ಟೈಗರ್ ನಾಮಾಂಕಿತ ಐದು ಹುಲಿಯ ಹೆಜ್ಜೆ ಗುರುತುಗಳು

Posted By: ಶಾಮಿ
Subscribe to Oneindia Kannada

ಇವತ್ತು, 29 ಜುಲೈ. ಅಂತಾರಾಷ್ಟ್ರೀಯ ಹುಲಿ ದಿನಾಚರಣೆ. ಚಂಡವ್ಯಾಘ್ರನ ಸಂತತಿ ಉಳಿಯಲಿ, ಬೆಳೆಯಲಿ ಎಂಬುದು ದಿನಾಚರಣೆಯ ಆಶಯ. ಇದು ಕೇವಲ ಹುಲಿಗಳ ಅಳಿವು ಉಳಿವಿನ ಪ್ರಶ್ನೆಯಲ್ಲ. ಇಂಗ್ಲಿಷಿನಲ್ಲಿ ಒಂದು ಗಾದೆ ಇದೆ. The tiger depends on the forest; the forest depends on the tiger.


ಹುಲಿಗಳಲ್ಲಿ ಅನೇಕ ಪ್ರಭೇದಗಳಿವೆ. ಕೆಲವು ನಿಸ್ಸಂತತಿ ಆಗಿದೆ ಎಂದೂ, ಕೆಲವು ಅಳಿವಿನ ಅಂಚಿನಲ್ಲಿವೆಯೆಂದೂ ವರದಿಗಳು ಹೇಳುತ್ತವೆ. ಅಂತರ್ ಜಾಲದ ಮೂಲಕ ದಕ್ಕುವ ಅಂಕಿ-ಅಂಶಗಳ ವಿನಾ ಹುಲಿ ಬಗ್ಗೆ ನನಗೇನೂ ತಿಳಿಯದು. ನಾನಂತೂ ಹುಲಿಯನ್ನು ಅದರ ಸಹಜ ಪರಿಸರದಲ್ಲಿ ಕಂಡವನೇ ಅಲ್ಲ.

ಬಾಲ್ಯದಲ್ಲಿರುವಾಗ ನಮ್ಮೂರ ಒಂದು ಬಟ್ಟೆ ಅಂಗಡಿಯ ಮಾಲೀಕರು ಕ್ಯಾಲೆಂಡರ್ ಮಾಡಿಸುತ್ತಿದ್ದರು. ಒಂದು ಹಾಳೆಯಲ್ಲಿ ಚಾಮುಂಡೇಶ್ವರಿ ದೇವಿ, ಹುಲಿಯ ಮೇಲೆ ಕುಳಿತ ಚಿತ್ರ ಇರುತ್ತಿತ್ತು. ನಾನು ಕಂಡ ಮೊದಲ ಹುಲಿ ಅಲ್ಲಿತ್ತು.

The Other Tigers. Pug Marks of 5 best Tiger Nicknames

ಆಗಾಗ ಊರಾಚೆಯ ಆಟದ ಮೈದಾನದಲ್ಲಿ ಸರ್ಕಸ್ ಕಂಪನಿ ಬೀಡುಬಿಡುತ್ತಿತ್ತು. ಬೋನಿನೊಳಗೆ ಬಂದಿಯಾಗಿರುತ್ತಿದ್ದ ಸಸ್ಯಾಹಾರಿ, ನಿರಾಹಾರಿ ಹುಲಿಗಳನ್ನು ಬೆಕ್ಕಸಬೆರಗಾಗಿ ನೋಡುತ್ತಿದ್ದೆ.

ಮನೆಗೆ ಬಂದು ನಿದ್ದೆ ಮಾಡುವಾಗಲೂ ಆ ಹುಲಿಯ ಚಿತ್ರವೇ ಕಣ್ಣುಂದೆ ಬರುತ್ತಿತ್ತು. ಟಿವಿ ಬಂದ ಮೇಲೆ ಹುಲಿ ದರ್ಶನ ಆಗಾಗ ಆಗುತ್ತಿರುತ್ತದೆ. ಯೂ ಟ್ಯೂಬ್ ಆವಿಷ್ಕಾರವಾದ ನಂತರವಂತೂ ಬೇಟೆಯಾಡುತ್ತಿರುವ, ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಕಾಡಿನಲ್ಲಿ ಅಲೆಯುತ್ತಿರುವ ಹುಲಿಗಳನ್ನು ಸಾಕಷ್ಟು ಕಾಣುತ್ತಿದ್ದೇನೆ.

Tiger Varadachar

ನಾಲಕ್ಕು ಕಾಲಿನ ಹುಲಿಗಳ ಮಹತ್ವವನ್ನು ಸಾರುವ International Tigers Day ಹುರುಪಿನಲ್ಲಿ ನಮ್ಮ ಜತೆ ಇದ್ದ, ಇರುವ ಟೈಗರುಗಳನ್ನು ಮರೆಯಬಾರದು. ಟೈಗರ್ ಅಂತ ಅಡ್ಡಹೆಸರು ಇರುವ ಕೆಲವು ಹುಲಿಗಳ ನೆನಪಾಗುತ್ತದೆ. ಅದರಲ್ಲಿ ಮೊದಲಿಗರು - ಟೈಗರ್ ವರದಾಚಾರಿಯರ್. ( 1876-1950) ಕರ್ನಾಟಕ ಸಂಗೀತದ ಪ್ರತಿಭಾವಂತ ಹಾಡುಗಾರರು. ಸೆಮ್ಮನ್ ಗುಡಿ ಶ್ರೀನಿವಾಸ ಅಯ್ಯರ್ ಅವರಿಗೆ ಗುರುಗಳಾಗಿದ್ದವರು. ವರದಾಚಾರಿ ಅವರಿಗೆ ಗುರುವಂದನೆಗಳು.
Tiger Pataudi

ಟೈಗರ್ ನಿಕ್ ನೇಮಿನಿಂದ ಹೆಸರುವಾಸಿಯಾದ ಪದ್ಮಶ್ರೀ ಮನ್ಸೂರ್ ಆಲಿ ಖಾನ್ ಪಟೌಡಿ ( 1941-2011) ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. Right-handed batsman and a right-arm medium pace bowler. ಆರು ಶತಕಗಳ ಸಮೇತ, ಸರಾಸರಿ 34.91 ರನ್ನು ಗಳಿಸಿದ್ದ ಪಟೌಡಿ 46 ಟೆಸ್ಟ್ ಆಡಿದ್ದರು. ಪಟೌಡಿ ತೀರಿಕೊಂಡಾಗ ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಶೀರ್ಷಿಕೆ India loses its favorite Tiger ಎಂದಿತ್ತು
Tiger Prabhakar

ಇನ್ನು ನಮ್ಮ ಚಲನಚಿತ್ರ ಮನೆಯಂಗಳದ ಹುಲಿ ಟೈಗರ್ ಪ್ರಭಾಕರ್. ( 1950 - 2001) 400 ಕ್ಕೂ ಮೀರಿ ಹಲವು ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಪ್ರಭಾಕರ್ ಹೆಬ್ಬುಲಿಯಂತೆ ಬಿಂಬಿತರಾಗಿದ್ದರು. "ಹುಲಿ ಹೆಜ್ಜೆ" ಸಿನಿಮಾದಲ್ಲಿ ( 1984) ಅವರು ರಿಯಲ್ ಹುಲಿ ಜತೆ ಕಾಳಗ ಮಾಡಿದರು. ಆವತ್ತಿನಿಂದ ಅವರು ಟೈಗರ್ ಪ್ರಭಾಕರ್ ಬಿರುದಾಂಕಿತರಾದರು. ಕನ್ನಡ ಚಿತ್ರರಂಗದಲ್ಲಿ ಹುಲಿಗಳು ಅಪರೂಪವೇ. ಒಂದು ಹುಲಿ ಕಾಲಗರ್ಭದಲ್ಲಿ ಕಣ್ಮರೆಯಾಯಿತು.
Tipu Sultan

ಕರ್ನಾಟಕ ಇತಿಹಾಸ ಪುಟಗಳ ಮೂಲಕ ನಮಗೆ ಕಂಡುಬರುವ ಇನ್ನೊಂದು ಹುಲಿ ಟಿಪ್ಪೂ ಸುಲ್ತಾನ್ ( 1782 - 1799) Also Known as Tiger of Mysore. ಮುಖ್ಯವಾಗಿ ಟಿಪ್ಪೂ ಒಬ್ಬ ಯುದ್ಧ ವೀರ ಎಂಬುದು ಇತಿಹಾಸಕಾರರು ಹೇಳುವ ಮಾತು. ಟಿಪ್ಪೂ ಹೆಸರು ಎತ್ತಿದರೆ ಸಾಕು, ಕರ್ನಾಟಕ ಚರಿತ್ರಕಾರರಲ್ಲಿ ಎರಡು ಬಣಗಳು ದಿಗ್ಗನೆ ಎಂದು ಮುನ್ನುಗ್ಗಿ ಯುದ್ಧಕ್ಕೆ ನಿಲ್ಲುತ್ತವೆ. ಯುದ್ಧಂ ವದ್ಯಂ !
Tiger police vehicle

ಪೇಟೆಯಲ್ಲಿ ಕುಳಿತುಕೊಂಡು ನಾನು ಹುಲಿಗೆ ಹೆದರುವುದಿಲ್ಲ ಎಂದು ಹೇಳಿಕೊಳ್ಳುವುದು ಸುಲಭ. ಆದರೆ, ನಾನು, ನೀವು, ಎಲ್ಲರೂ ಹೆದರಲೇಬೇಕಾದ ಹುಲಿಗಳು ಬೆಂಗಳೂರು ನಗರದಲ್ಲಿ ಸುತ್ತು ಹಾಕುತ್ತಿರುತ್ತವೆ. ಎಚ್ಚರಿಕೆ! Spot Fine ಖಂಡಿತ
Tiger woods

ಹುಡುಕಿಕೊಂಡು ಹೊರಟರೆ ಬೇಕಾದಷ್ಟು ಹುಲಿಗಳು ಸಿಕ್ಕಾವು. ವುಡ್ಡಿನಲ್ಲೇ ಇದ್ದುಬಿಡುವ ಹುಲಿಗಳಿಗೆ, ಟೈಗರ್ ವುಡ್ಡಿಗಳಿಗೆ, ಹುಲಿಯಂತೆ ಬದುಕಿ ಬಾಳಿದವರಿಗೆ ವಿಶ್ವ ಹುಲಿ ದಿನಾಚರಣೆಯ ವಿಶೇಷ ಶುಭಾಶಯಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The other Tigers ! - A Carnatic Music Singer, A Indian Cricket Captain, A Mysore Warrior during India Independence Struggle, A Powerful Kannada movie Villian and Most dreaded, law Enforcing Tiger on Bengaluru Roads, Fondly remembered on 29th July, International Tiger Day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ