ಹಾಲಪ್ಪ ತಪ್ಪು ಮಾಡಿಲ್ಲ : ಯಡಿಯೂರಪ್ಪ
ಬೆಳಗಾವಿ,
ಮೇ. 2 : ಸಚಿವ ಹರತಾಳ್ ಹಾಲಪ್ಪ ಅವರು ಅತ್ಯಂತ ಸಾತ್ವಿಕ ವ್ಯಕ್ತಿ. ಪ್ರಾಮಾಣಿಕ ಕಾರ್ಯಕರ್ತ. ಉತ್ತಮ ಕೆಲಸ ಮಾಡಿದ್ದಾರೆ. ಇದೀಗ ಅವರ ಮೇಲೆ ಬಂದಿರುವ ಆರೋಪದಿಂದ ಹೊರಬರುವ ಎಲ್ಲ ನಂಬಿಕೆ ನಮಗಿದೆ. ಅಲ್ಲದೇ ಹಾಲಪ್ಪ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. id="toptextpromo">ಹಾಲಪ್ಪ
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ಮಾತಿನಲ್ಲೂ ಸಚಿವ ಹಾಲಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಮಾತನ್ನು ಯಡಿಯೂರಪ್ಪ ಅವರು ಆಡಿದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಹಾಲಪ್ಪ ಅವರು ನನಗೆ ಫೋನ್ ಮಾಡಿ ರಾಜೀನಾಮೆ ನೀಡುವುದಾಗಿ ಹೇಳಿದರು. ಆದರೆ, ನಾನು ದುಡುಕಬೇಡಿ. ತನಿಖೆ ನಡೆಯಲಿ, ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸೋಣ ಎಂದು ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಅವರು 8.30 ಸುಮಾರಿಗೆ ಅವರು ರಾಜೀನಾಮೆ ಘೋಷಿಸುವುದಾಗಿ ಮಾಧ್ಯಮ ಮುಖಾಂತರ ತಿಳಿದು ಬಂದಿತು. ಹಾಲಪ್ಪ ಅವರು ನಿಷ್ಠಾವಂತ ವ್ಯಕ್ತಿ. ಆತನ ಬಗ್ಗೆ ಸಂಪೂರ್ಣ ನಂಬಿಕೆ ನನಗಿದೆ. ಆರೋಪದಿಂದ ಹೊರಬರಲಿದ್ದಾರೆ. ಅದನ್ನು ನಾವು ನೀವು ಕಾದು ನೋಡೋಣ ಎಂದು ಯಡಿಯೂರಪ್ಪ ವಿವರಿಸಿದರು. ಹಾಲಪ್ಪ ಅವರ ಖಾತೆಯನ್ನು ಹೆಚ್ಚುವರಿಯಾಗಿ ಆರ್ ಅಶೋಕ್ ಅವರಿಗೆ ವಹಿಸಲಾಗಿದೆ ಎಂದು ಸಿಎಂ ಹೇಳಿದರು.











Click it and Unblock the Notifications