• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆನ್ ಲೈನ್ ಶಾಪಿಂಗು ಎಂಬ ಮೋಹ, ದಾಹ

By ರವಿ ಬೆಳಗೆರೆ
|

"ನಮ್ಮದು ಗುಜರಾತ್ ಮೂಲದ ಅತಿದೊಡ್ಡ ಟೆಕ್ಸ್ ಟೈಲ್ಸ್ ಫ್ಯಾಕ್ಟರಿ. ನಮ್ಮಲ್ಲಿ ತಯಾರಾಗುವ ಉಡುಪುಗಳೆಲ್ಲವೂ ಪರದೇಶಗಳಿಗೆ ರಫ್ತಾಗುತ್ತವೆ. ಆದರೆ ಈ ಬಾರಿ ಗುಜರಾತಲ್ಲಿ ವಿಪರೀತ ಮಳೆ ಬಂದಿದ್ದರಿಂದ ನಮ್ಮ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಉಡುಪುಗಳನ್ನು ರಫ್ತು ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಆ ಉಡುಪುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಕೇವಲ ಇವತ್ತು ಮತ್ತು ನಾಳೆ ಮಾತ್ರ ಈ ಮಾರಾಟ ಇರುತ್ತದೆ, ಇದು ಸ್ಟಾಕ್ ಕ್ಲಿಯರೆನ್ಸ್ ಸೇಲ್. ತ್ವರೆ ಮಾಡಿರಿ".

ಇಂಥಾದ್ದೊಂದು ಕರಪತ್ರ ದಿನಪತ್ರಿಕೆಗಳ ಜೊತೆಗೆ ನಿಮ್ಮ ಮನೆಬಾಗಿಲಿಗೆ ಬಂದು ಬೀಳುತ್ತದೆ. ನೀವು ವಾಸ ಮಾಡುವ ಪ್ರದೇಶದಲ್ಲೇ ಈ ಡಿಸ್ಕೌಂಟ್ ಸೇಲ್ ನಡೆಯುತ್ತಿರುತ್ತದೆ. ಬಟ್ಟೆ ಮಾರಾಟಕ್ಕೆ ಕುಳಿತ ಮಂದಿ ಟೀವಿಯಲ್ಲೋ ಪತ್ರಿಕೆಯಲ್ಲೋ ಜಾಹಿರಾತು ನೀಡುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ ಅದು ಬಹಳ ದುಬಾರಿ ಅನ್ನುವುದು ಅವರಿಗೆ ಗೊತ್ತಿದೆ. ಒಂದು ಪುಟ್ಟ ಕರಪತ್ರದಲ್ಲೇ ಹಸಿಸುಳ್ಳುಗಳನ್ನು ನೀಟಾಗಿ ಪೋಣಿಸಿ ನಿಮ್ಮನ್ನು ಆಕರ್ಷಿಸುವ ತಂತ್ರ ಅವರದು. [ಫ್ಲಿಪ್ ಕಾರ್ಟ್ 'ಬಿಲಿಯನ್ ಡೆ' ಗೆ ಅದ್ಭುತ ಪ್ರತಿಕ್ರಿಯೆ]

ಅಸಲಿಗೆ ಇದು ಗುಜರಾತ್ ಮೂಲದ ಕಂಪನಿಯಾಗಿರುವುದಿಲ್ಲ, ಆ ರಾಜ್ಯದಲ್ಲಿ ಈ ವರ್ಷ ಅಂಥಾ ಮಳೆ ಬಂದಿರುವುದೂ ಇಲ್ಲ. ಮಳೆ ಬರುವುದಕ್ಕೂ, ಬಟ್ಟೆಗಳು ರಫ್ತಾಗದೇ ಇರುವುದಕ್ಕೂ ಯಾವ ಸಂಬಂಧವೂ ಇಲ್ಲ. ಎರಡೇ ದಿನದ ಮಟ್ಟಿಗೆ ಈ ಮಾರಾಟ ಇರುತ್ತದೆ ಅನ್ನುವುದೂ ಸುಳ್ಳು. ಕನಿಷ್ಟ ಒಂದು ವಾರವಾದರೂ ಅವರು ನಿಮ್ಮ ಏರಿಯಾದಲ್ಲೇ ಠಿಕಾಣಿ ಹೂಡಿರುತ್ತಾರೆ.

ಅವರು ಮಾರಾಟ ಮಾಡುವ ವಸ್ತುಗಳೆಲ್ಲವೂ ಅತ್ಯಂತ ಕಳಪೆ ಗುಣಮಟ್ಟದವು. ಅಲ್ಲಿಂದ ನೀವು ಖರೀದಿಸಿದ ಚೂಡಿದಾರ್ ಒಂದು ಸಾರಿ ತೊಳೆಯುವ ಹೊತ್ತಿಗೆ ಕರ್ಚೀಫಿನ ಶೇಪಿಗೆ ಬಂದಿರುತ್ತದೆ. ನೀವು ಮೋಸಹೋಗಿರುವುದು ಗೊತ್ತಾಗುವ ಹೊತ್ತಿಗೆ ಈ ಸೋ ಕಾಲ್ಡ್ ಗುಜರಾತ್ ಫ್ಯಾಕ್ಟರಿ ಜಾಗ ಖಾಲಿ ಮಾಡಿರುತ್ತದೆ. ಬೆಂಗಳೂರಿನ ಮತ್ತೊಂದು ಭಾಗದಲ್ಲಿ ರಾಜಸ್ತಾನದ ಕಂಪನಿ ಎಂದು ಹೆಸರು ಬದಲಾಯಿಸಿಕೊಂಡು ಟೆಂಟು ಹಾಕಿರುತ್ತದೆ. [ಎಲ್ಲಾ ಡೆಬಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ]

ಸಾಮಾನ್ಯವಾಗಿ ಕೆಳಮಧ್ಯಮವರ್ಗದವರು, ಅನಕ್ಷರಸ್ಥ ಕೂಲಿಗಳು, ಕೊಳಚೆಗೇರಿಯಲ್ಲಿ ವಾಸ ಮಾಡುವ ಬಡ ಹೆಣ್ಮಕ್ಕಳು, ಕಟ್ಟಡದ ಕೆಲಸಕ್ಕೆ ಎಂದು ಉತ್ತರ ಕರ್ನಾಟಕದಿಂದ ವಲಸೆ ಬಂದವರು ಈ ಮೋಸಕ್ಕೆ ಬಲಿಯಾಗುತ್ತಾರೆ. ಎಕ್ಸ್ ಪೋರ್ಟ್ ಆಗುವ ಮಾಲು ಕೇವಲ ನೂರು ರುಪಾಯಿಗೆ ಸಿಗುತ್ತದೆ ಅನ್ನುವುದೇ ಅವರಿಗೆ ದೊಡ್ಡ ವಿಚಾರ. ಆದರೆ ವಿದ್ಯಾವಂತರು ಮತ್ತು ಜಾಣರು ಅನಿಸಿಕೊಂಡಿರುವ ನಾವು ಇಂಥಾ ಕರಪತ್ರಗಳನ್ನು ಎಡಗೈನಲ್ಲೂ ಮುಟ್ಟುವುದಿಲ್ಲ. ಅದು ನೇರವಾಗಿ ಕಸದಬುಟ್ಟಿ ಸೇರುತ್ತದೆ.

ಆಕರ್ಷಣೆ ಕಳೆದುಕೊಂಡ ಮಾಲ್ ಗಳು: ಅಷ್ಟೇಕೆ ಬೆಂಗಳೂರಿನ ಉದ್ದಗಲಕ್ಕೂ ತಲೆಎತ್ತಿರುವ ಬಿಗ್ ಬಜಾರ್, ಟೋಟಲ್ ನಂಥಾ ಹತ್ತಾರು ಮಾಲ್ ಗಳೂ ಇದೀಗ ನಮ್ಮನ್ನು ಆಕರ್ಷಿಸುವುದಿಲ್ಲ. ಅಲ್ಲಿ ಬ್ರಾಂಡೆಡ್ ಉಪ್ಪಿನಕಾಯಿ ಸಿಗುವುದಿಲ್ಲ ಅನ್ನುವುದು ನಮ್ಮ ಅಸಮಾಧಾನಕ್ಕೆ ಒಂದು ಕಾರಣ. ಜೊತೆಗೆ ಮೊದಲೇ ಬೆಲೆ ಏರಿಸಿ ಆಮೇಲೆ ಮೂವತ್ತು ಪರ್ಸೆಂಟು ಡಿಸ್ಕೌಂಟ್ ನೀಡಿ ಯಾಮಾರಿಸುತ್ತಾರೆ ಅನ್ನುವ ಅನುಮಾನ. ಅದು ನಿಜವಿದ್ದರೂ ಇರಬಹುದು.

ಅದಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಅನುಮಾನಿಸುವ ಗುಣವನ್ನು ಈ ಮಹಾನಗರಿ ನಮಗೆ ದಯಪಾಲಿಸಿದೆ. ಕಡಿಮೆ ಬೆಲೆಗೆ ಸಿಗುವುದೆಲ್ಲವೂ ಕಳಪೆ ಮಾಲು ಅನ್ನುವ ತೀರ್ಮಾನಕ್ಕೆ ನಾವೆಲ್ಲರೂ ಬಂದಿದ್ದಾಗಿದೆ. ಹಾಗಾಗಿ ಮಾಲುಗಳೂ, ಬಜಾರುಗಳೂ ಈಗ ನಮ್ಮ ಕಣ್ಣಲ್ಲಿ ವಿಶ್ವಾಸಾರ್ಹತೆಯನ್ನು ಕಳಕೊಂಡಿದೆ. ರಸ್ತೆಬದಿಯಲ್ಲಿ ತಯಾರಾಗುವ ಚಪ್ಪಲಿಗೆ ಬಾಟಾ ಎಂಬ ಸೀಲು ಹಾಕಿ ಮಾರಾಟ ಮಾಡುತ್ತಾರೆ ಎಂದು ಜಾಣ ಗಂಡ ತನ್ನ ಹೆಂಡತಿಗೆ ಹೇಳುತ್ತಾನೆ. ಆಕೆ ಅದನ್ನು ನಂಬುತ್ತಾಳೆ. [ಫೇಸ್ ಬುಕ್ ಸದಾ ಇಣುಕಿ ನೋಡಬೇಡಿ: ಆರ್ ಬಿ]

ಶಾಪಿಂಗ್ ಎಂಬ ಅನಿವಾರ್ಯ ಕರ್ಮ: ಇದೆಲ್ಲಾ ಸರಿ, ಆದರೆ ಶಾಪಿಂಗ್ ಎಂಬ ಅನಿವಾರ್ಯ ಕರ್ಮವನ್ನು ಪಾಲಿಸಲೇಬೇಕಲ್ವ, ಅದಕ್ಕೇನು ಮಾಡುತ್ತೀರಿ? ನಾವೆಲ್ಲಾ ಕೊಳ್ಳುಬಾಕ ಸಂಸ್ಕೃತಿಗೆ ಅಡಿಯಾಳುಗಳಾಗಿ ವರ್ಷಗಳೇ ಕಳೆದಿವೆ. ಅಗತ್ಯ ಇಲ್ಲದೇ ಇದ್ದರೂ ಮನೆತುಂಬಾ ಕಂಪ್ಯೂಟರುಗಳು, ಮೊಬೈಲುಗಳು, ನಾನಾ ನಮೂನೆಯ ಟೀವಿಗಳು, ಬಟ್ಟೆಗಳನ್ನು ತುಂಬಲೇ ಬೇಕು. ಇವನ್ನೆಲ್ಲಾ ಎಲ್ಲಿಂದ ತರುತ್ತೀರಿ? ನಮ್ಮದೇನಿದ್ದರೂ ಆನ್ ಲೈನ್ ಶಾಪಿಂಗ್ ಅನ್ನುತ್ತಾನೆ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ತಿಂಗಳಿಗೆ ಲಕ್ಷ ಎಣಿಸುವ ಟೆಕ್ಕಿ. ಮೈ ತುಂಬಾ ಕ್ಯಾಲೊರಿಗಳು ತುಂಬಿಕೊಂಡಿದ್ದರೂ ಮನೆಯ ಎದುರಿಗಿರುವ ಅಂಗಡಿಗೆ ಹೋಗಿ ತನಗೆ ಬೇಕಾದ ವಸ್ತುವನ್ನು ಖರೀದಿಸಿ ತರುವ ಸಹನೆ ಅವನಿಗಿಲ್ಲ.

ಅದಕ್ಕಿಂತ ಹೆಚ್ಚಾಗಿ ಪ್ರೆಸ್ಟೀಜು ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆ. ಆನ್ ಲೈನ್ ಶಾಪಿಂಗಿನಲ್ಲಿ ಖರೀದಿ ಮಾಡುವ ವಸ್ತುಗಳೆಲ್ಲವೂ ಉತ್ಕೃಷ್ಟ ಗುಣಮಟ್ಟದವೇ ಆಗಿರುತ್ತದೆ ಅನ್ನುವ ಗಾಢನಂಬಿಕೆ. ಹಾಗಾಗಿ ಲ್ಯಾಪ್ ಟಾಪ್ ತೆಗೆದು ಯಾವುದೋ ಆನ್ ಲೈನ್ ಕಂಪನಿಯ ವೆಬ್ ಸೈಟಿಗೆ ಹೋಗಿ ತನಗೆ ಬೇಕಾದ ವಸ್ತುಗಳನ್ನು ಬುಕ್ ಮಾಡುತ್ತಾನೆ. ಸಂಜೆ ಹೊತ್ತಿಗೆ ಮನೆಬಾಗಿಲಲ್ಲಿರುವ ಕಾಲಿಂಗ್ ಬೆಲ್ ಟ್ರಿಣ್ ಅನ್ನುತ್ತದೆ. ಅವನು ದಿಲ್ ಖುಶ್.

ಇಂಥಾ ಲಕ್ಷಾಂತರ ಆನ್ ಲೈನ್ ಗಿರಾಕಿಗಳು ಅಕ್ಟೋಬರ್ 6ರ ಶುಭ ಸೋಮವಾರದಂದು ಬೇಸ್ತುಬಿದ್ದರು. ಸದ್ಯಕ್ಕೆ ಎಲ್ಲಾ ಸಾಮಾಜಿಕ ತಾಣಗಳಲ್ಲೂ ಇವರ ಆಕ್ರೋಶದ್ದೇ ಕಾರುಬಾರು. You have cheated me, You have betrayed us, You are a fraud, ಹೀಗೆ ನಾನಾರೀತಿಯ ಬೈಗಳ ಸುರಿಮಳೆ. ಅಷ್ಟಕ್ಕೂ ಆವತ್ತು ಆಗಿದ್ದೇನು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A majority of consumers have tried online shopping and 'lack of trust' is no longer a barrier to transacting online so, trust still plays a major role But, how do you measure trust in E commerce field Here is an explanatory from Ravi Belagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more