ಮಾನಭಂಗ ಸುದ್ದಿಗೆ ಧೀಮಂತರ ಪ್ರತಿಕ್ರಿಯೆಗಳು

ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕಿನಿಂದ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಈಡಿಗ ಜನಾಂಗದ ಹರತಾಳು ಹಾಲಪ್ಪ ಅವರ ಮೇಲೆ ಸೋಮವಾರ ಅತ್ಯಾಚಾರದ ಕೇಸು ದಾಖಲಾಗಿರುವುದು ಮಹಾಜನತೆಗೆ ತಿಳಿದಿದೆ. ಓರ್ವ ಗೃಹಿಣಿಯ ಮಾನಭಂಗ ಮಾಡಲು ಅವರು ಯತ್ನಿಸಿದರು ಎನ್ನುವುದು ಆರೋಪ. ಅದೇನೇ ಇರಲಿ. ಇಂಥ ಸಂದರ್ಭದಲ್ಲಿ ಪತ್ರಕರ್ತರು ಮುಖ್ಯಮಂತ್ರಿಗಳ ಹೇಳಿಕೆಗಾಗಿ ದುಂಬಾಲು ಬಿದ್ದರೆ ಅವರ ಮಾರುತ್ತರ ಹೇಗಿರುತ್ತದೆ ಎನ್ನುವುದನ್ನು ಚರಿತ್ರೆಯ ಪುಟಗಳನ್ನು ತಿರುವು ಹಾಕುತ್ತಾ ಮೆಲಕುಹಾಕೋಣ.
ಡಿ ದೇವರಾಜ್ ಅರಸ್ : I cant afford to have such idiot ministers in my cabinet. Halappa is dismissed from the post immediately. Simultaneously I have inducted Beluru Gopalakrishna as minister with a cabinet rank in-charge of food and civil supplies. ಕಿಕ್ಕಿರಿದು ನೆರೆದ ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಒಂದು ವಾಕ್ಯದ ಹೇಳಿಕೆ ಕೊಟ್ಟು ಬಾಲಬ್ರೂಯಿಗೆ ತೆರಳಿ ಪೈಪ್ ಸೇದುತ್ತಾ ಆಲೋಚನಾ ಮಗ್ನರಾಗುವರು.
ರಾಮಕೃಷ್ಣ ಹೆಗಡೆ : An administrator need to verify all the facts before making any public statement. I neither say that Hallapa is wrong or for that matter right. I will look in to the allegations and get back you. I am not a person who will offer statements on the counter ಎಂದು ಹೇಳಿ ಬಾಯಿ ಮುಚ್ಚಿಸುವರು. ಪತ್ರಿಕಾಗೋಷ್ಠಿ ಮುಗಿದ ನಂತರ ಪಡಸಾಲೆಯಲ್ಲಿ ಅನೌಪಚಾರಿಕವಾಗಿ ಹರಟೆ ಹೊಡೆಯುತ್ತಾ This is the story of civilization Mr Subba Rao ಎಂದು ಗಡ್ಡ ನೀವಿಕೊಳ್ಳುತ್ತಾ ಅರ್ಧ ನಗೆ ಬೀರುವರು. ಅವರ ಜತೆಗೆ ಪತ್ರಿಕಾ ಕಾರ್ಯದರ್ಶಿ ಹರಿಶ್ಚಂದ್ರ ಭಟ್ ಕೂಡ ನಕ್ಕಂತೆ ನಟಿಸುವರು.
ಜೆಎಚ್ ಪಟೇಲ್ : ಯಾವ ಮಹಾದೊಡ್ಡ ವಿಷ್ಯ ಅಂತ ಪ್ರೆಸ್ಸಿಗೆ ಹೇಳಿಕೆ ಕೊಡಬೇಕ್ರಪ್ಪಾ. ಪ್ರತಿಯೊಬ್ಬ ಮನುಷ್ಯನನ್ನೂ ಲೈಂಗಿಕತೆ ಕಾಡೇಕಾಡುತ್ತದೆ. ಇದರಲ್ಲಿ ನನಗೇನೂ ತಪ್ಪು ಕಾಣಿಸುವುದಿಲ್ಲ ಎಂದು ಮನುಸ್ಮೃತಿ, ಸಿಗ್ಮಂಡ್ ಪ್ರಾಯ್ಡ್, ಹೆವಲಾಕ್ ಎಲಿಸ್ ಮುಂತಾದವರ ಕೊಟೇಶನ್ನುಗಳನ್ನು ಉದ್ಧರಿಸಿ ಮಾಧ್ಯಮ ಮಿತ್ರರಿಗೆ ಮನೋವೈಜ್ಞಾನಿಕ ದಬಾವ್ ಮಾಡುವರು. ಹಾಲಪ್ಪನ ಹಣೆಬರಹ ಏನು ಎಂದು ಪಟ್ಟು ಹಿಡಿದ ಪತ್ರಕರ್ತರಿಗೆ ಉಮರ್ ಖಯಾಮ್ ನ ಎರಡು ಪದ್ಯಹೇಳಿ ಸುಮ್ಮನಾಗಿಸಲೆತ್ನಿಸುವರು. ಸುಮ್ಮನಾಗಲೊಲ್ಲದ ಸಭೆಯಲ್ಲಿ ನಗೆಯ ತರಂಗಗಳು ಏಳುವವು. ಅಷ್ಟರಲ್ಲಿ ಮಾಧ್ಯಮ ಕಾರ್ಯದರ್ಶಿ ಶಂಕರಲಿಂಗಪ್ಪ ಬಂದು ಲೋಹಿಯಾರವರ ಜನ್ಮಶತಾಬ್ಧಿ ಸಮಾರಂಭದಲ್ಲಿ ಅಧ್ಯಕ್ಷ ಭಾಷಣ ಮಾಡುವ ಕಾರ್ಯಕ್ರಮವನ್ನು ಇರುವುದನ್ನು ಕಿವಿಯಲ್ಲಿ ಉಸುರಿ ನೆನಪಿಸುವರು. ಸಭೆ ಚದುರುವುದು. ಪತ್ರಕರ್ತರು ಆಕಡೆ ಈ ಕಡೆ ಹೋಗುವರು. ಪಟೇಲರ ಕಾರು ಟೌನ್ ಹಾಲ್ ದಿಕ್ಕಿನಲ್ಲಿ ಮಾಯವಾಗುವುದು.
ಎಚ್ ಡಿ ದೇವೇಗೌಡ : ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ನೈಸ್ ಹಗರಣದ ಫೈಲುಗಳನ್ನು ಮತ್ತು ನ್ಯಾಯಾಲಯದ ತೀರ್ಪುಗಳನ್ನು ಹರಡಿಕೊಂಡು ಅವರು ಅಧ್ಯಯನ ಮಾಡುತ್ತಿರುವುದರಿಂದ ಪತ್ರಕರ್ತರಿಗೆ ಅಪಾಯಿಂಟ್ಮೆಂಟು ಸಿಗದು. ವರದಿಗಾರರು ಕಾದುಕಾದು ಸುಸ್ತಾಗಿ ಕೊನೆಗೆ ಖಾಲಿಹಾಳೆಯಲ್ಲೇ ತಮ್ಮ ತಮ್ಮ ಕಚೇರಿಗೆ ತೆರಳುವರು. ಐಟಂ ಹಿಡಿದುಕೊಂಡೇ ಸಂಜೆವಾಣಿಗೆ ಹೋಗಬೇಕೆಂದು ಹಠಹಿಡಿದ ಮುಖ್ಯ ವರದಿಗಾರ ಶಿವಣ್ಣ ಅವರಿಗೆ ವೈ ಎಸ್ ವಿ ದತ್ತ ಅವರೇ ಗೌಡರ ಪರವಾಗಿ ಒಂದು ಹೇಳಿಕೆ ಕೊಡುವರು. ಅಂದು ಸಂಜೆಯೇ ಸಂಜೆವಾಣಿಯಲ್ಲಿ 'ಮಾನಭಂಗ ಪ್ರಕರಣ, ತುಟಿ ಬಿಚ್ಚದ ಗೌಡ' ಎಂದು ಬ್ಯಾನರ್ ಸುದ್ದಿ ಅಚ್ಚಾಗುವುದು.
ಬಿಎಸ್ ಯಡಿಯೂರಪ್ಪ : ಸಚಿವ ಹರತಾಳು ಹಾಲಪ್ಪ ಅವರು ಅತ್ಯಂತ ಸಾತ್ವಿಕ ವ್ಯಕ್ತಿ. ಪ್ರಾಮಾಣಿಕ ಕಾರ್ಯಕರ್ತ. ಉತ್ತಮ ಕೆಲಸ ಮಾಡಿದ್ದಾರೆ. ಇದೀಗ ಅವರ ಮೇಲೆ ಬಂದಿರುವ ಆರೋಪದಿಂದ ಹೊರಬರುವ ಎಲ್ಲ ನಂಬಿಕೆ ನಮಗಿದೆ. ಅಲ್ಲದೇ ಹಾಲಪ್ಪ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಬಿಡುವಿಲ್ಲದ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಹೋಗುವತನಕ ಕಾಯದೆ ಬೆಳಗಾವಿಯಿಂದಲೇ ತಮ್ಮ ಅಭಿಪ್ರಾಯವನ್ನು ನಾಡಿನ ಜನತೆಯೊಂದಿಗೆ ಹಂಚಿಕೊಳ್ಳುವರು. ಮಾಧ್ಯಮ ಸಲಹೆಗಾರ ಆರ್ ಪಿ ಜಗದೀಶ್ ಅವರ ಬಳಿ ಒಂದು ಮಾತನ್ನೂ ಹೇಳದೆ ಕೇಳದೆ ದಿಢೀರ್ ಹೇಳಿಕೆ ಕೊಟ್ಟು ಪಾದರಸ ವ್ಯಕ್ತಿತ್ವವನ್ನು ಮೆರೆಯುವರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications