• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಿಪ್ ಕಾರ್ಟ್ 'ಬಿಗ್ ಡೇ' ಆವತ್ತು ಆಗಿದ್ದೇನು?

By ರವಿ ಬೆಳಗೆರೆ
|

ಅಷ್ಟಕ್ಕೂ ಆವತ್ತು ಆಗಿದ್ದೇನು? ಫ್ಲಿಪ್ ಕಾರ್ಟ್ ಎಂಬ ಬೆಂಗಳೂರು ಮೂಲದ ಆನ್ ಲೈನ್ ಶಾಪಿಂಗ್ ಕಂಪನಿ 'ಬಿಲಿಯನ್ ಡೇ' ಎಂಬ ಹೆಸರಲ್ಲಿ ನೂರಾರು ವಸ್ತುಗಳನ್ನು ಡಿಸ್ಕೌಂಟ್ ಸೇಲ್ ಗೆ ಇಟ್ಟಿತ್ತು. ಇಪ್ಪತ್ತು ವರ್ಸೆಂಟಿನಿಂದ ಎಪ್ಪತ್ತು ವರ್ಸೆಂಟು ತನಕ ರಿಯಾಯಿತಿ. ಯಾರಿಗುಂಟು ಯಾರಿಗಿಲ್ಲ, ಎಲ್ಲರೂ ಮುಗಿಬಿದ್ದರು. ಈ ಬೇಡಿಕೆಯನ್ನು ತಡೆದುಕೊಳ್ಳುವುದಕ್ಕಾಗದೇ ಆನ್ ಲೈನ್ ನಲ್ಲಿ ಟ್ರಾಫಿಕ್ ಜಾಮ್ ಆಯಿತು, ನೋ ಸ್ಟಾಕ್ ಬೋರ್ಡ್ ಬಿತ್ತು, ಕೆಲವರಿಗೆ ಅವರು ಬುಕ್ ಮಾಡಿದ ಸರಕುಗಳು ಸರಬರಾಜಾಗಲೇ ಇಲ್ಲ.

ಅದೂ ಸಾಲದು ಎಂಬಂತೆ ಡಿಸ್ಕೌಂಟ್ ಹೆಸರಲ್ಲಿ ಮೋಸ ಮಾಡಲಾಗಿದೆ ಎಂದು ಸಾವಿರಾರು ಮಂದಿ ದೂರಿದರು. ಉದಾಹರಣೆಗೆ ಹೆಸರಾಂತ ಕಂಪನಿಯೊಂದರ ಲ್ಯಾಪ್ ಟಾಪನ್ನು ಹದಿನಾಲ್ಕು ಸಾವಿರದ ಎಂಟುನೂರು ರುಪಾಯಿಗೆ ನೀಡುತ್ತೇವೆ ಎಂದು ಫ್ಲಿಪ್ ಕಾರ್ಟ್ ಹೇಳಿತ್ತು. ಆದರೆ ಅದೇ ಲ್ಯಾಪ್ ಟಾಪ್ ಬೆಲೆ ಅಮೆಜಾನ್ ಡಾಟ್ ಕಾಂ ಎಂಬ ಇನ್ನೊಂದು ಆನ್ ಲೈನ್ ಕಂಪನಿಯಲ್ಲಿ ಐವತ್ತು ರುಪಾಯಿ ಕಡಿಮೆ ಇತ್ತು. [ಆನ್ ಲೈನ್ ಶಾಪಿಂಗ್ ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ಡೀಲ್]

ಮೂಲಕಂಪನಿಯಿಂದಲೇ ಖರೀದಿ ಮಾಡಿದರೆ ಇನ್ನೂ ಐವತ್ತು ರುಪಾಯಿ ಉಳಿತಾಯ ಮಾಡಬಹುದಾಗಿತ್ತು. ಹಾಗಾಗಿ ಈ 'ಬಿಲಿಯನ್ ಡೇ' ಅನ್ನುವುದೇ ಬೋಗಸ್ ಎಂದು ಜನರು ಬೊಬ್ಬೆ ಹಾಕಿದರು. ಆದರೆ ಇಷ್ಟೆಲ್ಲಾ ಗಲಾಟೆಗಳ ಮಧ್ಯೆ ಫ್ಲಿಪ್ ಕಾರ್ಟ್ ಕಂಪನಿಯ ಆವತ್ತಿನ ವಹಿವಾಟು ಆರುನೂರು ಕೋಟಿ ರುಪಾಯಿ ದಾಟಿತ್ತು. ಆದರೆ ಅದನ್ನು ಆನಂದಿಸುವ ಸ್ಥಿತಿಯಲ್ಲಿ ಕಂಪನಿ ಇರಲಿಲ್ಲ. ಲಾಭ ಬಂತು, ಮರ್ಯಾದೆ ಹೋಯಿತು ಅನ್ನುವಂತಾಯಿತು.

ಮಾರನೇ ದಿನವೇ ಫ್ಲಿಪ್ ಕಾರ್ಟ್ ತನ್ನೆಲ್ಲಾ ಗ್ರಾಹಕರ ಕ್ಷಮೆ ಕೇಳಿ ಪತ್ರಿಕಾ ಪ್ರಕಟಣೆಯನ್ನು ನೀಡಿತು. ಇಂಥ ಅಭೂತಪೂರ್ವ ಪ್ರತಿಕ್ರಿಯೆಯನ್ನು ತಾನು ನಿರೀಕ್ಷಿಸದೇ ಇದ್ದಿದ್ದುದರಿಂದ ಎಡವಟ್ಟಾಯಿತು ಹಾಗೂ ಇನ್ನು ಮುಂದೆ ಹೀಗಾಗುವುದಿಲ್ಲ ಎಂಬ ಭರವಸೆ ನೀಡಿ ಕೈತೊಳೆದುಕೊಂಡಿತು. ಫ್ಲಿಪ್ ಕಾರ್ಟ್ ಜೊತೆ ಕಳೆದ ಕೆಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಗ್ರಾಹಕರಿಗೆ ಇದು ಸುಳ್ಳು ಅನ್ನುವುದು ಗೊತ್ತಿತ್ತು. [ಗ್ರಾಹಕ ಸೇವೆ ಹಿಂದಿಯಲ್ಲೇ ಏಕೆ? ಕನ್ನಡದಲ್ಲೇ ಇರ್ಲಿ]

ಯಾಕೆಂದರೆ ಈ ಹಿಂದೆಯೂ ಇಂಥಾದ್ದೇ ಡಿಸ್ಕೌಂಟ್ ಸೇಲುಗಳನ್ನು ಫ್ಲಿಪ್ ಕಾರ್ಟ್ ನಡೆಸಿದೆ, ಬಿಲಿಯನ್ ಡೇ ಆಚರಣೆಗೆ ಮುನ್ನ ಪ್ರಾಯೋಗಿಕವಾಗಿ ನಾಲ್ಕೈದು ಡಿಸ್ಕೌಂಟ್ ಮಾರಾಟಗಳೂ ನಡೆದಿವೆ. ಅರುವತ್ತು ಸಾವಿರ ಬೆಲೆಬಾಳುವ ಟೀವಿಯನ್ನು ಮೂವತ್ತು ಸಾವಿರಕ್ಕೆ ನೀಡುತ್ತೇವೆ ಎಂದಾಗ ಎಂಥವರಾದರೂ ಮರುಳಾಗಿಯೇ ಆಗುತ್ತಾರೆ ಅನ್ನುವುದು ಕಾಮನ್ ಸೆನ್ಸ್.

ಇದೆಲ್ಲಾ ಗೊತ್ತಿದ್ದೇ ಈ ರಿಸ್ಕಿಗೆ ಫ್ಲಿಪ್ ಕಾರ್ಟ್ ಕೈಹಾಕಿತ್ತು, ಯಾಕೆಂದರೆ ತನ್ನ ಪಕ್ಕದಲ್ಲೇ ನಿಂತು ಸೆಡ್ಡುಹೊಡೆಯುತ್ತಿದ್ದ ಅಮೆಜಾನ್ ಕಂಪನಿಯನ್ನು ಅಲ್ಲಾಡಿಸುವುದಕ್ಕೆ ಇದಕ್ಕಿಂತ ಒಳ್ಳೆಯ ಗಿಮಿಕ್ ಬೇರೆ ಇರಲಿಲ್ಲ. Snap deal ಎಂಬ ಇನ್ನೊಂದು ಆನ್ ಲೈನ್ ಶಾಪಿಂಗ್ ಕಂಪನಿಯೂ ಇತ್ತೀಚೆಗೆ ಫ್ಲಿಪ್ ಕಾರ್ಟಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿತ್ತು. ಅದನ್ನೂ ಮೂಲೆಗುಂಪು ಮಾಡಬೇಕಾಗಿತ್ತು.

ಆದರೆ ಈ ಗಿಮಿಕ್ಕಿಗೆ ಬಲಿಯಾಗಿದ್ದು ಲಕ್ಷಾಂತರ ಗ್ರಾಹಕರು. ಅವರಲ್ಲಿ ಕೆಲವರು ಈಗಾಗಲೇ ಪಕ್ಷಾಂತರ ಮಾಡಿರುವ ಸಾಧ್ಯತೆಯೂ ಇದೆ. ಆನ್ ಲೈನ್ ವ್ಯಾಪಾರ ಅನ್ನುವುದು ಕತ್ತಿ ಮೇಲಿನ ನಡಿಗೆಯಂತೆ. ಒಂದು ಸಣ್ಣ ತಪ್ಪಾದರೂ ಕಂಪನಿ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಒಂದು ಗಾಳಿಸುದ್ದಿಯೂ ಕಂಪನಿಯ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಬಹುದು. [ಊರು ಕೆಡವಿ ಊರು ಕಟ್ಟಲು ಇಲ್ಲಿ ಯಾವನಿಗೂ ನಾಯಿ ಕಚ್ಚಿಲ್ಲ!]

ಫ್ಲಿಪ್ ಕಾರ್ಟ್ ಕತೆ ಹಾಗಿರಲಿ, ಮೋಸ ಹೋದ ಸೋ ಕಾಲ್ಡ್ ಜಾಣರು ತಮ್ಮ ಬುದ್ದಿಯನ್ನು ಎಲ್ಲಿ ಅಡವಿಟ್ಟಿದ್ದರು? ಎಲ್ಲವನ್ನೂ, ಎಲ್ಲರನ್ನೂ ಅನುಮಾನಿಸುವ ಈ ಜನ ಒಂದು ಆನ್ ಲೈನ್ ಕಂಪನಿಯ ಮಾತಿಗೆ ಮರುಳಾಗಿದ್ದಾದರೂ ಹೇಗೆ? ಎಪ್ಪತ್ತು ಪರ್ಸೆಂಟು ರಿಯಾಯಿತಿ ನೀಡಿ ಒಂದು ಕಂಪನಿ ಬಚಾವಾಗುವುದಕ್ಕೆ ಸಾಧ್ಯವೇ ಎಂಬ ಸರಳ ಪ್ರಶ್ನೆಯೂ ಯಾಕೆ ಅವರಿಗೆ ಹೊಳೆಯಲಿಲ್ಲ? ರಸ್ತೆ ಬದಿಯಲ್ಲಿ ಟೆಂಟು ಹಾಕಿ ಡಿಸ್ಕೌಂಟ್ ಸೇಲ್ ಮಾಡುವ ಹೆಸರೇ ಕೇಳದ ಕಂಪನಿಯನ್ನು ನಂಬುವ ಅನಕ್ಷರಸ್ಥ ಪ್ರಜೆಗೂ, ಆನ್ ಲೈನ್ ನಲ್ಲೇ ನನ್ನ ಶಾಪಿಂಗ್ ಎಂದು ಬೀಗುವ ಬುದ್ದಿವಂತ ಪ್ರಜೆಗೂ ವ್ಯತ್ಯಾಸವೇ ಇಲ್ಲದ ಹಾಗಾಯಿತಲ್ಲಾ, ಇದಕ್ಕೇನಂತೀರಿ?

ನಮ್ಮ ನಂಬಿಕೆಯೇ ನಮ್ಮ ಶತ್ರುವಾಗಿ ಪರಿಣಮಿಸುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾದೀತು. ಚಿಟ್ ಫಂಡ್ ಕಂಪನಿಗಳ ತಂತ್ರವೂ ಇದೇ. ಮೊದಲು ನಿಮ್ಮ ವಿಶ್ವಾಸ ಸಂಪಾದಿಸುವುದು, ಆಮೇಲೆ ಆ ವಿಶ್ವಾಸವನ್ನೇ ಆಸ್ತ್ರವಾಗಿಸಿಕೊಂಡು ನಿಮಗೆ ವಂಚನೆ ಮಾಡುವುದು. ನೆನಪಿರಲಿ, ಇಂಥಾ ವಿಷಯಗಳಲ್ಲಿ ಕಾನೂನು ಕೂಡಾ ನಿಮ್ಮ ನೆರವಿಗೆ ಬರುವುದಿಲ್ಲ.

ಆನ್ ಲೈನ್ ಶಾಪಿಂಗ್ ಅನ್ನುವುದು ಈ ಕಾಲ ನಮಗೆ ನೀಡಿದ ಹಲವಾರು ಸವಲತ್ತುಗಳಲ್ಲಿ ಒಂದು ಎಂಬ ಬಗ್ಗೆ ಎರಡು ಮಾತಿಲ್ಲ. ಹಾಗಂತ ಅದಕ್ಕೇ ಜೋತು ಬೀಳುವುದೂ ಒಳ್ಳೆಯದಲ್ಲ. ಯಾಕೆಂದರೆ ಅಲ್ಲಿ ಒಬ್ಬ ಅಗೋಚರ ವ್ಯಾಪಾರಿಯ ಜೊತೆ ನೀವು ವ್ಯವಹಾರ ಮಾಡುತ್ತೀರಿ. ಆತನಿಗೆ ಹೋಲಿಸಿದರೆ ನೀವು ದಿನಾ ಮುಖ ನೋಡುವ, ನಿಮ್ಮ ಮನೆಮುಂದೆಯೇ ಇರುವ ಪುಟ್ಟ ಅಂಗಡಿಯಾತನೇ ಹೆಚ್ಚು ನಂಬಿಕಸ್ತನಾಗಿರುತ್ತಾನೆ. ಅವನನ್ನು ನಂಬಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A majority of consumers have tried online shopping and 'lack of trust' is no longer a barrier to transacting online so, trust still plays a major role But, how do you measure trust in E commerce field after observing Flipkart Big billion Day? Here is and awareness article by Ravi Belagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more