಿಗೋಣ. ಅಲ್ಲಿವರೆಗೆ ಟಾಟಾ ಬೈಬೈ!’’

*

ನಿಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಆಶಯಗಳನ್ನು ಬರೆದು ತಿಳಿಸಲು ವಿಳಾಸ - ಠ್ಟಜಿಡಚಠಿಜಠಚ್ಜಟಠಜಜಿಃಢಚಜಟಟ.್ಚಟಞ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+